NEET- UG 2024| ಪಾಟ್ನಾದಿಂದ ಮತ್ತಿಬ್ಬರ ಬಂಧನ

ನಳಂದ ಮೂಲದ ಸನ್ನಿ ಮತ್ತು ಗಯಾದ ಇನ್ನೊಬ್ಬ ಅಭ್ಯರ್ಥಿ ರಂಜಿತ್ ಕುಮಾರ್ ಅವರ ತಂದೆಯನ್ನು ಸಿಬಿಐ ಬಂಧಿಸಿದೆ. ಸಿಬಿಐನಿಂದ ಒಟ್ಟು ಬಂಧಿತರ ಸಂಖ್ಯೆ 11ಕ್ಕೇರಿದೆ

Update: 2024-07-09 13:26 GMT
ನವದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್‌ ಪರೀಕ್ಷೆ ಅಕ್ರಮ ಕುರಿತು ಪ್ರತಿಭಟನೆ ನಡೆಸಿದ ಇಂಡಿಯಾ ಯೂತ್ ಫ್ರಂಟ್‌ನ ಸದಸ್ಯರು.

ಹೊಸದಿಲ್ಲಿ, ಜು.9- ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪಾಟ್ನಾದಿಂದ ಮತ್ತಿಬ್ಬರನ್ನು ಸಿಬಿಐ ಬಂಧಿಸಿದೆ. ಇದರಿಂದ ಬಂಧಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ನೀಟ್-ಯುಜಿ ಆಕಾಂಕ್ಷಿ, ನಳಂದ ಮೂಲದ ಸನ್ನಿ ಮತ್ತು ಗಯಾದ ಅಭ್ಯರ್ಥಿ ರಂಜಿತ್ ಕುಮಾರ್ ಅವರ ತಂದೆಯನ್ನು ಬಂಧಿಸಲಾಗಿದೆ ಎಂದು ಹೇಳಿದರು. 

ಸಿಬಿಐ ಇದುವರೆಗೆ ಬಿಹಾರದಿಂದ ಎಂಟು, ಗುಜರಾತಿನ ಲಾತೂರ್ ಮತ್ತು ಗೋದ್ರಾದ ತಲಾ ಒಬ್ಬರನ್ನು ಮತ್ತು ಡೆಹ್ರಾಡೂನ್‌ನಿಂದ ಒಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹಜಾರಿಬಾಗ್ ಮೂಲದ ಓಯಸಿಸ್ ಶಾಲೆಯ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲ, ನೀಟ್‌ ಅಭ್ಯರ್ಥಿಗಳಿಗೆ ನೆಲೆ ಒದಗಿಸಿದ ಇಬ್ಬರನ್ನು ಬಂಧಿಸಿತ್ತು. ಅಲ್ಲಿ ಸುಟ್ಟ ಪ್ರಶ್ನೆಪತ್ರಿಕೆಗಳನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದರು.

Tags:    

Similar News