Shah Rukh Khan: ಮಾನವೀಯತೆಯ ಪ್ರತಿರೂಪದಂತಿರುವ ʼಕಿಂಗ್‌ ಖಾನ್‌ʼ

ಬಾಲಿವುಡ್‌ಗೆ ದಿನಕ್ಕೊಂದರಂತೆ ಪ್ರತಿಭೆಗಳ ಪ್ರವೇಶ ಆಗುತ್ತಿವೆ. ಆದರೆ ಅವರ ಖ್ಯಾತಿ ಸೀಮಿತ ಆದರೆ ಶಾರುಖ್‌ ಹಾಗಲ್ಲ. ಮೊದಲ ದಿನದಂದು ಪಡೆದುಕೊಂಡಿರುವ ಸ್ಟಾರ್‌ಡಮ್‌ ಈಗಲೂ ಉಳಿಸಿಕೊಂಡಿದ್ದಾರೆ.;

Update: 2024-11-14 08:56 GMT
ಶಾರುಖ್‌ ಖಾನ್‌

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಶನಿವಾರ (ನವೆಂಬರ್ 2) 59ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 60 ವರ್ಷ ವಯಸ್ಸಿನ ಕಿಂಗ್‌ ಖಾನ್‌ ಬಾಲಿವುಡ್‌ನಲ್ಲಿ ತಮ್ಮ ದರ್ಬಾರ್‌ ಮುಂದುವರಿಸಿದ್ದಾರೆ. ʼಪಠಾಣ್‌ʼ ಮತ್ತು ʼಜವಾನ್‌ʼ ಯಶಸ್ಸಿನ ಬಳಿಕ ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳೊಂದಿಗೆ ಮೋಡಿ ಮಾಡಲಿದ್ದಾರೆ. 59ನೇ ವಯಸ್ಸಿನಲ್ಲಿಯೂ ಶಾರುಖ್ ಖಾನ್ ಅವಿರತ ದುಡಿಮೆ ಮುಂದುವರಿಸಿದ್ದರು ಹಾಗೂ ಸೋಲಿನ ಛಾಯೆಯನ್ನು ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ. ಹೀಗಾಗಿ ಅವರು ಭಾರತೀಯ ಸಿನಿಮಾ ಕ್ಷೇತ್ರದ ನಂಬರ್ ಒನ್ ಸ್ಟಾರ್‌ ಎನಿಸಿಕೊಂಡಿದ್ದಾರೆ. ಅವರು ದಿನದಿನಕ್ಕೆ ತಮ್ಮ ರಾಯಲ್ಟಿ ಹೆಚ್ಚಿಸಿಕೊಳ್ಳುವ ಜತೆಗೆ ತಮ್ಮ ಇರುವಿಕೆ ವಿಭಿನ್ನ ಎಂಬುದನ್ನು ಪ್ರತಿ ಬಾರಿಯೂ ಸಾಬೀತು ಮಾಡುತ್ತಾರೆ. ಅದರಲ್ಲೂ ಪ್ರತಿ ಕ್ಷಣದಲ್ಲೂ ಮಾನವೀಯ ಮುಖದಂತೆ ಕಾಣುತ್ತಿದ್ದಾರೆ.

'ಬಾಲಿವುಡ್‌ ಎಂಬ ಚಂಚಲ ಕ್ಷೇತ್ರಕ್ಕೆ ದಿನಕ್ಕೊಂದರಂತೆ ಪ್ರತಿಭೆಗಳ ಪ್ರವೇಶಿಸುತ್ತಿವೆ. ಆದರೆ ಅವರ ಖ್ಯಾತಿ ಸೀಮಿತ ದಿನಗಳದ್ದು. ಹೊಸಬರು ಬರುತ್ತಾರೆ ಕೆಲವೇ ದಿನಗಳಲ್ಲಿ ಮರೆಯುತ್ತಾರೆ. ಆದರೆ ಶಾರುಖ್‌ ಹಾಗಲ್ಲ. ಮೊದಲ ದಿನದಂದು ಪಡೆದುಕೊಂಡಿರುವ ಸ್ಟಾರ್‌ಡಮ್‌ ಈಗಲೂ ಉಳಿಸಿಕೊಂಡಿದ್ದಾರೆ. ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದ್ದಾರೆ. 90ರ ದಶಕದಲ್ಲಿ ರೊಮ್ಯಾಂಟಿಕ್‌ ಹೀರೊ ಆಗಿದ್ದರೆ ಇತ್ತೀಚಿನ ವರ್ಷಗಳಲ್ಲಿ ಹೈ-ಆಕ್ಟೇನ್ ಥ್ರಿಲ್ಲರ್‌ ಸಿನಿಮಾಗಳ ಪ್ರಮುಖ ಪಾತ್ರವಾಗುತ್ತಿದ್ದಾರೆ.

