ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ

ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಗುರುವಾರ ರಾತ್ರಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ ಜನರಲ್ ವಿಕೆ ಬರ್ಡಿ ತಿಳಿಸಿದ್ದಾರೆ.

Update: 2024-11-09 08:10 GMT
ಉಗ್ರರಿಂದ ವಶಪಡಿಸಿಕೊಂಡಿರುವ ವಸ್ತುಗಳು.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಅವರ ಗುರುತು ಮತ್ತು ಯಾಗ ಗುಂಪಿನ ಸದಸ್ಯರು ಎಂಬದನ್ನು ಕಂಡುಹಿಡಿಯಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭದ್ರತಾ ಪಡೆಗಳು ಗುಪ್ತಚರ ಆಧಾರಿತ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಗುರುವಾರ ರಾತ್ರಿ ಪ್ರಾರಂಭವಾದ ಎನ್‌ಕೌಂಟರ್‌ ನಂತರ ಹತ್ಯೆಗೀಡಾದ ಭಯೋತ್ಪಾದಕರಿಂದ ವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಗುರುವಾರ ರಾತ್ರಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ ಜನರಲ್ (ಕಾಶ್ಮೀರ ವಲಯ) ವಿಕೆ ಬರ್ಡಿ ತಿಳಿಸಿದ್ದಾರೆ.

"ಉಗ್ರರನ್ನು ಭದ್ರತಾ ಪಡೆದ ಸುತ್ತುವರಿದಿರುವಾಗ ಗುಂಡಿನ ಚಕಮಕಿ ಶುರುವಾಯಿತು. ಮೊದಲು ನಾಗರಿಕರನ್ನು ಪ್ರದೇಶದಿಂದ ಹೊರಕ್ಕೆ ಕಳುಹಿಸುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮ ಎಂದು ನಾವು ಭಾವಿಸಿದೆವು. ಈ ಪ್ರಕ್ರಿಯೆಯು ಎನ್‌ಕೌಂಟರ್‌ ಆಗಿ ಮಾರ್ಪಟ್ಟಿತು. ಇದು ಶುಕ್ರವಾರ ಬೆಳಿಗ್ಗಿನ ವೇಳೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡುವ ಮೂಲಕ ಕೊನೆಗೊಂಡಿತು" ಎಂದು ಬರ್ಡಿ ಹೇಳಿದ್ದಾರೆ.

ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅವರು ಹೇಳಿದರು 

Tags:    

Similar News