Salman Khan | ಮತ್ತೊಂದು ಕೊಲೆ ಬೆದರಿಕೆ: ಈ ಬಾರಿ ಹಾಡಿನ ಮೂಲಕ ಎಚ್ಚರಿಕೆ
ಗುರುವಾರ ಮಧ್ಯರಾತ್ರಿಯ ವೇಳೆ ಮುಂಬೈ ಪೊಲೀಸರ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ಸರಣಿ ಬೆದರಿಕೆಗಳ ನಂತರ ಎದುರಾಗಿರುವ ಮತ್ತೊಂದು ಭದ್ರತಾ ಆತಂಕವಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಿರಂತರ ಕೊಲೆ ಬೆದರಿಕೆ ಪಡೆಯುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಗುರುವಾರ (ನವೆಂಬರ್ 7) ಮಧ್ಯರಾತ್ರಿ ಮತ್ತೊಂದು ಜೀವ ಬೆದರಿಕೆ ಸಂದೇಶ ಬಂದಿದೆ. ಅವರನ್ನು ಹತ್ಯೆ ದುಷ್ಕರ್ಮಿಗಳು ಬೆದರಿಕೆ ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಈ ಬಾರಿ ಹಾಡಿನ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಮುಂಬೈ ಮಹಾನಗರದ ವರ್ಲಿ ಪೊಲೀಸರು ಸ್ಟಾರ್ ನಟನಿಗೆ ಬೆದರಿಕೆ ಒಡ್ಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಗುರುವಾರ ರಾತ್ರಿ ಮುಂಬೈ ಟ್ರಾಫಿಕ್ ಕಂಟ್ರೋಲ್ ರೂಂಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದಿದೆ. ಹಾಡಿನ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಹಾಡಿನಲ್ಲಿ ಬಿಷ್ಣೋಯ್ ಹಾಗೂ ಸಲ್ಮಾನ್ ಹೆಸರುಗಳಿವೆ. ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಲ್ಮಾನ್ ಖಾನ್‌ಗೆ ಒಡ್ಡಿರುವ ಹೊಸ ಬೆದರಿಕೆಯ ವಿವರಗಳು ಇನ್ನೂ ಖಚಿತವಾಗಿಲ್ಲ. ಮೂಲಗಳ ಪ್ರಕಾರ ಯಥಾ ಪ್ರಕಾರ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿಯೇ ಯಾರೋ ಬೆದರಿಕೆ ಒಡ್ಡಿದ್ದಾರೆ. ಜೈಲಿನಲ್ಲಿರುವ ಬಿಷ್ಣೋಯ್ ಹೆಸರಲ್ಲಿ ಸತತವಾಗಿ ಬೆದರಿಕೆ ಒಡ್ಡಲಾಗುತ್ತಿದೆ.
ಗುರುವಾರ ಮಧ್ಯರಾತ್ರಿಯ ವೇಳೆ ಮುಂಬೈ ಪೊಲೀಸರ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ಸರಣಿ ಬೆದರಿಕೆಗಳ ನಂತರ ಎದುರಾಗಿರುವ ಮತ್ತೊಂದು ಭದ್ರತಾ ಕಾಳಜಿಯಾಗಿದೆ.
ಬೆದರಿಕೆ ಸಂದೇಶದಲ್ಲಿ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಬಿಷ್ಣೋಯ್ ಇಬ್ಬರ ಹೆಸರನ್ನು ಹೆಸರಿಸುವ ಹಾಡೊಂದನ್ನು ಕಳುಹಿಸಲಾಗಿದೆ. ಒಂದು ತಿಂಗಳೊಳಗೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಡಿನ ಮೂಲಕ ಹೇಳಲಾಗಿದೆ. ಸಲ್ಮಾನ್ ಖಾನ್ ಅವರಿಗೆ ಧೈರ್ಯವಿದ್ದರೆ ಅವರನ್ನು ರಕ್ಷಿಸಲಿ ಎಂದು ನೇರವಾಗಿ ಸಲ್ಮಾನ್ ಖಾನ್ ಗೆ ಸವಾಲು ಹಾಕುವ ಮೂಲಕ ಸಂದೇಶ ಕಳುಹಿಸಲಾಗಿದೆ.
ಇದಕ್ಕೂ ಮುನ್ನ ನವೆಂಬರ್ 5ರಂದು ಮುಂಬೈ ಪೊಲೀಸರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಟ ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಬೆದರಿಕೆಯ ಮೂಲಕ ಕೃಷ್ಣ ಮೃಗ ಕೊಂದಿರುವ ಆರೋಪ ಹೊತ್ತಿರುವ ನಟನಿಗೆ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಬಿಷ್ಣೋಯ್ ಸಮಾಜದ ಕ್ಷಮೆಯಾಚಿಸಿ ಅಥವಾ ಅವರ ಸುರಕ್ಷಿತವಾಗಿರಲು 5 ಕೋಟಿ ರೂಪಾಯಿ ಕೊಡಬೇಕು ಎಂದು ಸಂದೇಶದಲ್ಲಿ ಹೇಳಲಾಗಿತ್ತು.
ಶಾರುಖ್‌ಗೂ ಬೆದರಿಕೆ, ಪೊಲೀಸರಿಗೆ ತಲೆ ಬಿಸಿ
ಸಲ್ಮಾನ್ ಖಾನ್ ಜತೆಗೆ ಇದೀಗ ಬಾಲಿವುಡ್ ಬಾದ್ ಶಾ ಶಾರುಖ್‌ಗೂ ಕೊಲೆ ಬೆದರಿಕೆಗಳು ಬರಲು ಆರಂಭಿಸಿವೆ. 50 ಲಕ್ಷ ರೂಪಾಯಿ ಕೊಡಬೇಕು ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆಯಲ್ಲಿ ಬರೆಯಲಾಗಿದೆ. ಸಲ್ಮಾನ್ ಖಾನ್ ಪ್ರಕರಣವನ್ನು ಬೆನ್ನು ಹತ್ತುತ್ತಿರುವ ನಡುವೆಯೇ ಮತ್ತೊಂದು ಬೆದರಿಕೆ ಬಂದಿರುವ ಕಾರಣ ಪೊಲೀಸರಿಗೆ ಸಮಸ್ಯೆ ಎದುರಾಗಿದೆ.
ಶಾರುಖ್‌ಗೆ ಕಳುಹಿಸಿದ ಬೆದರಿಕೆ ಸಂದೇಶದ ಕರೆಯನ್ನು ರಾಯ್‌ಪುರ ಮೂಲದ ವಕೀಲ ಫೈಜಾನ್ ಖಾನ್ ಹೆಸರಿನಲ್ಲಿ ನೋಂದಾಯಿಸಲಾದ ಫೋನ್‌ನಿಂದ ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ನವೆಂಬರ್ 2 ರಂದು ತನ್ನ ಫೋನ್ ಕಾಣೆಯಾಗಿದೆ ಎಂದು ವಕೀಲ ದೂರು ನೀಡಿದ್ದಾರೆ. ಫೈಜಾನ್, ಪಿತೂರಿಯ ಭಾಗವಾಗಿ ತನ್ನನ್ನು ಗುರಿಯಾಗಿಸಲಾಗಿದೆ ಎಂದು ನಂಬಿರುವುದಾಗಿ ಹೇಳಿಕೆ ನೀಡಿದ್ದಾನೆ.