ತನ್ನದೇ ಛಾಪು ಸೃಷ್ಟಿಸಿಕೊಂಡಿರುವ ಕಿಂಗ್‌

ಶಾರುಖ್‌ ಖಾನ್ ತಮ್ಮ ಪ್ರೇಕ್ಷಕರಿಗೆ ದಶಕಗಳಿಂದ ಮನರಂಜನೆ ನೀಡುತ್ತಲೇ ಇದ್ದಾರೆ. ಡರ್ (1993) ಸಿನಿಮಾದಲ್ಲಿ ಹುಟ್ಟಿಸಿದ್ದ ಗೀಳನ್ನು ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ (1995) ಮುಂದುವರಿಸಿದ್ದರು. ಖಾನ್‌ ತಮ್ಮ ಪಾತ್ರಗಳನ್ನು ಇತರ ನಟರು ಅನುಕರಿಸುವಂತೆ ಮಾಡಿದ್ದರು. ಹೊಸ ತಲೆಮಾರಿನ ಜನರು ಮೆಚ್ಚವಂಥ ಹಲವಾರು ಪಾತ್ರಗಳನ್ನುಅವರು ಮಾಡಿದ್ದರು.

ಶಾರುಖ್‌ ಅವರು ಬದಲಾವಣೆಗಳನ್ನು ಒಪ್ಪಿಕೊಂಡವರು. ಅವರ ಯಶಸ್ಸು ಕೇವಲ ಅದೃಷ್ಟದ ಕೊಡುಗೆಯಲ್ಲ. ಎಚ್ಚರಿಕೆಯಿಂದ ತಾವೇ ರೂಪಿಸಿದ ವ್ಯಕ್ತಿತ್ವದ ಫಲ. ನಟನೆಯಲ್ಲಿ ಅವರ ಅಂತರ್ಗತ ಸಾಮರ್ಥ್ಯ ಮತ್ತು ತಮ್ಮ ತಮ್ಮ ಕಲೆಗಾರಿಕೆಯಲ್ಲಿ ಅವರು ಹೊಂದಿರುವ ವಿಶ್ವಾಸವು ಅವರನ್ನು ಎತ್ತರಕ್ಕೆ ಏರಿಸಿದೆ. ಶಾರುಖ್ ಖಾನ್ ಬಾಲಿವುಡ್ ಶ್ರೇಷ್ಠರಾದ ರಾಜೇಶ್ ಖನ್ನಾ ಮತ್ತು ದಿಲೀಪ್ ಕುಮಾರ್ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು.

ಮೈ ಹೂ ನಾ (2004) ಸಿನಿಮಾದ ʼಮೇಜರ್‌ ರಾಮ್‌ʼ ಪಾತ್ರ, ಪಾಕಿಸ್ತಾನಿ ಮಹಿಳೆಯನ್ನು ಪ್ರೀತಿಸುವ ಭಾರತೀಯ ವಾಯುಪಡೆಯ ಅಧಿಕಾರಿ ವೀರ್ ಪಾತ್ರವನ್ನು ಮಾಡಿದ ವೀರ್-ಜರಾ (2004) ಸಿನಿಮಾವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಒಂದು ವ್ಯಕ್ತಿತ್ವವನ್ನು ತಮ್ಮ ಪಾತ್ರದಲ್ಲಿ ತುಂಬುವ ಮತ್ತು ಅದರನ್ನು ಮುಂದಿನ ಪೀಳಿಗೆಗೆ ದಾಟಿಸುವ ಸಾಮರ್ಥ್ಯ ಅವರಿಗೆ ಕರಗತವಾಗಿದೆ.

