Infosys Layoffs : ಇನ್ಫೋಸಿಸ್ ಉದ್ಯೋಗಿಗಳ ವಜಾ. ಮುಷ್ಕರದ ಎಚ್ಚರಿಕೆ ನೀಡಿದ ಪುಣೆ ಐಟಿ ನೌಕರರ ಸಂಘ
ಇನ್ಫೋಸಿಸ್ ಸಂಘಟನೆ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದು, ಕಾರ್ಯಕ್ಷಮತೆಯ ಮೌಲ್ಯಮಾಪನ ಕಂಪನಿಯ ನಿಯಮ ಎಂಬ ತಿಳುವಳಿಕೆಯೊಂದಿಗೆ ಅವರನ್ನು ಯೋಜನೆಗೆ ಸೇರಿಸಲಾಗಿತ್ತು ಎಂದು ಹೇಳಿದೆ.;
ಇನ್ಫೋಸಿಸ್ನಿಂದ ವಜಾಗೊಂಡಿರುವ ಟ್ರೈನಿಗಳ ಪರವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಹೋದರೆ, ತರಬೇತಿದಾರರೊಂದಿಗೆ ಪ್ರತಿಭಟನೆ ಆರಂಭಿಸುತ್ತೇವೆ ಎಂದು ಪುಣೆ ಮೂಲದ ಐಟಿ ಕಾರ್ಮಿಕರ ಒಕ್ಕೂಟ ಎನ್ಐಟಿಇಎಸ್ ಬುಧವಾರ ಎಚ್ಚರಿಕೆ ನೀಡಿದೆ.
ಹೊಸ ಮಾಹಿತಿ ತಂತ್ರಜ್ಞಾನ ನೌಕರರ ಸೆನೆಟ್ (ಎನ್ಐಟಿಇಎಸ್) ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದು, " ವಜಾಗೊಂಡಿರುವ ಉದ್ಯೋಗಿಗಳು ಅರ್ಹ ನ್ಯಾಯಸಮ್ಮತ ಮತ್ತು ಗೌರವ ಪಡೆಯುವವರೆಗೆ ಸಂಘಟನೆಯು ಅವರೊಂದಿಗೆ ನಿಲ್ಲುತ್ತದೆ. ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಎನ್ಐಟಿಇಎಸ್, ಎಲ್ಲಾ ಉದ್ಯೋಗಿಗಳೊಂದಿಗೆ ಇನ್ಫೋಸಿಸ್ ಕ್ಯಾಂಪಸ್ ಹೊರಗಡೆ ಬೃಹತ್ ಮುಷ್ಕರ ಆರಂಭಿಸಲಿದೆ " ಎಂದು ಹೇಳಿದೆ.
"ಅನ್ಯಾಯ ಪರಿಹರಿಸಲು ತಕ್ಷಣದ ಕ್ರಮ ತೆಗೆದುಕೊಳ್ಳಬೇಕು. ಕಂಪನಿಯನ್ನು ಈ ವಿಚಾರದಲ್ಲಿ ಹೊಣೆಗಾರರನ್ನಾಗಿ ಮಾಡಬೇಕು,'' ಎಂದು ಸಂಘಟನೆ ಹೇಳಿದೆ.
ಇನ್ಫೋಸಿಸ್ ಸಂಘಟನೆ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದು, ಕಾರ್ಯಕ್ಷಮತೆಯ ಮೌಲ್ಯಮಾಪನ ಕಂಪನಿಯ ನಿಯಮ ಎಂಬ ತಿಳುವಳಿಕೆಯೊಂದಿಗೆ ಅವರನ್ನು ಯೋಜನೆಗೆ ಸೇರಿಸಲಾಗಿತ್ತು ಎಂದು ಹೇಳಿದೆ .
"ಇನ್ಫೋಸಿಸ್ ಸೇರುವ ಪ್ರತಿಯೊಬ್ಬ ತರಬೇತಿದಾರರು ನೋಂದಣಿ ಫಾರ್ಮ್ ಭರ್ತಿ ಮಾಡುತ್ತಾರೆ. ಅವರಿಗೆ ನೀಡುವ ತರಬೇತಿ ವೆಚ್ಚವನ್ನು ಸಂಪೂರ್ಣವಾಗಿ ಇನ್ಫೋಸಿಸ್ ಭರಿಸುತ್ತದೆ. ನಮ್ಮ ಪರೀಕ್ಷಾ ಪ್ರಕ್ರಿಯೆಗಳನ್ನು ದಾಖಲೆಗಳಲ್ಲಿ ನಿರೂಪಿಸಲಾಗಿದೆ. ಎಲ್ಲಾ ತರಬೇತಿದಾರರಿಗೆ ಈ ಕುರಿತು ಮಾಹಿತಿ ನೀಡಿರಲಾಗುತ್ತದೆ " ಎಂದು ಇನ್ಫೋಸಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮೈಸೂರು ಕ್ಯಾಂಪಸ್ನಲ್ಲಿ ಬೆದರಿಕೆ ಒಡ್ಡಿ 300 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಇನ್ಫೋಸಿಸ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶಾಜಿ ಮ್ಯಾಥ್ಯೂ, ''ತರಬೇತಿ ನೀಡುವ ಮೂಲಕ ನೌಕರರನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕಾಗಿ ಕಂಪನಿ ಹಣ ವಿನಿಯೋಗಿಸುತ್ತದೆ. ಹಣ ಹೂಡಿಕೆ ಮಾಡುವ ಕಾರಣ ಎಲ್ಲರೂ ಉತ್ತಮವಾಗಿ ಕೆಲಸ ಮಾಡಬೇಕು ಎಂಬುದು ಕಂಪನಿಯ ಹಿತಾಸಕ್ತಿಯಾಗಿದೆ. ಹೀಗಾಗಿ ಇದರಲ್ಲಿ ಯಾವುದೇ ಬೆದರಿಕೆ ತಂತ್ರಗಳು ಇಲ್ಲ,'', ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಭಾರತದ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿ ತನ್ನ ಮೈಸೂರು ಕ್ಯಾಂಪಸ್ನಲಲ್ಇ ತರಬೇತಿ ಪಡೆದ ಆದರೆ ಆಂತರಿಕ ಮೌಲ್ಯಮಾಪನಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ 300 ಕ್ಕೂ ಹೆಚ್ಚು ಮಂದಿಯನ್ನು ವಜಾಗೊಳಿಸಿತ್ತು.