ಭಾರತದ ಉದ್ಯೋಗ ವರದಿ: ಚುನಾವಣೆಗೆ ಮುನ್ನ ಸಿಡಿದ ಬಾಂಬ್

ಉದ್ಯೋಗ ಸೃಷ್ಟಿಸಿದ್ದೇವೆ ಎಂಬ ಬಿಜೆಪಿ ಹೇಳಿಕೆ ಸುಳ್ಳು

Update: 2024-03-29 12:44 GMT

ಲೋಕಸಭೆ ಚುನಾವಣೆ ಪ್ರಚಾರದಲ್ಲಿ ನಿರುದ್ಯೋಗ ಪ್ರಮುಖ ವಿಷಯವಾಗಿದ್ದು, 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವು ದಾಗಿ ಮೋದಿ ಅವರು ಆಶ್ವಾಸನೆ ನೀಡಿದ್ದರು. ಅದರಲ್ಲಿ ಶೋಚನೀಯವಾಗಿ ವಿಫಲರಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಕಾಂಗ್ರೆಸ್ ʻಶಿಷ್ಯವೃತ್ತಿ ಗ್ಯಾರಂಟಿ ಕಾರ್ಯಕ್ರಮʼ ಕ್ಕೆ ಶಾಸನಾತ್ಮಕ ರಕ್ಷಣೆ ನೀಡುವುದಾಗಿ ಹೇಳಿಕೊಂಡಿದೆ. 

ಇದೇ ಹೊತ್ತಿನಲ್ಲಿ ಮಾನವ ಅಭಿವೃದ್ಧಿ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ಹೊರತಂದಿರುವ ಇಂಡಿಯಾ ಎಂಪ್ಲಾಯ್ಮೆಂಟ್‌ ವರದಿ 2024, ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ. ವರದಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ʻಬಿಜೆಪಿ ಎಂದರೆ ನಿರುದ್ಯೋಗ, ಕಾಂಗ್ರೆಸ್ ಎಂದರೆ ಉದ್ಯೋಗ ಕ್ರಾಂತಿ" ಎಂದು ಘೋಷಿಸಿದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಪಿ. ಚಿದಂಬರಂ ಹಾಗೂ ಎಂ.ಕೆ. ಸ್ಟಾಲಿನ್ ಕೂಡ ಸರ್ಕಾರದ ಮೇಲೆ ದಾಳಿ ಮಾಡಲು ಈ ವರದಿ ಬಳಸಿಕೊಂಡರು. 

ಯುವಜನರ ನಿರುದ್ಯೋಗ: ವರದಿ ಪ್ರಕಾರ, ದೇಶದಲ್ಲಿ ಶೇ. 83 ರಷ್ಟು ಯುವಜನರು ನಿರುದ್ಯೋಗಿಗಳಾಗಿದ್ದು, ಅದರಲ್ಲಿ ಶೇ. 65.7 ರಷ್ಟು ಮಂದಿ ವಿದ್ಯಾವಂತರು. ದೇಶದಲ್ಲಿ ಉದ್ಯೋಗ ಬೆಳೆಯುತ್ತಿಲ್ಲ. 2022ರ ಎರಡನೇ ತ್ರೈಮಾಸಿಕದಲ್ಲಿ ನಗರಗಳಲ್ಲಿ ಕಾರ್ಮಿಕ-ಯವಜನರ ಅನುಪಾತ ಶೇ.34.9 ಇದೆ. ಇದು ಕೋವಿಡ್‌ ಕಾಲದ 2019 ರ ನಾಲ್ಕನೇ ತ್ರೈಮಾಸಿಕದ ಶೇ.32.5 ಅನುಪಾತಕ್ಕಿಂತ ಸ್ವಲ್ಪ ಹೆಚ್ಚು. 