ಡಾನ್ (2006) ರಲ್ಲಿ ಶಾರುಖ್‌ ತಮ್ಮ ರೊಮ್ಯಾಂಟಿಕ್‌ ಹೀರೊ ಪಾತ್ರವನ್ನು ಕೈಬಿಟ್ಟು ನಿರ್ದಯ ಡಾನ್‌ ಆಗುತ್ತಾರೆ. ಈ ಚಿತ್ರದಲ್ಲಿ, ಶಾರುಖ್ ಕೆಟ್ಟದನ್ನು, ಹೆಚ್ಚು ತರ್ಕಬದ್ಧವಾಗಿ ಪರಿವರ್ತಿಸುತ್ತಾರೆ. ನಿಂದಿಸುವ ಸರಳ ಕ್ರಿಯೆಯನ್ನು ಉನ್ನತ ಕಲೆಯಾಗಿ ಅವರು ಬದಲಾಯಿಸಿದ್ದರು. .

'ಕಿಂಗ್ ಆಫ್ ರೊಮ್ಯಾನ್ಸ್'

ಕಿಂಗ್ ಆಫ್ ರೊಮ್ಯಾನ್ಸ್ ಎಂಬ ಬಿರುದನ್ನು ಪಡೆದುದಕ್ಕೂ ಹಿನ್ನೆಲೆಯಿದೆ. ʼದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆʼ ಸಿನಿಮಾದಲ್ಲಿ ರಾಜ್ ಪಾತ್ರ ಮಾಡಿರುವ ಅವರು ಪಂಜಾಬಿನ ಸಾಸಿವೆ ಹೊಲಗಳಲ್ಲಿ ತಮ್ಮ ತೋಳುಗಳನ್ನು ಅಗಲವಾಗಿ ತೆರೆದಿಟ್ಟು ನಿಂತು ಪ್ರೀತಿಗಾಗಿ ಆಹ್ವಾನ ಕೊಟ್ಟಿದ್ದರು. ಅವರ 'ಬಡೇ ಬಡೇ ದೇಶೋ ಮೇ ಐಸಿ ಚೋಟಿ ಚೋಟಿ ಬಾತೇನ್ ಹೋತಿ ರೆಹ್ತಿ ಹೈ' ಎಂಬ ಸಾಲುಗಳನ್ನು ಕಾವ್ಯವೇ ಆಗಿದೆ. ಪ್ರೇಕ್ಷಕರನ್ನು ಸೆಳೆಯುವ ಅವರ ಸಾಮರ್ಥ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

