ಸಿರೋಹಿ: ಟ್ರಕ್‌- ಜೀಪ್ ಡಿಕ್ಕಿ, 8 ಮಂದಿ ಸಾವು

Update: 2024-09-16 06:15 GMT

ಜೈಪುರ: ರಾಜಸ್ಥಾನದ ಸಿರೋಹಿ ಜಿಲ್ಲೆಯ ಪಿಂಡ್ವಾರಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಜೀಪೊಂದು ಟ್ರಕ್‌ಗೆ ಡಿಕ್ಕಿ ಹೊಡೆದು, ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಕಿಕ್ಕಿರಿದು ತುಂಬಿದ್ದ ಜೀಪ್ ರಾಂಗ್ ಸೈಡ್ ನಲ್ಲಿ ಚಲಿಸುತ್ತಿತ್ತು. ಗಾಯಗೊಂಡ 18 ಮಂದಿಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸಿರೋಹಿ ಎಸ್ಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಮೃತರಲ್ಲಿ ಐವರು ಪುರುಷರು, ಒಂದು ಮಗು ಮತ್ತು ಇಬ್ಬರು ಮಹಿಳೆಯರು ಇದ್ದಾರೆ ಎಂದು ಪಿಂಡ್ವಾಡ ಪೊಲೀಸ್ ಠಾಣೆ ಎಸ್‌ಎಚ್‌ಒ ಹಮೀರ್ ಸಿಂಗ್ ತಿಳಿಸಿದ್ದಾರೆ. 

Tags:    

Similar News