ಯುವ ನಿರುದ್ಯೋಗವು 2021 ಮತ್ತು 2022 ರಲ್ಲಿಇದ್ದ ಸುಮಾರು ಶೇ. 15 ರಲ್ಲಿ ಸ್ಥಿರವಾಗಿದೆ. ಓದಲು ಮತ್ತು ಬರೆಯಲು ಬಾರದ ಯುವಜನರಿಗೆ ಹೋಲಿಸಿದರೆ, 2022 ರಲ್ಲಿ ಮಾಧ್ಯಮಿಕ ಅಥವಾ ಉನ್ನತ ಮಟ್ಟದ ಶಿಕ್ಷಣ ಪಡೆದಿರುವವರಲ್ಲಿ ಆರು ಪಟ್ಟು ಹೆಚ್ಚಿದೆ(ಶೇ. 18.4) ಮತ್ತು ಪದವೀಧರರಲ್ಲಿ ಇದು ಒಂಬತ್ತು ಪಟ್ಟು (ಶೇ.29.1) ಇದೆ. ಇದರರ್ಥ, ಸುಮಾರು ಶೇ.30ರಷ್ಟು ಯುವ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. 

ಉದ್ಯೋಗ ಸೃಷ್ಟಿ ಸ್ಥಗಿತ: ಏಳು ಕಾರ್ಮಿಕ ಮಾರುಕಟ್ಟೆ ಸೂಚಕಗಳ ಆಧಾರದ ಮೇಲೆ ಉದ್ಯೋಗ ಪರಿಸ್ಥಿತಿ ಸೂಚ್ಯಂಕವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಸೂಚ್ಯಂಕವು 2005 ರಿಂದ 2019 ರವರೆಗಿನ ಉದ್ಯೋಗದ ಸನ್ನಿವೇಶದಲ್ಲಿ ಸ್ಥಿರ ಸುಧಾರಣೆ ತೋರಿಸುತ್ತದೆ. ಆದರೆ, ಇದು 2019 ರಲ್ಲಿ ಸ್ಥಗಿತಗೊಂಡಿತು ಮತ್ತು ಕುಸಿಯಲಾರಂಭಿಸಿತು. 

ಯಾಕೆ ಹೀಗೆ?: 2019 ರ ನಂತರದ ಉದ್ಯೋಗದ ಕುಸಿತಕ್ಕೆ ಮುಖ್ಯ ಕಾರಣ, ಕೃಷಿಯೇತರ ವಲಯಗಳು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸದಿರುವುದು. ಉತ್ಪಾದನಾ ವಲಯದ ಉದ್ಯೋಗದ ಪಾಲು ಶೇ.12-14 ರಲ್ಲಿ ನಿಶ್ಚಲವಾಗಿದೆ. ಸಾಂಕ್ರಾಮಿಕದ ಕಾಲದಲ್ಲಿ ಹಿಮ್ಮುಖ ವಲಸೆಯಿಂದ ಹೆಚ್ಚಳಗೊಂಡ ಕೃಷಿ ಉದ್ಯೋಗ ಹಿಂದಿನ ಮಟ್ಟಕ್ಕೆ ಬಂದಿಲ್ಲ. ಎರಡನೆಯದಾಗಿ, ಯಾಂತ್ರೀಕರಣದಿಂದ ಉತ್ಪಾದನೆ ಪ್ರಕ್ರಿಯೆಯು ಹೆಚ್ಚು ಬಂಡವಾಳ ಮತ್ತು ಕಾರ್ಮಿಕ ಶ್ರಮ ಉಳಿತಾಯವಾಗಿದೆ. 2000-2019 ಅವಧಿಯಲ್ಲಿ ಕಡಿಮೆ ಕೆಲಸಗಾರರನ್ನು ನೇಮಿಸಿಕೊಳ್ಳಲಾಗಿದೆ.

ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ಆಘಾತಕಾರಿ ಕಡಿಮೆ ಮಟ್ಟದಿಂದ ಸ್ವಲ್ಪ ಹೆಚ್ಚಾಗಿದೆ. ಆದರೆ, ಹೆಚ್ಚಳ ಕಡಿಮೆ ಆದಾಯದ ಸ್ವಯಂ ಉದ್ಯೋಗದ ವಿಭಾಗದಲ್ಲಿದೆ. ಕಾರ್ಮಿಕರ ಗಳಿಕೆ: ಒಟ್ಟಾರೆಯಾಗಿ ವೇತನ ಕಡಿಮೆಯಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಶೇ. 62 ರಷ್ಟು ಕೌಶಲರಹಿತ ಹಂಗಾಮಿ ಕೃಷಿ ಕಾರ್ಮಿಕರು ಮತ್ತು ಅಂತಹ ಕಾರ್ಮಿಕರಲ್ಲಿ ಶೇ. 70 ರಷ್ಟು ಮಂದಿ 2022ರಲ್ಲಿ ನಿಗದಿತ ದೈನಂದಿನ ಕನಿಷ್ಠ ವೇತನ ಪಡೆಯಲಿಲ್ಲ. 2019 ರ ನಂತರ ಸ್ವಯಂ ಉದ್ಯೋಗಿಗಳ ನೈಜ ಗಳಿಕೆ ಕೂಡ ಕುಸಿದಿದೆ.

ಕೌಶಲದ ಅಸಾಮರಸ್ಯ: 2000- 2019 ರ ಅವಧಿಯಲ್ಲಿ ಉದ್ಯಮ ಮತ್ತು ಸೇವೆಗಳಲ್ಲಿನ ಉದ್ಯೋಗದ ಕೌಶಲ ಹೆಚ್ಚಿದ್ದರೂ, ಈ ಹೆಚ್ಚಳವು ದೇಶದ ಕಾರ್ಮಿಕ ಮಾರುಕಟ್ಟೆಯ ಅಗತ್ಯಗಳಿಗೆ ವಿರುದ್ಧವಾಗಿದೆ. ಉದ್ಯೋಗದಲ್ಲಿರುವ ವಿದ್ಯಾವಂತ ಯುವಕರಲ್ಲಿ ಅನೇಕರು ಅತಿಯಾದ ಅರ್ಹತೆ ಹೊಂದಿದ್ದಾರೆ.

ಇದರರ್ಥ, ಕೆಳ ಹಂತದ ಉದ್ಯೋಗದಲ್ಲಿದ್ದು, ಕಡಿಮೆ ವೇತನ ಪಡೆಯುತ್ತಾರೆ. ಉದಾಹರಣೆಗೆ, ಹೆಚ್ಚು ತಾಂತ್ರಿಕ ಅರ್ಹತೆ ಹೊಂದಿರುವ ಯುವಕರಲ್ಲಿ ಐದನೇ ಎರಡು ಭಾಗದಷ್ಟು ಜನರು ನೀಲಿ ಕಾಲರ್ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಗಿಗ್ ಉದ್ಯೋಗ: ಇತ್ತೀಚೆಗೆ ಕ್ಷಿಪ್ರ ವಿಸ್ತರಣೆ ಕಂಡ ಏಕೈಕ ವಲಯವೆಂದರೆ ವಿತರಣೆ ಕೆಲಸಗಾರರು ಮತ್ತು ಓಲಾ-ಊಬರ್‌ ಡ್ರೈವರ್‌ಗಳಂತಹ ಗಿಗ್ ಉದ್ಯೋಗ. ವರದಿ ಪ್ರಕಾರ,ʼ ಗಿಗ್ ಉದ್ಯೋಗ ವಿಸ್ತರಿಸುತ್ತಿದೆ. ಆದರೆ, ಇದು ಹೆಚ್ಚಿನ ಮಟ್ಟಿಗೆ, ಅನೌಪಚಾರಿಕ ಕೆಲಸದ ವಿಸ್ತರಣೆಯಾಗಿದೆ. ಯಾವುದೇ ಸಾಮಾಜಿಕ ಭದ್ರತೆ ನಿಬಂಧನೆಗಳಿಲ್ಲʼ. 