ಶಾರುಖ್ ಅವರ ದೊಡ್ಡ ಆಸ್ತಿ, ನಿಸ್ಸಂದೇಹವಾಗಿ ಹಾಸ್ಯ ಪ್ರಜ್ಞೆ. ಚೆನ್ನೈ ಎಕ್ಸ್‌ಪ್ರೆಸ್‌ (2013) ಚಿತ್ರದಲ್ಲಿ, 'ಸಾಮಾನ್ಯ ಮನುಷ್ಯನ ಶಕ್ತಿಯನ್ನು ಕಡೆಗಣಿಸಬೇಡಿ' ಎಂಬ ಅವರ ಹಾಸ್ಯಮಯ ಸಾಲುಗಳು ಜನಪ್ರಿಯವಾಯಿತು. ಸಿನಿಮಾದಿಂದ ಸಿನಿಮಾಕ್ಕೆ ಅವರ ಪಾತ್ರ ಪ್ರವೇಶ ವಿಭಿನ್ನವಾಗಿತ್ತು. ಬುದ್ಧಿವಂತಿಕೆಯನ್ನು ಆಯುಧದಂತೆ ಹೇಗೆ ಬಳಸುವುದು ಎಂಬುದು ಶಾರುಖ್‌ಗೆ ಗೊತ್ತಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ಶಾರುಖ್ ಅವರನ್ನು ನಿಜವಾಗಿಯೂ ಅಪ್ರತಿಮವಾಗಿಸುವುದು ಅವರಿಗಿರುವ ಮಾನವೀಯತೆಯ ಅರಿವು. ಅವರ ಪಾತ್ರಗಳು ದೊಡ್ಡದಾಗಿದ್ದರೂ ಸರಳ, ಸಾರ್ವತ್ರಿಕ ಸತ್ಯಗಳನ್ನು ಆಧರಿಸಿವೆ. ಮೈ ನೇಮ್ ಈಸ್ ಖಾನ್ (2010) ಚಿತ್ರದಲ್ಲಿ, ಅವರು ರಿಜ್ವಾನ್ ಖಾನ್ ಎಂಬ ಆಸ್ಪರ್ಗರ್ ಸಿಂಡ್ರೋಮ್ ಹೊಂದಿರುವ ವ್ಯಕ್ತಿಯಾಗಿದ್ದಾರೆ. 'ನನ್ನ ಹೆಸರು ಖಾನ್, ನಾನು ಭಯೋತ್ಪಾದಕನಲ್ಲ' ಎಂಬ ಮಾತುಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

ತನ್ನದೇ ಲೋಕದ ನಕ್ಷತ್ರ

ಅವರ ಇತ್ತೀಚಿನ ಸಿನಿಮಾಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಬೇರೆ ಬೇರೆ ವಿಧದಲ್ಲಿ ಪ್ರದರ್ಶಿಸಿದ್ದಾರೆ. ಜವಾನ್‌, ಪಠಾಣ್‌ ಎಲ್ಲದರಲ್ಲೂ ಅವರು ತೀಕ್ಷ್ಣ ವಿಷಯವನ್ನು ಪ್ರೇಕ್ಷಕರ ಮನ ಮುಟ್ಟಿಸಿದ್ದಾರೆ. ರಾಜ್‌ಕುಮಾರ್‌ ಹಿರಾನಿಯ ʼಡಂಕಿʼ ಸಿನಿಮಾದಲ್ಲಿ ವಲಸೆ ಸಮಸ್ಯೆಯನ್ನು ಬಣ್ಣಿಸಿದ್ದಾರೆ.

60 ರ ಹೊಸ್ತಿಲಲ್ಲಿರುವ ಶಾರುಖ್ ತಮ್ಮ ವಿಶಿಷ್ಟ ಶೈಲಿಗೆ ಈಗಲೂ ನಿಷ್ಠರಾಗಿದ್ದಾರೆ. ಗೂಢಚಾರಿ, ಪ್ರೇಮಿ, ಹಾಸ್ಯನಟ ಅಥವಾ ಅಪರಾಧಿಯಾಗಿ ನಟಿಸಲಿ ಅವರು ಖ್ಯಾತಿಗೆ ಚ್ಯುತಿ ತಂದುಕೊಳ್ಳುವುದಿಲ್ಲ.

ವಿನಮ್ರ, ಮಾನವೀಯ

ಶಾರುಖ್‌ ಅವರನ್ನು ಇಂದು ಈ ಎತ್ತರಕ್ಕೆ ಕೊಂಡೊಯ್ದಿರುವುದು ಅವರ ಮಾನವೀಯತೆ. ಮಾನವೀಯ ಗುಣಗಳ ಪ್ರಸ್ತುತಿ. ಅವರಲ್ಲಿರುವ ಸಹಾನುಭೂತಿ ಮತ್ತು ಔದಾರ್ಯದ ಪ್ರಜ್ಞೆ. ಪಾತ್ರ ಮತ್ತು ಅದನ್ನು ಹೊರತುಪಡಿಸಿ ಪ್ರತಿ ಕ್ಷಣದಲ್ಲೂ ಪ್ರೀತಿಯ ಮಳೆಗೈದಿದ್ದಾರೆ.

