ದೆಹಲಿ ಬೆಂಕಿ ಅವಘಡಕ್ಕೆ 7 ನವಜಾತ ಶಿಶುಗಳು ಬಲಿ

Update: 2024-05-26 04:36 GMT

ಪೂರ್ವ ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ಆಸ್ಪತ್ರೆಯಲ್ಲಿ  ಶನಿವಾರ ರಾತ್ರಿ ಘಟಿಸಿದ ಬೆಂಕಿ ಅವಘಡದಲ್ಲಿ  ಏಳು ನವಜಾತ ಶಿಶುಗಳು ಸಾವನ್ನಪ್ಪಿವೆ. 

ಶನಿವಾರ (ಮೇ 26) ರಾತ್ರಿ ಶಹದಾರದಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ಅಧಿಕಾರಿಗಳು ತಿಳಿಸಿದ್ದಾರೆ.  ಹನ್ನೆರಡು ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ ಆದರೆ ಅವರಲ್ಲಿ ಏಳು ಶಿಶುಗಳು ಮರಣಹೊಂದಿವೆ  ಎಂದು ಡಿಎಫ್‌ಎಸ್ ಮುಖ್ಯಸ್ಥ ಅತುಲ್ ಗಾರ್ಗ್ ಹೇಳಿದ್ದಾರೆ.

ಇನ್ನು ಐದು ಮಕ್ಕಳು ಸದ್ಯ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿ ಅಗ್ನಿಶಾಮಕ ಸೇವೆಯು ರಾತ್ರಿ 11.32 ಕ್ಕೆ ಕರೆ ಸ್ವೀಕರಿಸಿದೆ ಮತ್ತು 9 ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಧಾವಿಸಲಾಗಿದೆ ಎಂದು ಹೇಳಿದರು. ಗರ್ಗ್ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

"ವಿವೇಕ್ ವಿಹಾರ್ ಪ್ರದೇಶದ ಐಟಿಐ, ಬ್ಲಾಕ್ ಬಿ ಬಳಿ ಇರುವ ಬೇಬಿ ಕೇರ್ ಸೆಂಟರ್‌ನಿಂದ ಅಗ್ನಿಶಾಮಕ ಕರೆ ಸ್ವೀಕರಿಸಲಾಗಿದೆ. ಒಟ್ಟು ಒಂಬತ್ತು ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಗಿದೆ" ಎಂದು ಗಾರ್ಗ್ ಹೇಳಿದರು.

ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ಜನನಿಬಿಡ ಆಟದ ವಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಕಟ್ಟಡ ಕುಸಿದು ಕನಿಷ್ಠ 27 ಜನರು ಸಾವನ್ನಪ್ಪಿದ ದಿನದಂದು ಈ ಘಟನೆ ನಡೆದಿದೆ.

Tags:    

Similar News