ಪ್ರಾದೇಶಿಕ ಅಸಮಾನತೆ ಹೆಚ್ಚಳ: ರಾಜ್ಯಗಳು ಮತ್ತು ಪ್ರದೇಶಗಳಾದ್ಯಂತ ಉದ್ಯೋಗದಲ್ಲಿ ತೀಕ್ಷ್ಣ ಅಸಮಾನತೆಯಿದೆ. ಬಿಹಾರ, ಉತ್ತರ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಛತ್ತೀಸ್‌ಗಢವು ಹೆಚ್ಚು ಕಳಪೆ ಉದ್ಯೋಗ ಫಲಿತಾಂಶ ದಾಖಲಿಸಿದೆ. ಅವರು 2022ರಲ್ಲೂ 2005 ರಲ್ಲಿದ್ದ ಕೆಳಗಿನ ಹಂತದಲ್ಲೇ ಉಳಿದಿದ್ದಾರೆ. 2030 ರ ವೇಳೆಗೆ ವಲಸೆ ದರವು ಕಾರ್ಮಿಕ ಬಲದ ಶೇ.40 ತಲುಪುವ ನಿರೀಕ್ಷೆಯಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ದೇಶ ವಲಸೆ ಕಾರ್ಮಿಕರ ಸಂಕಟಕ್ಕೆ ಸಾಕ್ಷಿಯಾಗಿದೆ. ಆರ್ಥಿಕತೆ ಮತ್ತೆ ಸ್ಥಗಿತಗೊಂಡರೆ ಅಂತಹ ಬಿಕ್ಕಟ್ಟಿನ ಸಾಧ್ಯತೆ ಇರುತ್ತದೆಯೇ?

ದಾರಿಯೇನು?: ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ,ಹೆಚ್ಚು ಕಾರ್ಮಿಕರು ಅಗತ್ಯವಿರುವ ವಲಯಗಳನ್ನು ಉತ್ತೇಜಿಸುವುದು, ಎಂಎಸ್‌ಎಂಇ ಮೇಲೆ ಹೆಚ್ಚಿನ ಗಮನ, ಉದ್ಯೋಗದ ಗುಣಮಟ್ಟ ಸುಧಾರಣೆ, ವಲಸಿಗರ ಅಗತ್ಯಗಳನ್ನು ಪರಿಹರಿಸುವುದು, ಕಾರ್ಮಿಕ ಮಾರುಕಟ್ಟೆಯ ಅಸಮಾನತೆಗಳನ್ನು ನಿವಾರಿಸುವುದು ಸೇರಿದಂತೆ ವರದಿ ಹಲವು ಶಿಫಾರಸುಗಳನ್ನು ಮಾಡಿದೆ.

2030 ರವರೆಗೆ ವಾರ್ಷಿಕ 12 ದಶಲಕ್ಷ ಕೃಷಿಯೇತರ ಉದ್ಯೋಗಗಳನ್ನುಸೃಷ್ಟಿಸಲು,ವಾರ್ಷಿಕ ಜಿಡಿಪಿ ಬೆಳವಣಿಗೆ 8.0 ರಿಂದ 8.5 ರಷ್ಟುಇರಬೇಕು ಎಂದು ರೇಟಿಂಗ್ ಏಜೆನ್ಸಿ ಮೆಕಿನ್ಸೆ ಗಮನಿಸಿದೆ. 2023-24 ರಲ್ಲಿ ದೇಶದ ಜಿಡಿಪಿ 7.8 ಇದೆ. ದೇಶ 8 ರಷ್ಟು ಬೆಳವಣಿಗೆ ಹಂತಕ್ಕೆ ಮರಳಲಿದೆ ಎಂದು ಬಿಜೆಪಿ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಹೇಳಿದ್ದಾರೆ.

