ಬಾಬಾ ಸಿದ್ದಿಕಿ ಹತ್ಯೆಯಾಗದಿದ್ದರೆ ಪುತ್ರ ಜೀಶಾನ್ ಕೊಲೆಯಾಗುತ್ತಿದ್ದರು...
ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್, ಇಬ್ಬರಲ್ಲಿಒಬ್ಬರನ್ನು ಕೊಲೆ ಮಾಡಲು ಸೂಚನೆ ನೀಡಿದ್ದ ಎಂದು ವಿಚಾರಣೆಯ ಸಮಯದಲ್ಲಿ ಶಿವಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ.;
ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಬಲಿಯಾಗದೇ ಹೋಗದಿದ್ದರೆ ಅವರ ಪುತ್ರ ಜೀಶಾನ್ ಗುಂಡೇಟಿಗೆ ಎದೆಕೊಡಬೇಕಾಗಿತ್ತು ಎಂಬುವ ಆತಂಕಕಾರಿ ವಿಷಯ ಹೊರಗೆ ಬಂದಿದೆ. ಸಿದ್ದಿಕಿ ಕೊಲೆ ಪ್ರಕರಣದ ಪ್ರಮುಖ ಶಂಕಿತ ಶಿವ ಕುಮಾರ್ ಗೌತಮ್ ಈ ಸತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾನೆ. 66 ವರ್ಷದ ಎನ್‌ಸಿಪಿ ನಾಯಕ ಅಥವಾ ಅವರ ಶಾಸಕ ಪುತ್ರ ಜೀಶಾನ್ ಸಿದ್ದಿಕಿಯಲ್ಲಿ ಒಬ್ಬರನ್ನು ಕೊಲ್ಲುವುದಕ್ಕೆ ತನಗೆ ಸೂಚನೆ ಸಿಕ್ಕಿತ್ತು ಎಂದು ಆತ ಹೇಳಿದ್ದಾರೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ಟೋಬರ್ 12 ರಂದು ಮುಂಬೈನ ಜೀಶಾನ್ ಕಚೇರಿಯ ಹೊರಗೆ ಸಿದ್ದೀಕಿ ಅವರನ್ನು ಹತ್ಯೆ ಮಾಡಿದ ಮೂವರು ಶೂಟರ್‌ಗಳಲ್ಲಿ ಹರಿಯಾಣದ ಗುರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧ್ರಮ್ರಾಜ್ ಕಶ್ಯಪ್ ಕೂಡ ಇದ್ದರು. ಘಟನೆಯಾದ ಸ್ವಲ್ಪ ಹೊತ್ತಿನಲ್ಲೇ ಸಿಂಗ್ ಮತ್ತು ಕಶ್ಯಪ್ ಬಂಧನಕ್ಕೆ ಒಳಗಾಗಿದ್ದರು. ಶಿವಕುಮಾರ್ ಬಳಿಕ ಸೆರೆ ಸಿಕ್ಕಿದ್ದ .
ದೇವರು ಮತ್ತು ಸಮಾಜಕ್ಕಾಗಿ ಕೃತ್ಯ
ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್, ಇಬ್ಬರಲ್ಲಿಒಬ್ಬರನ್ನು ಕೊಲೆ ಮಾಡಲು ಸೂಚನೆ ನೀಡಿದ್ದ ಎಂದು ವಿಚಾರಣೆಯ ಸಮಯದಲ್ಲಿ ಶಿವಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ. ಕೊಲೆಗೂ ಮುನ್ನ ಅನ್ಮೋಲ್ ಈ ಕೃತ್ಯವು "ದೇವರು ಮತ್ತು ಸಮಾಜಕ್ಕಾಗಿ" ಎಂದು ಹೇಳಿದ್ದ. ಅದನ್ನು ಆರೋಪಿ ಶಿವಕುಮಾರ್ ಗಂಭೀರವಾಗಿ ತೆಗೆದುಕೊಂಡು ಕೃತ್ಯ ಎಸಗಿದ್ದಾನೆ .
ಆರೋಪಿ ಅನ್ಮೋಲ್ ಪ್ರಸ್ತು ಕೆನಡಾದಲ್ಲಿದ್ದಾನೆ ಎಂದು ನಂಬಲಾಗಿದೆ. ರಾಷ್ಟ್ರೀಯ ತನಿಖಾ ದಳ 'ವಾಂಟೆಡ್' ವ್ಯಕ್ತಿ ಎಂದು ಆತನನ್ನು ಪಟ್ಟಿ ಮಾಡಿದ್ದಾರೆ.
ಮುಂಬೈ ಪೊಲೀಸರು ಶಂಕಿತರಲ್ಲಿ ಒಬ್ಬನಿಂದ ವಶಪಡಿಸಿಕೊಂಡ ಫೋನ್‌ನಲ್ಲಿ 32 ವರ್ಷದ ಜೀಶಾನ್ ಸಿದ್ದೀಕ್ ಅವರ ಛಾಯಾಚಿತ್ರ ಇತ್ತು.
