ಭಾರತದಲ್ಲಿ ಅನಾರೋಗ್ಯಕರ ವಸ್ತುಗಳನ್ನು ಮಾರುತ್ತಿವೆ ಪೆಪ್ಸಿ, ನೆಸ್ಲೆಯಂಥ ಕಂಪನಿಗಳು ; ವರದಿ

ಈ ಕಂಪನಿಗಳು ಬಡ ದೇಶಗಳಲ್ಲಿ ಸರಾಸರಿ ಕಡಿಮೆ ಆರೋಗ್ಯಕರ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ ಎಂದು ʼಆಕ್ಸೆಸ್ ಟು ನ್ಯೂಟ್ರಿಷನ್ ಇನಿಶಿಯೇಟಿವ್ (ಎಟಿಎನ್ಐ) ಪ್ರಕಟಿಸಿದ ಜಾಗತಿಕ ಸೂಚ್ಯಂಕದಲ್ಲಿ ಪತ್ತೆಯಾಗಿದೆ.;

Update: 2024-11-11 12:49 GMT
ಪ್ರಾತಿನಿಧಿಕ ಚಿತ್ರ.

ನೆಸ್ಲೆ, ಯುನಿಲಿವರ್‌ ಮತ್ತು ಪೆಪ್ಸಿಕೊದಂಥ ಕಂಪನಿಗಳು ಭಾರತ ಸೇರಿದಂತೆ ಕಡಿಮೆ ತಲಾದಾಯ ಹೊಂದಿರುವ ದೇಶಗಳಲ್ಲಿ ಶುಚಿಯಿಲ್ಲದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ ಎಂಬುದಾಗಿ ರಾಯಿಟರ್ಸ್‌ ವರದಿ ಮಾಡಿದೆ. ಈ ಕಂಪನಿಗಳು ಕುರುಕುಲು ತಿನಿಸು, ಪಾನೀಯಗಳು ಹಾಗೂ ಮ್ಯಾಗಿಯಂಥ ಕ್ಷಿಪ್ರ ಅಡುಗೆ ಪದಾರ್ಥಗಳನ್ನು ಮಾರಾಟ ಮಾಡುವ ಬಹುರಾಷ್ಟ್ರೀಯ ಕಂಪನಿಗಳಾಗಿವೆ. ಇದೇ ಕಂಪನಿಗಳು ಶ್ರೀಮಂತ ದೇಶಗಳಲ್ಲಿ ಹೆಚ್ಚು ಕಾಳಜಿಯಿಂದ ಉತ್ಪನ್ನಗಳನ್ನು ತಯಾರಿಸುತ್ತವೆ ಎಂಬುದಾಗಿಯೂ ವರದಿಯಲ್ಲಿ ಹೇಳಲಾಗಿದೆ.

ಈ ಕಂಪನಿಗಳು ಬಡ ದೇಶಗಳಲ್ಲಿ ಸರಾಸರಿ ಕಡಿಮೆ ಆರೋಗ್ಯಕರ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ ಎಂದು ಲಾಭರಹಿತ ಸಂಸ್ಥೆಯಾಗಿರುವ ʼಆಕ್ಸೆಸ್ ಟು ನ್ಯೂಟ್ರಿಷನ್ ಇನಿಶಿಯೇಟಿವ್ (ಎಟಿಎನ್ಐ) ಪ್ರಕಟಿಸಿದ ಜಾಗತಿಕ ಸೂಚ್ಯಂಕದಲ್ಲಿ ಪತ್ತೆಯಾಗಿದೆ.

ಈ ಸೂಚ್ಯಂಕವನ್ನು 2021ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಬಾರಿ ಶ್ರೀಮಂತ ಹಾಗೂ ಬಡ ದೇಶಗಳೆಂಬ ವಿಭಾಗದಲ್ಲಿ ಸಮೀಕ್ಷೆ ಮಾಡಿ ವರದಿ ಪ್ರಕಟಿಸಿದೆ. 

ಸರಾಸರಿ ಅಂಕಕ್ಕಿಂತಲೂ ಕಡಿಮೆ

ಎಟಿಎನ್‌ಐ ಆಹಾರ ಮತ್ತು ಪಾನೀಯ ಉತ್ಪನ್ನಗಳನ್ನು ತಯಾರಿಸುವ 30 ಕಂಪನಿಗಳನ್ನು ಪಟ್ಟಿ ಮಾಡಿದೆ. ಅಂತೆಯೇ ಶ್ರೀಮಂತ ದೇಶಗಳಾದ ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾವು ವಿಧಿಸಿಸುವ ಆಹಾರ ಉತ್ಪನ್ನಗಳ ಆರೋಗ್ಯಕರ ಮಾನದಂಡದ ಆಧಾರದಲ್ಲಿ ಉತ್ಪನ್ನಗಳನ್ನು ಅಳೆಯಲಾಗಿದೆ. ಅದರಂತೆ ಬಡ ದೇಶಗಳಲ್ಲಿ ಮಾರುವ ಉತ್ಪನ್ನಗಳನ್ನು ಸರಾಸರಿ ಕನಿಷ್ಠ ಅಂಕಕ್ಕಿಂತಲೂ ಅಂಕಗಳನ್ನು ಪಡೆದುಕೊಂಡಿವೆ.

