ಮೋದಿ-ಡೊನಾಲ್ಡ್ ಟಸ್ಕ್ ಭೇಟಿ; ದ್ವಿಪಕ್ಷೀಯ ಬಾಂಧವ್ಯ ಕುರಿತು ಚರ್ಚೆ

Update: 2024-08-22 12:04 GMT
ವಾರ್ಸಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೋಲೆಂಡ್‌ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಮಾತುಕತೆ ನಡೆಸಿದರು.

ವಾರ್ಸಾ: ಪ್ರಧಾನಿ ನರೇಂದ್ರ ಮೋದಿ ಅವರು ಪೊಲಿಷ್‌ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರನ್ನು ಗುರುವಾರ ಭೇಟಿ ಮಾಡಿ, ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು. 

ಮೋದಿ ಅವರು ತಮ್ಮ ಎರಡು ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿ ಬುಧವಾರ ಪೋಲೆಂಡ್‌ಗೆ ಆಗಮಿಸಿದರು. ಕಳೆದ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರ ಮೊದಲ ಪೋಲೆಂಡ್‌ ಭೇಟಿ ಇದಾಗಿದೆ. 

ಮೋದಿಯವರಿಗೆ ಚಾನ್ಸೆಲರಿಯಲ್ಲಿ ಔಪಚಾರಿಕ ಕೆಂಪು ನೆಲಹಾಸು ಸ್ವಾಗತ ದೊರೆಯಿತು. 

ʻಭಾರತ-ಪೋಲೆಂಡ್ ಸಹಭಾಗಿತ್ವದಲ್ಲಿ ಹೊಸ ಹೆಗ್ಗುರುತು! ವಾರ್ಸಾದ ಫೆಡರಲ್ ಚಾನ್ಸೆಲರಿಯಲ್ಲಿ ಪೋಲೆಂಡಿನ ಪ್ರಧಾನಿ ಟಸ್ಕ್‌ ಅವರು ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ, ವಿಧ್ಯುಕ್ತ ಸ್ವಾಗತ ನೀಡಿದರು. ಈ ಭೇಟಿಯು ಭಾರತ-ಪೋಲೆಂಡ್ ಪಾಲುದಾರಿಕೆಗೆ ಹೊಸ ವೇಗವನ್ನು ನೀಡುತ್ತದೆ,ʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ʻಪ್ರಧಾನಮಂತ್ರಿ ನರೇಂದ್ರ ಮೋದಿ, ನಿಮ್ಮನ್ನು ವಾರ್ಸಾದಲ್ಲಿ ನೋಡಲು ಸಂತೋಷವಾಗಿದೆ,ʼ ಎಂದು ಟಸ್ಕ್‌ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಧ್ಯಕ್ಷ ಆಂಡ್ರೆಜ್ ಸೆಬಾಸ್ಟಿಯನ್ ದುಡಾ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

Tags:    

Similar News