ಭಾರತವು ಚೀನಾಕ್ಕೆ ಪರ್ಯಾಯ ಹೂಡಿಕೆ ತಾಣವಾಗಿ ಪರಿಗಣಿಸಲ್ಪಟ್ಟಿದ್ದು, ಖಾಸಗಿ ಹೂಡಿಕೆ ಚೇತರಿಸಿಕೊಂಡಿಲ್ಲ. ಭಾರತದ ಬೆಳವಣಿಗೆ ಪಥವು ಕಡಿಮೆ ಇಂಗಾಲ ತೀವ್ರ ಮತ್ತು ಹೆಚ್ಚು ಹವಾಮಾನ ಸ್ಥಿತಿಸ್ಥಾಪಕವಾಗಿದೆಯೇ?

ತಂತ್ರಜ್ಞಾನ ವಿಲನ್ ಆಗಬಹುದು: ತಜ್ಞ  ವರದಿಯ ಮುಖ್ಯ ಲೇಖಕರಲ್ಲಿ ಒಬ್ಬರಾದ ಪ್ರೊ.ರವಿ ಶ್ರೀವಾಸ್ತವ ಫೆಡರಲ್‌ ಜೊತೆ ಮಾತನಾಡಿ,ʻ ಉನ್ನತ ಬೆಳವಣಿಗೆ ದರದ ಬಗ್ಗೆಊಹಾ ಪೋಹವಿದ್ದರೂ, ಉದ್ಯೋಗದಲ್ಲಿ ಹೆಚ್ಚಿನ ಬೆಳವಣಿಗೆ ಸಾಧ್ಯವಿದೆ ಎಂದು ಯಾವುದೇ ಸಂಸ್ಥೆ ಹೇಳಿಲ್ಲ. ಡಿಜಿಟಲೀಕರಣದಿಂದ ಕಾರ್ಮಿಕ ಸ್ಥಳಾಂತರವಾಗಿದೆ. ಹೊಸ ತಂತ್ರಜ್ಞಾನಗಳು ಖಳನಾಯಕರಾಗಿ ಹೊರಹೊಮ್ಮಬಹುದು. ಎರಡನೆಯದಾಗಿ, ನಿರಂತರ ಬೆಳವಣಿಗೆಗೆ ಅಗತ್ಯವಾದ ಕೌಶಲ ಮತ್ತು ಸೂಕ್ತ ಶಿಕ್ಷಣವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಉನ್ನತ ಶಿಕ್ಷಣ ಪಡೆದ ಯುವಕರು ಸರಿಯಾದ ಕೌಶಲಗಳನ್ನು ಹೊಂದಿಲ್ಲ. ಯುವಜನರು ತುಂಬಾ ಕಳಪೆ ಕೌಶಲ ಹೊಂದಿದ್ದಾರೆ. ಶಿಕ್ಷಣದ ಗುಣಮಟ್ಟ ಬಹಳ ಕಳಪೆಯಾಗಿದೆʼ. 

ʻಬೇಡಿಕೆಯಲ್ಲಿನ ನಿರ್ಬಂಧಗಳನ್ನು ನಿವಾರಿಸುವುದು ಕೂಡ ಮುಖ್ಯ. ಉದ್ಯೋಗ ಹೆಚ್ಚಾಗದ ಹೊರತು, ಕೌಶಲಗಳ ಪೂರೈಕೆಯಲ್ಲಿ ನಿರಂತರ ಹೆಚ್ಚಳ ಸಾಧ್ಯವಿಲ್ಲ. ಅದಕ್ಕಾಗಿಯೇ ಉತ್ಪಾದನೆಯ ಬೆಳವಣಿಗೆ, ಕೃಷಿ ಬೆಳವಣಿಗೆ ಮತ್ತು ಸೇವೆ ಕ್ಷೇತ್ರದ ಬೆಳವಣಿಗೆಗೆ ಆದ್ಯತೆಯನ್ನು ಪ್ರತಿಪಾದಿಸಿದ್ದೇವೆ,ʼ ಎಂದು ಹೇಳಿದರು.

Tags:    

Similar News