ದೆಹಲಿ ಅಬಕಾರಿ ನೀತಿ| ಬಿಆರ್‌ಎಸ್ ನಾಯಕಿ ಕೆ. ಕವಿತಾಗೆ ಸುಪ್ರೀಂ ಜಾಮೀನು

ಕವಿತಾ ಅವರು ಈಗಾಗಲೇ ಐದು ತಿಂಗಳ ಕಾಲ ಜೈಲಿನಲ್ಲಿ ಕಳೆದಿದ್ದಾರೆ. ವಿಚಾರಣೆ ಶೀಘ್ರ ಆರಂಭವಾಗುತ್ತದೆ ಎಂದು ನಿರೀಕ್ಷಿಸಲು ಆಗುವುದಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಅವರಿಗೆ ಜಾಮೀನು ಮಂಜೂರು ಮಾಡಿತು.

Update: 2024-08-27 08:44 GMT

ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್ 27) ಜಾಮೀನು ನೀಡಿದೆ.

ಹಗರಣದಲ್ಲಿ ಕವಿತಾ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ನಿಮ್ಮ ಬಳಿ ಇರುವ ʻಸಾಮಗ್ರಿʼ ಏನು ಎಂಬುದನ್ನು ತೋರಿಸಲು ಇಡಿ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್ ಕೇಳಿದೆ. ಪ್ರಕರಣದ ತನಿಖೆ ಬಗ್ಗೆ ನ್ಯಾಯಾಲಯವು ಎರಡೂ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದೆ.

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರು ಈಗಾಗಲೇ ಐದು ತಿಂಗಳ ಕಾಲ ಜೈಲಿನಲ್ಲಿ ಕಳೆದಿ ದ್ದಾರೆ ಮತ್ತು ʻವಿಚಾರಣೆ ಶೀಘ್ರ ಪ್ರಾರಂಭವಾಗುವ ನಿರೀಕ್ಷೆ ಇಲ್ಲ,ʼ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಹೇಳಿದೆ.

ಕಠಿಣ ಪ್ರಶ್ನೆ ಕೇಳಿದ ಕೋರ್ಟ್:‌ ʻಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ ಕಾನೂನು ಮಹಿಳೆಯರಿಗೆ ವಿಶೇಷ ಅವಕಾಶ ನೀಡುತ್ತದೆ ಎಂದು ನ್ಯಾಯಾಲಯ, ದೆಹಲಿ ಹೈಕೋರ್ಟ್ ಜುಲೈನಲ್ಲಿ ಆಕೆಯ ಮನವಿಯನ್ನು ತಿರಸ್ಕರಿಸಿದ್ದನ್ನು ವಿರೋಧಿಸಿತು.

ಕವಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಆಕೆಯ ವಿರುದ್ಧ ತನಿಖೆಯನ್ನು ಸಿಬಿಐ-ಇಡಿ ಪೂರ್ಣಗೊಳಿ ಸಿವೆ. ಸಹ ಆರೋಪಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಜಾಮೀನು ನೀಡಿದೆ,ʼ ಎಂದರು.

ತನಿಖಾ ಸಂಸ್ಥೆಗಳ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ. ರಾಜು, ಕವಿತಾ ಅವರು ತಮ್ಮ ಮೊಬೈಲ್ ಫೋನ್ ನಾಶಪಡಿಸಿದ್ದಾರೆ/ ಫಾರ್ಮ್ಯಾಟ್ ಮಾಡಿದ್ದಾರೆ. ಅವರ ವರ್ತನೆ ಸಾಕ್ಷ್ಯವನ್ನು ತಿರುಚುವಂತಿದೆ,ʼ ಎಂದು ಹೇಳಿದರು.

ರೋಹಟಗಿ ಈ ಆರೋಪವನ್ನು ʻಬೋಗಸ್ʼ ಎಂದು ಕರೆದರು.

ʻಆಕೆ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಲು ಸಾಕ್ಷ್ಯ ಏನಿದೆ?ʼ ಎಂದು ಪೀಠ ರಾಜು ಅವರನ್ನು ಕೇಳಿತು.

ಕವಿತಾ ವಿರುದ್ಧ ಆರೋಪ: ದೆಹಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯಲ್ಲಿ ಕವಿತಾ ಅವರು ಪ್ರಮುಖ ಸಂಚುಗಾರರಲ್ಲಿ ಒಬ್ಬರು ಎಂದು ಆರೋಪಿಸಲಾಗಿದೆ. ಕವಿತಾ ಅವರ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಅವರನ್ನು ಇಡಿ ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಬಂಧಿಸಿತು. ಸಿಬಿಐ ಏಪ್ರಿಲ್ 11 ರಂದು ತಿಹಾರ್ ಜೈಲಿನಿಂದ ಅವರನ್ನು ಬಂಧಿಸಿತು.

Tags:    

Similar News