Sabarimala pilgrims : ಶಬರಿಮಲೆ ಯಾತ್ರಿಕರಿಗೆ ಈ ಬಾರಿ ʼಸ್ವಾಮಿ ಚಾಟ್‌ಬಾಟ್‌ʼ ಕೃತಕ ಬುದ್ಧಿಮತ್ತೆ ಸಹಾಯ

ಸ್ವಾಮಿ ಚಾಟ್‌ಬಾಟ್‌ ಅನ್ನು , ಪಟ್ಟನಂತಿಟ್ಟ ಜಿಲ್ಲಾಡಳಿತ ಪರಿಚಯಿಸಿದೆ. ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಎಂಬ ಆರು ಭಾಷೆಗಳಲ್ಲಿ ಸಮಗ್ರ ಸೇವೆ ಪಡೆಯಲು ಸಾಧ್ಯವಿದೆ.;

Update: 2024-11-14 10:17 GMT
ಶಬರಿಮಲೆ ಭಕ್ತರು (ಸಂಗ್ರಹ ಚಿತ್ರ)

ತಂತ್ರಜ್ಞಾನದ ನೆರವು ಎಲ್ಲ ಕ್ಷೇತ್ರಕ್ಕೂ ಸುಲಭವಾಗಿ ದಕ್ಕುತ್ತಿದೆ. ಅದರಲ್ಲೂ ಈಗ ಬಂದಿರುವ ಕೃತಕ ಬುದ್ಧಿಮತ್ತೆ ದೊಡ್ಡ ವರವಾಗಿ ಪರಿಣಮಿಸಿದೆ. ಅಂತೆಯೇ ಭಾರತದಲ್ಲಿ ಅತ್ಯಂತ ಪವಿತ್ರವಾಗಿರುವ ಶಬರಿಮಲೆ ಯಾತ್ರಿಕರಿಗೂ ಇದೀಗ ಕೃತಕ ಬುದ್ಧಿ ಮತ್ತೆಯಾಗಿರುವ ʼಸ್ವಾಮಿ ಚಾಟ್‌ಬಾಟ್‌ʼ ನೆರವು ದೊರೆಯಲಿದೆ. ಈ ಎಐ ಅಸಿಸ್ಟೆಂಟ್‌ʼನ ಲೋಗೊವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಬುಧವಾರ ಅನಾವರಣಗೊಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ ಇಂಟರ್‌ಫೇಸ್‌ ಮೂಲಕ ಈ ಚಾಟ್‌ಬಾಟ್‌ ಸೇವೆ ಪಡೆಯಬಹುದು. ಸ್ವಾಮಿ ಚಾಟ್‌ಬಾಟ್‌ ಅನ್ನು , ಪಟ್ಟನಂತಿಟ್ಟ ಜಿಲ್ಲಾಡಳಿತ ಪರಿಚಯಿಸಿದೆ. ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಎಂಬ ಆರು ಭಾಷೆಗಳಲ್ಲಿ ಸಮಗ್ರ ಸೇವೆ ಪಡೆಯಲು ಸಾಧ್ಯವಿದೆ.

ಚಾಟ್‌ಬಾಟ್‌ ಯಾತ್ರೆ ಸಮಯದ ಭದ್ರತೆ, ಪೂಜಾ ಸಮಯ ಮತ್ತು ವಿಮಾನ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ. ಅದೇ ದೇವಾಲಯದ ವಿಧಿ ವಿಧಾನಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇದು ಪೊಲೀಸ್ ಮತ್ತು ಅರಣ್ಯ ಸೇವೆಗಳಂತಹ ಅಗತ್ಯ ಇಲಾಖೆಗಳಿಂದ ಸೇವೆ ಪಡೆಯಲು ನೆರವಾಗಲಿದೆ. ಯಾತ್ರಾರ್ಥಿಗಳಿಗೆ ಸುರಕ್ಷಿತ ಮತ್ತು ನಿಖರ ತೀರ್ಥಯಾತ್ರೆಯ ಅನುಭವ ನೀಡಲಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಈ ಆಧುನಿಕ ಡಿಜಿಟಲ್ ವ್ಯವಸ್ಥೆಯ ಮೂಲಕ, ಶಬರಿಮಲೆ ಪ್ರಯಾಣವು ಹೆಚ್ಚು ಅನುಕೂಲಕರ ಮತ್ತು ಸುರಕ್ಷಿತವಾಗಲಿದೆ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಭಕ್ತರಿಗೆ ಸಾಧ್ಯವಾದಷ್ಟು ಬೇಗ ಸೇವೆಗಳನ್ನು ತಲುಪಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಮುತ್ತೂಟ್ ಗ್ರೂಪ್‌ನ ಸಹಕಾರದೊಂದಿಗೆ ಅವರ ಉಪಕ್ರಮ ಆರಂಭಿಸಲಾಗಿದೆ ಎಂದು ಅದು ಹೇಳಿದೆ. 

Tags:    

Similar News