Wayanad By-Election | ಮತದಾರರಿಗೆ ಬಹಿರಂಗ ಪತ್ರ ಬರೆದ ಪ್ರಿಯಾಂಕ ಗಾಂಧಿ

ನ.13 ರಂದು ನಡೆಯುವ ಉಪಚುನಾವಣೆಯಲ್ಲಿ ತನ್ನನ್ನು ಸಂಸದರನ್ನಾಗಿ ಆಯ್ಕೆ ಮಾಡಲು ಕೋರಿರುವ ಪ್ರಿಯಾಂಕಾ, ತನ್ನ ಸಹೋದರ ಮತ್ತು ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಅಲ್ಲಿನ ಜನರೊಂದಿಗೆ ಹೊಂದಿರುವ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ತಾನು ಬದ್ಧ ಎಂದು ಹೇಳಿದ್ದಾರೆ;

Update: 2024-10-26 11:35 GMT
ಪ್ರಿಯಾಂಕಾ ಗಾಂಧಿ
Click the Play button to listen to article

ವಯನಾಡ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ವಯನಾಡ್ ಜನತೆಗೆ ಬಹಿರಂಗ ಪತ್ರ ಬರೆದಿದ್ದು, ನಾನು ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇನೆ ಹಾಗೂ ಸವಾಲುಗಳನ್ನು ವಿಶೇಷವಾಗಿ; ಮಹಿಳೆಯರ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. 

ನವೆಂಬರ್ 13 ರಂದು ನಡೆಯುವ ಉಪಚುನಾವಣೆಯಲ್ಲಿ ತನ್ನನ್ನು ಸಂಸದರನ್ನಾಗಿ ಆಯ್ಕೆ ಮಾಡುವಂತೆ ಮತದಾರರನ್ನು ಕೋರಿರುವ ಪ್ರಿಯಾಂಕಾ, ತನ್ನ ಸಹೋದರ ಮತ್ತು ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಕ್ಷೇತ್ರದ ಜನರೊಂದಿಗೆ ಹೊಂದಿರುವ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ತಾನು ಸಂಸದೆಯಾಗಿ ಆಯ್ಕೆಯಾಗುವುದು ನೆರವಾಗಲಿದೆ ಮತ್ತು ವಯನಾಡಿನ ಜನರ ಸಮಸ್ಯೆ, ಸವಾಲುಗಳನ್ನು ನಿವಾರಿಸುವ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇದು ಅವರ "ಪ್ರಜಾಪ್ರತಿನಿಧಿಯಾಗಲು ವಯನಾಡಿನ ಈ ಚುನಾವಣೆ ನನ್ನ ಮೊದಲ ಪ್ರಯಾಣವಾಗಿದೆ. ಆದರೆ ಸಾರ್ವಜನಿಕ ಹೋರಾಟಗಾರಳಾಗಿ ನನ್ನ ಮೊದಲ ಪ್ರಯಾಣವಲ್ಲ" ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 

ಪ್ರಿಯಾಂಕಾ ಸಾರ್ವಜನಿಕ ಪ್ರತಿಜ್ಞೆ

ಇದು ನನ್ನ ಸಾರ್ವಜನಿಕ ಪ್ರತಿನಿಧಿಯಾಗಿ ಮೊದಲ ಸಾರ್ವಜನಿಕ ಹೋರಾಟ. ಈ ಹೋರಾಟಕ್ಕೆ ನೀವು  ನನ್ನ ಮಾರ್ಗದರ್ಶಕರು ಮತ್ತು ಶಿಕ್ಷಕರಾಗುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವಕ್ಕಾಗಿ, ನ್ಯಾಯಕ್ಕಾಗಿ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗಾಗಿ ಹೋರಾಡುವುದು ನನ್ನ ಜೀವನದ ಮಹತ್ತರ ಉದ್ದೇಶವಾಗಿದೆ. ನಿಮ್ಮ ಬೆಂಬಲದೊಂದಿಗೆ ನಮ್ಮ ಎಲ್ಲರ ಉತ್ತಮ ಭವಿಷ್ಯಕ್ಕಾಗಿ ಈ ಹೋರಾಟವನ್ನು ಮುಂದುವರಿಸಲು ನಾನು ನಿಮ್ಮ ಸಹಾಯ ಹಸ್ತವನ್ನು ಈ ಚುನಾವಣೆಯ ಆಯ್ಕೆಯ ಮೂಲಕ ಎದುರು ನೋಡುತ್ತಿದ್ದೇನೆ. ನೀವು ನನ್ನನ್ನು ನಿಮ್ಮ ಸಂಸದರನ್ನಾಗಿ ಮಾಡಲು ಆಯ್ಕೆ ಮಾಡಿದರೆ ನಿಮಗೆ ತುಂಬಾ ಕೃತಜ್ಞಳಾಗಿರುತ್ತೇನೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 

ನವೆಂಬರ್ 13 ರಂದು ನಡೆಯುವ ಚುನಾವಣೆಯಲ್ಲಿ ತಮ್ಮನ್ನು ಸಂಸದರಾಗಿ ಆಯ್ಕೆ ಮಾಡಲು ಮತದಾರರಿಗೆ ಕರೆ ನೀಡಿರುವ ಅವರು, ಸಂಸತ್ತಿನಲ್ಲಿ ಪ್ರತಿನಿಧಿಸಲು ಬಯಸುವ ರೀತಿಯಲ್ಲಿ ಜನರನ್ನು ಪ್ರತಿನಿಧಿಸುವುದಾಗಿ ವಾಗ್ದಾನ ಮಾಡಿದರು.

ಸಹೋದರ ರಾಹುಲ್ ಗಾಂಧಿ ವಯನಾಡಿನ ಸಂಸದನ ಸ್ಥಾನವನ್ನು ತೊರೆದು, ರಾಯ್ ಬರೇಲಿಯನ್ನು ಉಳಿಸಿಕೊಂಡಿದ್ದರಿಂದ ವಯನಾಡಿನಲ್ಲಿ ಲೋಕಸಭಾ ಉಪ ಚುನಾವಣೆ ನಡೆಯುತ್ತಿದ್ದು, ಪ್ರಿಯಾಂಕ ನಾಮಪತ್ರ ಸಲ್ಲಿಸಿದ್ದಾರೆ. 

Tags:    

Similar News