NEET-UG Scam| ಪ್ರಬಲ ಸಾಕ್ಷ್ಯಾಧಾರವಿದ್ದಲ್ಲಿ ಮಾತ್ರ ಮರುಪರೀಕ್ಷೆ: ಸುಪ್ರೀಂ ಕೋರ್ಟ್

ಸಿಜೆಐ ನೇತೃತ್ವದ ಪೀಠವು ನೀ‌ಟ್-ಯುಜಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಆರಂ ಭಿಸಿದೆ. ʻವಿಷಯವು ಗಂಭೀರ ಸಾಮಾಜಿಕ ಪರಿಣಾಮಗಳನ್ನುಒಳಗೊಂಡಿದೆ,ʼ ಎಂದು ಹೇಳಿದೆ.

Update: 2024-07-18 08:42 GMT

ನೀಟ್-ಯುಜಿ ಪರೀಕ್ಷೆಯನ್ನು ಮತ್ತೆ ನಡೆಸಬೇಕೆಂಬ ಯಾವುದೇ ಆದೇಶವು ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂಬ ಪ್ರಬಲ ಸಾಕ್ಷ್ಯಾ ಧಾರದ ತಳಹದಿಯಲ್ಲಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ (ಜುಲೈ 18) ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ನೀಟ್-ಯುಜಿ ‌ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತು. ʻವಿಷಯವು ಸಾಮಾಜಿಕ ಪರಿಣಾಮಗಳನ್ನುಒಳಗೊಂಡಿದೆ,ʼ ಎಂದು ಹೇಳಿದೆ. 

ನೀಟ್-ಯುಜಿ ಅರ್ಜಿಗಳಿಗೆ ಮುಂಚಿತವಾಗಿ ಪಟ್ಟಿ ಮಾಡಲಾದ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ʻನಾವು ಇಂದು ವಿಚಾರಣೆಯನ್ನು ಆರಂಭಿಸುತ್ತೇವೆ. ಲಕ್ಷಾಂತರ ವಿದ್ಯಾರ್ಥಿಗಳು ಇದಕ್ಕಾಗಿ ಕಾಯುತ್ತಿದ್ದಾರೆ. ವಾದ ವಿವಾದ ಆಲಿಸಿ, ನಿರ್ಧರಿಸೋಣ,ʼ ಎಂದು ಹೇಳಿದರು. 

ಮೇ 5 ರ ಪರೀಕ್ಷೆಯನ್ನು ವಜಾಗೊಳಿಸುವಿಕೆ, ಮರು ಪರೀಕ್ಷೆ ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ದಾಖಲಿಸಿದವರಿಗೆ ʻಪ್ರಶ್ನೆಪತ್ರಿಕೆಯ ವ್ಯವಸ್ಥಿತ ಸೋರಿಕೆಯಾಗಿದೆ ಮತ್ತು ಇದು ಸಂಪೂರ್ಣ ಪರೀಕ್ಷೆ ಮೇಲೆ ಪರಿಣಾಮ ಬೀರಿದೆʼ ಎಂದು ಸಾಬೀತುಪಡಿಸಲು ಕೇಳಿತು. 

ತನಿಖೆಯ ಕುರಿತು ಪ್ರತಿಕ್ರಿಯಿಸಿ, ʻಸಿಬಿಐ ತನಿಖೆ ಮುಂದುವರಿದಿದೆ. ಸಿಬಿಐ ನಮಗೆ ಹೇಳಿರುವುದನ್ನು ಬಹಿರಂಗಗೊಳಿಸಿರೆ, ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಜನರು ಬುದ್ಧಿವಂತರಾಗಿದ್ದಾರೆ,ʼ ಎಂದು ಹೇಳಿದರು.

40ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ: ಪರೀಕ್ಷೆಯಲ್ಲಿ ಅಕ್ರಮ ಸಂಬಂಧ ವಿವಿಧ ಹೈಕೋರ್ಟ್‌ಗಳಲ್ಲಿ ದಾಖಲಾದ ಪ್ರಕರಣಗಳು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಅರ್ಜಿ ಸೇರಿದಂತೆ 40 ಕ್ಕೂ ಹೆಚ್ಚು ಅರ್ಜಿಗಳನ್ನು ಪೀಠ ವಿಚಾರಣೆ ನಡೆಸುತ್ತಿದೆ. ಜುಲೈ 11 ರಂದು ಸುಪ್ರೀಂ ಕೋರ್ಟ್‌ ಅರ್ಜಿಗಳ ವಿಚಾರಣೆಯನ್ನು ಜುಲೈ 18 ಕ್ಕೆ ಮುಂದೂಡಿತ್ತು.

ಮೇ 5 ರಂದು 14 ಸಾಗರೋತ್ತರ ಕೇಂದ್ರಗಳು ಸೇರಿದಂತೆ 571 ನಗರಗಳ 4,750 ಕೇಂದ್ರಗಳಲ್ಲಿ 23.33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್-ಯುಜಿ ಪರೀಕ್ಷೆ ತೆಗೆದುಕೊಂಡಿದ್ದರು. ಕೇಂದ್ರ ಮತ್ತು ಎನ್‌ಟಿಎ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವುದರಿಂದ ಪ್ರತಿಕೂಲ ಪರಿಣಾಮ ಆಗಬಹುದು ಮತ್ತು ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹಾನಿಯಾಗುತ್ತದೆ ಎಂದು ಹೇಳಿತ್ತು.

Tags:    

Similar News