Exclusive| ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯತ್ತ ಶೇನ್ ವಾಟ್ಸನ್ ಕಣ್ಣು!
ʻದಿ ಫೆಡರಲ್ʼಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ಸಹಾಯಕ ಕೋಚ್ ಆಗಿದ್ದ ವ್ಯಾಟ್ಸನ್ ಅವರು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡದ ಮುಖ್ಯ ಕೋಚ್ ಸ್ಥಾನ ವಹಿಸಿಕೊಳ್ಳಲೂ ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್, ತಾವು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನವನ್ನು ಅಲಂಕರಿಸಲು ಸಿದ್ಧ ಎಂದು ಹೇಳಿದ್ದಾರೆ.
ʻದಿ ಫೆಡರಲ್ʼಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ಸಹಾಯಕ ಕೋಚ್ ಆಗಿದ್ದ ವ್ಯಾಟ್ಸನ್ ಅವರು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡದ ಮುಖ್ಯ ಕೋಚ್ ಸ್ಥಾನ ವಹಿಸಿಕೊಳ್ಳಲೂ ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ, ಪಾಕಿಸ್ತಾನದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ವರದಿಯಾಗಿತ್ತು. ಆದರೆ, ಅವರು ಸಮ್ಮತಿಸಲಿಲ್ಲ. ವ್ಯಾಟ್ಸನ್ ಈ ವರ್ಷ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್‌ನ ಮುಖ್ಯ ಕೋಚ್ ಆಗಿದ್ದರು.ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ)ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್‌ನ ಮುಖ್ಯ ತರಬೇತುದಾರ ಆಗಿದ್ದಾರೆ.
2024ರವರೆಗೆ ದ್ರಾವಿಡ್: ರಾಹುಲ್ ದ್ರಾವಿಡ್ ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ವರೆಗೆ ಅವಧಿ ವಿಸ್ತರಿಸಲಾಗಿದೆ. 2023ರ ಐಸಿಸಿ ವಿಶ್ವಕಪ್ ನಂತರ ಅವರ ಎರಡು ವರ್ಷಗಳ ಒಪ್ಪಂದ ಕೊನೆಗೊಂಡಿತು. ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಸ್ಥಾನ ಗಳಿಸಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರನ್ನು ಮತ್ತು ಉಳಿದ ಸಹಾಯಕ ಸಿಬ್ಬಂದಿಯನ್ನು ಉಳಿಸಿಕೊಂಡಿತು. ಅವರು ಜೂನ್ 2 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಮುಗಿಯುವರೆಗೆ ಇರುವ ಸಾಧ್ಯತೆಯಿದೆ.
ʻನಾನು ತರಬೇತಿ ನೀಡುವಿಕೆಯನ್ನು ಪ್ರೀತಿಸುತ್ತೇನೆ. ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಪಡೆದ ಕೋಚಿಂಗ್ ಅವಕಾಶ, ರಿಕಿ ಪಾಂಟಿಂಗ್‌ಗೆ ಸಹಾಯಕ (ಕೋಚ್) ಆಗಿ ಕರ್ತವ್ಯ ನಿರ್ವಹಣೆ, ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಮತ್ತು ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಮುಖ್ಯ ತರಬೇತುದಾರನಾಗಿ ಕಾರ್ಯ ನಿರ್ವಹಿಸಿದ್ದೇನೆ,ʼ ಎಂದು ಎರಡು ವಿಶ್ವಕಪ್ ಮತ್ತು ಎರಡು ಐಪಿಎಲ್ ಪ್ರಶಸ್ತಿ ಗೆದ್ದ ತಂಡದ ಸದಸ್ಯರಾಗಿದ್ದ ವ್ಯಾಟ್ಸನ್(42) ʼದ ಫೆಡರಲ್ʼಗೆ ತಿಳಿಸಿದರು..
ʻನಾನು ಪುಸ್ತಕ (ದಿ ವಿನ್ನರ್ಸ್ ಮೈಂಡ್‌ಸೆಟ್) ಬರೆದಿದ್ದಕ್ಕೆ ಕಾರಣಗಳಲ್ಲಿ ಒಂದು- ಜನರು ಇನ್ನಷ್ಟು ಉತ್ತಮ ಸಾಧನೆ ಮಾಡಲು ಸಾಧ್ಯ ವಿರುವುದನ್ನೆಲ್ಲ ಮಾಡುವುದು. ತರಬೇತಿದಾರನಿಗೆ ತಂಡದ ವ್ಯಕ್ತಿಗಳೊಂದಿಗೆ ಪ್ರತಿದಿನ ಸಂವಹನ ನಡೆಸಲು ಅವಕಾಶ ಇರುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮುಖ್ಯ ಕೋಚ್ ಆಗಲು ಇಷ್ಟಪಡುತ್ತೇನೆ. ನಿಸ್ಸಂಶಯವಾಗಿ, ಭಾರತೀಯ ಕ್ರಿಕೆಟ್ ನಲ್ಲಿ ಅಪಾರ ಪ್ರತಿಭೆ, ಕೌಶಲಗಳ ಸಮೃದ್ಧಿಯಿದೆ ಮತ್ತು ಇದು ಅತಿ ವಿಶೇಷವಾದುದು. ಅತ್ಯುತ್ತಮ ಕ್ರಿಕೆಟ್ ಆಟಗಾರರೊಂದಿಗೆ ಕೆಲಸ ಮಾಡಲು ನೀವು ಬಯಸುತ್ತೀರಾದರೆ, ಭಾರತೀಯ ತಂಡ ಅಂಥ ಅವಕಾಶವನ್ನು ನೀಡುತ್ತದೆʼ ಎಂದು ಹೇಳಿದರು.