ಸಿನಿಮಾ ಕ್ಷೇತ್ರದ ಹೊರಗಡೆ ಅವರು ತನ್ನ ಚಾಣಾಕ್ಷತನ, ಹಾಸ್ಯ ಮತ್ತು ನಮ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರ ನಿಷ್ಕಪಟ ಸ್ವಯಂ ಪ್ರಜ್ಞೆಗಳು ಅವರ ಸಂದರ್ಶನಗಳಲ್ಲಿ ಪ್ರತಿಫಲನಗೊಂಡಿವೆ. ಇದು ಅವರ ವಿನೋದದ ಮನಸ್ಸನ್ನು ಬಹಿರಂಗಪಡಿಸಿದೆ. ವೇಷಭೂಷಣವಿಲ್ಲದ ಬುದ್ಧಿಜೀವಿಯಾಗಿರುವ ಅವರು ಪ್ರೇಕ್ಷಕರನ್ನು ಅಪಾರ ಗೌರವದಿಂದ ಕಾಣುತ್ತಾರೆ. ನಿಷ್ಠಾವಂತ ತಂದೆ ಮತ್ತು ಪತಿ ಎಂಬುದನ್ನೂ ಸಾಬೀತು ಮಾಡಿದ್ದಾರೆ.

ಒಬ್ಬರನ್ನು ನಾನಾ ರೀತಿಯಲ್ಲಿ ಅಳೆಯುವ ಸಮಾಜ ಇಂದಿನದು. ಆದರೆ ಶಾರುಖ್ ಎಂದಿಗೂ ತಮ್ಮ ವ್ಯಕ್ತಿತ್ವವನ್ನು ಅಳೆಯುವ ಅವಕಾಶ ಕೊಟ್ಟಿಲ್ಲ. ಸೆಲೆಬ್ರಿಟಿಗಳಲ್ಲಿ ಕಣ್ಮರೆಯಾಗುತ್ತಿರುವ ಪ್ರೀತಿಯನ್ನು ಅವರು ಎಲ್ಲರ ಬಳಿ ತುಂಬಿದ್ದಾರೆ. ಆಕ್ಷನ್ ಸ್ಟಾರ್ ಮತ್ತು ಸವಾಲು, ಸ್ಫೂರ್ತಿ ಮತ್ತು ಮನರಂಜನೆ ಮುಂದುವರಿಸುತ್ತಿದ್ದಾರೆ.

ಶಾರುಖ್‌ ಅವರು ತಮ್ಮ ಚಿತ್ರಗಳ ಒಟ್ಟು ಸಂಖ್ಯೆಗಿಂತ ಆ ಸಿನಿಮಾಗಳಲ್ಲಿ ಒಂದು ಭಾವನೆಯಾಗಿದ್ದಾರೆ. ಚಲನಚಿತ್ರವು ಕೇವಲ ದೃಶ್ಯ ಕಾವ್ಯವಲ್ಲ. ಅದು ಲಕ್ಷಾಂತರ ಜನರಿಗೆ ಕನ್ನಡಿ. ಕನಸುಗಾರ, ಪ್ರೇಮಿ, ಹೋರಾಟಗಾರ ಶಾರುಖ್‌ಗೆ ಇನ್ನೂ ಕ್ಷೇತ್ರದಲ್ಲಿ ಮಿಂಚುವ ಅವಕಾಶವಿದೆ.  

(ನವೈದ್‌ ಅಂಜುಮ್‌ ಅವರು ʼದ ಫೆಡರಲ್‌ʼನ ಫೀಚರ್‌ ಎಡಿಟರ್.‌ ಅವರು ಶಾರುಖ್‌ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬರೆದ ಲೇಖನದ ಸಾರ ಸಂಗ್ರಹವನ್ನು ಇಲ್ಲಿ ಪ್ರಕಟಿಸಲಾಗಿದೆ) 

Tags:    

Similar News