ನೀಟ್-ಯುಜಿ 2024| ಪ್ರಾಂಶುಪಾಲ, ಉಪಪ್ರಾಂಶುಪಾಲರ ಬಂಧನ

Update: 2024-06-29 07:59 GMT

ನವದೆಹಲಿ : ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಶಾಲೆಯೊಂದರ ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮೇ 5 ರಂದು ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಓಯಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್ ಅವರು ಹಜಾರಿಬಾಗ್‌ನ ನಗರ ಸಂಯೋಜಕರಾಗಿದ್ದರು ಎಂದು ಹೇಳಿದರು. ವೈಸ್ ಪ್ರಿನ್ಸಿಪಾಲ್ ಇಮ್ತಿಯಾಜ್ ಆಲಂ ಅವರನ್ನು ಎನ್‌ಟಿಎ ವೀಕ್ಷಕರಾಗಿ ಮತ್ತು ಓಯಸಿಸ್ ಶಾಲೆಯ ಕೇಂದ್ರ ಸಂಯೋಜಕರಾಗಿ ನೇಮಿಸಲಾಗಿತ್ತು. ಸಿಬಿಐ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇನ್ನೂ ಐದು ಜನರ  ವಿಚಾರಣೆ ನಡೆಸುತ್ತಿದೆ.

ಹಕ್ ಮತ್ತು ಆಲಂ ಅವರನ್ನು ವಿವರವಾದ ವಿಚಾರಣೆ ನಂತರ ಸಿಬಿಐ ಬಂಧಿಸಿದೆ ಎಂದು ಹೇಳಿದರು.

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಉಲ್ಲೇಖದ ಮೇರೆಗೆ ದಾಖಲಿಸಿಕೊಂಡ ಎಫ್‌ಐಆರ್ ಮತ್ತು ರಾಜ್ಯಗಳ ಐದು ಎಫ್‌ಐಆರ್ ಸೇರಿವೆ. ಬಿಹಾರ ಮತ್ತು ಗುಜರಾತ್‌ನಲ್ಲಿ ತಲಾ ಒಂದು ಹಾಗೂ ರಾಜಸ್ಥಾನದಲ್ಲಿ ಮೂರು ಪ್ರಕರಣಗಳ ತನಿಖೆ ನಡೆಸುತ್ತಿದೆ.

Tags:    

Similar News