Union Budget 2024: ರೂಪಾಯಿ ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ?

ನೇರ, ಪರೋಕ್ಷ ತೆರಿಗೆಗಳಿಂದ ಸರ್ಕಾರದ ಬೊಕ್ಕಸಕ್ಕೆ 63 ಪೈಸೆ(ಪ್ರತಿ ರೂಪಾಯಿ) ಬರುತ್ತದೆ.;

Update: 2024-07-23 15:29 GMT

ಕೇಂದ್ರ ಬಜೆಟ್ 2024-25 ದಾಖಲೆಗಳ ಪ್ರಕಾರ, ಸರ್ಕಾರದ ಬೊಕ್ಕಸಕ್ಕೆ ರುಪಾಯಿಯಲ್ಲಿ 63 ಪೈಸೆ ಪೈಸೆ ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಬರುತ್ತದೆ. ಉಳಿದ 27 ಪೈಸೆ ಸಾಲ ಮತ್ತು ಇತರ ಹೊಣೆಗಾರಿಕೆಗಳಿಂದ, 9 ಪೈಸೆ ತೆರಿಗೆಯೇತರ ಆದಾಯದಿಂದ(ಹೂಡಿಕೆ ಹಿಂಪಡೆಯುವಿಕೆ ಇತ್ಯಾದಿ) ಮತ್ತು 1 ಪೈಸೆ ಸಾಲವಲ್ಲದ ಬಂಡವಾಳ ರಸೀದಿಗಳಿಂದ ಬರಲಿದೆ ಎಂದು ಬಜೆಟ್ ದಾಖಲೆಗಳು ಹೇಳುತ್ತವೆ. 

ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆ ಸೇರಿದಂತೆ ನೇರ ತೆರಿಗೆಯಿಂದ 36 ಪೈಸೆ ಬರುತ್ತದೆ. ಇದರಲ್ಲಿ ಆದಾಯ ತೆರಿಗೆ ಪಾಲು 19 ಪೈಸೆ ಹಾಗೂ ಕಾರ್ಪೊರೇಟ್ ತೆರಿಗೆ ಪಾಲು 17 ಪೈಸೆ. ಪರೋಕ್ಷ ತೆರಿಗೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾಲು ಗರಿಷ್ಠ 18 ಪೈಸೆ. ಸರ್ಕಾರವು ಅಬಕಾರಿ ಸುಂಕದಿಂದ 5 ಪೈಸೆ ಮತ್ತು ಕಸ್ಟಮ್ಸ್ ಲೆವಿಯಿಂದ 4 ಪೈಸೆ ಗಳಿಸಲಿದೆ. ಹಣಕಾಸು ಸಚಿವೆ ಮಂಡಿಸಿದ ಆಯವ್ಯಯದ ಪ್ರಕಾರ, ʻಸಾಲಗಳು ಮತ್ತು ಇತರ ಹೊಣೆಗಾರಿಕೆʼಗಳಿಂದ ಸಂಗ್ರಹ 27 ಪೈಸೆ.

ಪ್ರಮುಖ ಹಂಚಿಕೆಗಳು: ವೆಚ್ಚದಲ್ಲಿ ಬಡ್ಡಿ ಪಾವತಿಗೆ 19 ಪೈಸೆ ಮತ್ತು ರಾಜ್ಯಗಳ ತೆರಿಗೆ ಹಾಗೂ ಸುಂಕದ ಪಾಲು 21 ಪೈಸೆ. ರಕ್ಷಣಾ ವೆಚ್ಚ 8 ಪೈಸೆ. ಕೇಂದ್ರ ವಲಯದ ಯೋಜನೆಗಳ ವೆಚ್ಚ 16 ಪೈಸೆ. ಆದರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಂಚಿಕೆ 8 ಪೈಸೆ. ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳ ವೆಚ್ಚವನ್ನು 9 ಪೈಸೆ. ಸಬ್ಸಿಡಿಗಳಿಗೆ 6 ಪೈಸೆ ಮತ್ತು ಪಿಂಚಣಿ 4 ಪೈಸೆ. ಸರ್ಕಾರ ಪ್ರತಿ ರೂಪಾಯಿಯಲ್ಲಿ 9 ಪೈಸೆಯನ್ನು 'ಇತರ ಖರ್ಚು'ಗಳಿಗೆ ವೆಚ್ಚ ಮಾಡುತ್ತದೆ. 

Tags:    

Similar News