Maharashtra Assembly polls : ಭರ್ಜರಿ ಜಯದತ್ತ ಮಹಾಯುತಿ, ಎಂವಿಎಗೆ ನಿರಾಸೆ

ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ 288 ವಿಧಾನಸಭಾ ಸ್ಥಾನಗಳಲ್ಲಿ 204 ಸ್ಥಾನಗಳಲ್ಲಿ ಮುನ್ನಡೆ ಗಳಿಸಿಕೊಂಡಿದೆ.

Update: 2024-11-23 06:15 GMT

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಆರಂಭಿಕ ಪ್ರವೃತ್ತಿಯ ಪ್ರಕಾರ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ತನ್ನ ಅಭ್ಯರ್ಥಿಗಳು ಕೇವಲ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಉಳಿದಂತೆ 204 ಸ್ಥಾನಗಳು ಬಿಜೆಪಿ ನೇತೃತ್ವದ ಮಹಾಯುತಿಗೆ ಒಲಿಯುವ ಸಾಧ್ಯತೆಗಳಿವೆ. ಇದು ಎನ್‌ಡಿಎ ಬಣ್ಣಕ್ಕೆ ಭರ್ಜರಿ ಯಶಸ್ಸು ಎನಿಸಿಕೊಳ್ಳಲಿದೆ.


maharashtra election 2024,maharashtra election,maharashtra election result,maharashtra election news,maharashtra election poll,maharashtra election date,maharashtra election live,maharashtra assembly election,maharashtra assembly election 2024,maharashtra election results,maharashtra elections,maharashtra elections 2024,maharashtra election results 2024 live,maharashtra vidhan sabha election 2024,maharashtra assembly elections 2024

ನವೆಂಬರ್ 20 ರಂದು ನಡೆದ ಚುನಾವಣೆಯಲ್ಲಿ ಶನಿವಾರ ಬೆಳಿಗ್ಗೆ (ನವೆಂಬರ್ 23) ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ಮಹಾಯುತಿ ಸತತವಾಗಿ ಮುನ್ನಡೆ ಕಾಯ್ದುಕೊಂಡಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಮಹಾಯುತಿಯಲ್ಲಿ ಬಿಜೆಪಿ ಅಭ್ಯರ್ಥಿಗಳು 111 ಸ್ಥಾನಗಳಲ್ಲಿ, ಶಿವಸೇನೆ 58 ಸ್ಥಾನಗಳಲ್ಲಿ ಮತ್ತು ಎನ್ಸಿಪಿ 35 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.

ಮಹಾ ವಿಕಾಸ್‌ ಅಘಾಡಿಯಲ್ಲಿ ಎನ್ಸಿಪಿ (ಶರದ್ ಚಂದ್ರ ಪವಾರ್) ಅಭ್ಯರ್ಥಿಗಳು 9 ಸ್ಥಾನಗಳಲ್ಲಿ, ಕಾಂಗ್ರೆಸ್ 20 ಸ್ಥಾನಗಳಲ್ಲಿ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) 18 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದಾರೆ. .

ಶಿಂಧೆ, ಫಡ್ನವೀಸ್, ಅಜಿತ್ ಪವಾರ್ ಮುನ್ನಡೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಡಿಸಿಏಂ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರು ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಚುನಾವಣಾ ಆಯೋಗ ನೀಡಿದ ಅಂಕಿಅಂಶಗಳ ಪ್ರಕಾರ, ಮೊದಲ ಸುತ್ತಿನ ಎಣಿಕೆಯ ಕೊನೆಯಲ್ಲಿ ಶಿಂಧೆ ತಮ್ಮ ಸಮೀಪದ ಪ್ರತಿಸ್ಪರ್ಧಿಯಿಂದ 4,053 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ನಾಗ್ಪುರ ನೈಋತ್ಯದಲ್ಲಿ ಫಡ್ನವೀಸ್ 2,246 ಮತಗಳಿಂದ ಮತ್ತು ಬಾರಾಮತಿ ಕ್ಷೇತ್ರದಲ್ಲಿ ಪವಾರ್ 3,759 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮೊದಲ ಸುತ್ತಿನ ಅಂತ್ಯಕ್ಕೆ ಸಕೋಲಿ ಕ್ಷೇತ್ರದಿಂದ 344 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಮುಂಬೈನ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆ (ಯುಬಿಟಿ) ಮುಖಂಡ ಮತ್ತು ಹಾಲಿ ಶಾಸಕ ಆದಿತ್ಯ ಠಾಕ್ರೆ 495 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಬಾಳಾಸಾಹೇಬ್ ಥೋರಟ್‌, ಸಂಗಮ್ನರ್ ವಿಧಾನಸಭಾ ಕ್ಷೇತ್ರದಲ್ಲಿ 1,831 ಮತಗಳಿಂದ ಹಿಂದುಳಿದಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಮೊದಲ ಸುತ್ತಿನ ಎಣಿಕೆಯ ಕೊನೆಯಲ್ಲಿ ಕರಡ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1,590 ಮತಗಳಿಂದ ಹಿನ್ನಡೆ ಹೊಂದಿದ್ದಾರೆ .

ನವೆಂಬರ್ 20 ರಂದು ನಡೆದ ಚುನಾವಣೆಯಲ್ಲಿ ಅಂತಿಮ ಮತದಾನವು ಶೇಕಡಾ 66.05 ರಷ್ಟಿತ್ತು, ಇದು 2019 ರಲ್ಲಿ ಶೇಕಡಾ 61.1 ರಷ್ಟಿತ್ತು. ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 149, ಶಿವಸೇನೆ 81 ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ 101, ಶಿವಸೇನೆ (ಯುಬಿಟಿ) 95 ಮತ್ತು ಎನ್ಸಿಪಿ (ಎಸ್ಪಿ) 86 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

Tags:    

Similar News