ಈ ವ್ಯವಸ್ಥೆಗೆ ಹೆಲ್ತ್‌ ಸ್ಟಾರ್‌ ರೇಟಿಂಗ್‌ ಎಂದು ಹೆಸರಿಡಲಾಗಿದ್ದು ಒಟ್ಟು 5 ಅಂಕಗಳ ಆಧಾರದಲ್ಲಿ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಅದರ ಪ್ರಕಾರ 5 ಪಡೆದರೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ ಹಾಗೂ 3.5 ರೇಟಿಂಗ್‌ ಪಡೆದರೆ ಸೇವನೆಗೆ ಆರೋಗ್ಯಕರ ಎಂದು ಹೇಳಲಾಗುತ್ತದೆ. ಈ ಮಾನದಂಡ ಪ್ರಕಾರ ನಡೆಸಿದ ಸಮೀಕ್ಷೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಮಾರಾಟ ಮಾಡುವ ವಸ್ತುಗಳು ಶ್ರೀಮಂತ ದೇಶಗಳಲ್ಲಿ ಸರಾಸರಿ 2.5 ಅಂಕಗಳನ್ನು ಗಳಿಸಿದ್ದರೆ ಭಾರತದಂಥ ಮಧ್ಯಮ ವರ್ಗದವರು ಹೆಚ್ಚಿರುವ ದೇಶಗಳಲ್ಲಿ ಕೇವಲ 1.5 ಸರಾಸರಿ ರೇಟಿಂಗ್‌ ಪಡೆದುಕೊಂಡಿದೆ.

ಎಟಿಎನ್‌ಐ ನಿರ್ದೇಶಕ ಮಾರ್ಕ್‌ ವೈನೆ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗ ಮಾಡಿದ್ದಾರೆ. ಅವರು ಹೇಳುವ ಪ್ರಕಾರ ಬಡ ದೇಶಗಳಲ್ಲಿ ಈ ಕಂಪನಿಗಳು ಹೆಚ್ಚು ಚಲನಶೀಲತೆ ಹೊಂದಿದ್ದು ಅಲ್ಲಿ ಅವರು ಆರೋಗ್ಯಕರ ಉತ್ಪನ್ನಗಳನ್ನು ಮಾರುತ್ತಿಲ್ಲ. ಸರ್ಕಾರಗಳಿಗೆ ಇದು ಎಚ್ಚರಿಕೆಯ ಕರೆಗಂಟೆ ಎಂದು ಅವರು ಹೇಳಿದ್ದಾರೆ.

ಬೊಜ್ಜಿನ ಸಮಸ್ಯೆ

ಎಟಿಎನ್‌ಐ ಈ ಅನಾರೋಗ್ಯಕರ ಆಹಾರದ ಪೊಟ್ಟಣಗಳು ಬೊಜ್ಜಿಗೆ ಕಾರಣವಾಗುತ್ತಿವೆ ಎಂಬುದಾಗಿ ಹೇಳಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ವಿಶ್ವಾದ್ಯಂತ ಸ್ಥೂಲ ಕಾಯದ ಸಮಸ್ಯೆ ಮತ್ತು ವಿಶ್ವ ಬ್ಯಾಂಕ್‌ ಪ್ರಕಾರ ಬಡ ದೇಶಗಳಲ್ಲಿ ಶೇಕಡಾ 70ರಷ್ಟು ಮಂದಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಎಟಿಎನ್‌ಐ ಪಟ್ಟಿಮಾಡಿರುವ ಕಂಪನಿಗಳಲ್ಲಿ ಒಂದಾಗಿರುವ ನೆಸ್ಲೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವುದಾಗಿ ಲೈವ್‌ ಮಿಂಟ್‌ ವರದಿ ಮಾಡಿದೆ. ನಾವು ಆರೋಗ್ಯಕರ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸಿದ್ದಪಡಿಸಿ ಮಾರುವಲ್ಲಿ ಬದ್ಧತೆಯನ್ನು ಪ್ರದರ್ಶಿಸುತ್ತೇವೆ. ಉತ್ತಮ ಆಹಾರ ಪದ್ಧತಿಯನ್ನು ಪಾಲಿಸುವಂತೆ ನಾವು ಜನರಿಗೆ ಸಲಹೆ ನೀಡುತ್ತೇವೆ. ಅದರಾಚೆಗೆ, ನಾವು ತಯಾರಿಸಿ ಮಾರುವ ಆಹಾರಗಳು ಬಡ ದೇಶಗಳಲ್ಲಿರುವ ಅಪೌಷ್ಟಿಕ ಸಮಸ್ಯೆಗೆ ಪರಿಹಾರವಾಗಿದೆ ಎಂದು ಹೇಳಿದೆ.

ಪೆಪ್ಸಿಕೊ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ ಎಂಬುದಾಗಿ ಲೈವ್‌ ಮಿಂಟ್‌ ಹೇಳಿದೆ. ಆದಾಗ್ಯೂ ಕಂಪನಿಯು 2023ರಲ್ಲಿಯೇ ತಮ್ಮ ಉತ್ಪನ್ನಗಳಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದಾಗಿ ಹೇಳಿಕೊಂಡಿದೆ. ಪರ್ಯಾಯವಾಗಿ ಧಾನ್ಯಗಳನ್ನು ಬಳಸುವುದಾಗಿ ಹೇಳಿಕೊಂಡಿದೆ.

Tags:    

Similar News