ಕೊಲೆಯ ಮಾಡಿದ ಬಳಿಕ , ಶಿವ ಕುಮಾರ್ ಜನಸಂದಣಿಯ ನಡುವೆ ಪರಾರಿಯಾಗಲು ಬಟ್ಟೆಗಳನ್ನು ಬದಲಾಯಿಸಿದ್ದ ಎಂದು ಆರೋಪಿಸಲಾಗಿದೆ. ಆತ ಪ್ರೇಕ್ಷಕನಂತೆ ನಟಿಸುತ್ತಾ ಅಲ್ಲೇ ನಿಂತಿದ್ದ. ಅನುಮಾನವನ್ನು ಬಾರದಂತೆ ಸಾಕಷ್ಟು ಸಮಯದವರೆಗೆ ಘಟನಾ ಸ್ಥಳದಲ್ಲಿಯೇ ಉಳಿದುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ .
ಶಿವಕುಮಾರ್ ಆರಂಭದಲ್ಲಿ ಆಟೋ ರಿಕ್ಷಾದಲ್ಲಿ ಕುರ್ಲಾಗೆ ಓಡಿಹೋಗಿದ್ದರ. ನಂತರ ಥಾಣೆಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸಿದ್ದ. ಅಲ್ಲಿಂದ ಆತ ಪುಣೆಗೆ ತೆರಳಿದ್ದ. ಅವನು ತನ್ನ ಫೋನ್ ಅನ್ನು ದಾರಿ ಮಧ್ಯೆ ಎಸೆದಿದ್ದ. ಉತ್ತರ ಪ್ರದೇಶದ ಝಾನ್ಸಿಗೆ ತೆರಳುವ ಮೊದಲು ಅವರು ಪುಣೆಯಲ್ಲಿ ಒಂದು ವಾರ ಕಳೆದು ನಂತರ ಲಕ್ನೋಗೆ ತೆರಳಿದ್ದ. ಅಲ್ಲಿ ಆತ ಹೊಸ ಫೋನ್ ಖರೀದಿಸಿದ್ದ.
ಲಕ್ನೋದಲ್ಲಿ ಸ್ವಲ್ಪ ದಿನ ಕಳೆದ ನಂತರ, ಅವರು ಬಹ್ರೈಚ್‌ಗೆ ಮರಳಿದ್ದ. ಅಲ್ಲಿ ಅವರ ಸಹಚರರು ಹತ್ತಿರದ ಹಳ್ಳಿಯಲ್ಲಿ ಸುರಕ್ಷಿತ ಮನೆ ನೀಡಿದ್ದರು.
ಬಹ್ರೈಚ್ ನಲ್ಲಿ ಬಂಧನ
ನೇಪಾಳಕ್ಕೆ ಹೋಗಿ ದೇಶ ತೊರೆಯುವ ಮೊದಲು ಶಿವಕುಮಾರ್. ಮಧ್ಯಪ್ರದೇಶದ ಉಜ್ಜಯಿನಿ ಮತ್ತು ನಂತರ ಜಮ್ಮುವಿನ ವೈಷ್ಣೋದೇವಿಗೆ ಹೋಗುವುದಕ್ಕೆ ಸಿದ್ಧತೆ ಮಾಡಿದ್ದ ಎಂಬುದಾಗಿ ವರದಿಯಾಗಿದೆ.
ಪೊಲೀಸರು ಶಿವಕುಮಾರ್ ಅವರ ಕುಟುಂಬ ಮತ್ತು ನಿಕಟ ಸಂಪರ್ಕಗಳು ಸೇರಿದಂತೆ 45 ವ್ಯಕ್ತಿಗಳನ್ನು ಪತ್ತೆಹಚ್ಚಿದ್ದರು. ಅಂತಿಮವಾಗಿ ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದ ನಾಲ್ಕು ಪ್ರಮುಖ ಸಹಚರರನ್ನು ಹಿಡಿದಿದ್ದರು. ಉತ್ತರ ಪ್ರದೇಶ ಮತ್ತು ಮುಂಬೈ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಹ್ರೈಚ್‌ನ ನನ್ಪಾರಾ ಪ್ರದೇಶದಲ್ಲಿ ಶಿವ ಕುಮಾರ್ ನನ್ನು ಸೆರೆ ಹಿಡಿಯಲಾಗಿತ್ತು.
ಅನುರಾಗ್ ಕಶ್ಯಪ್, ಗ್ಯಾನ್ ಪ್ರಕಾಶ್ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಮತ್ತು ಅಖಿಲೇಶ್ ಪ್ರತಾಪ್ ಸಿಂಗ್ ಅವರು ಶಿವ ಕುಮಾರ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಜೈಲು ಸೇರಿದ್ದಾರೆ. . ಈ ಪ್ರಕರಣದಲ್ಲಿ ಈವರೆಗೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ. ನಟ ಸಲ್ಮಾನ್ ಖಾನ್ ಅವರೊಂದಿಗಿನ ಬಾಬಾ ಸಿದ್ದಿಕಿ ಅವರ ನಿಕಟ ಸಂಬಂಧವೇ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಸಹಚರರು ದಶಕಗಳ ಹಿಂದೆ ಸಲ್ಮಾನ್ ಖಾನ್ ಕೃಷ್ಣ ಮೃಗ ಕೊಂದಿದ್ದಾರೆ ಎಂಬ ದ್ವೇಷವನ್ನು ಹೊಂದಿದ್ದಾರೆ.