IPL 2024| ಸಿಎಸ್‌ಕೆ ಮತ್ತು ಆರ್‌ಸಿಬಿ ಗೆಲುವಿನ ಸಾಧ್ಯತೆ ಎಷ್ಟು?

ಈವರೆಗೆ ಫಲಿತಾಂಶ ಸಿಎಸ್‌ಕೆ ಪರವಾಗಿದೆ. ಆರ್‌ಸಿಬಿ ಐದು ಪಂದ್ಯಗಳಲ್ಲಿಸಿಎಸ್‌ಕೆ ವಿರುದ್ಧ ಒಮ್ಮೆ ಮಾತ್ರ ಗೆದ್ದಿದೆ. ಐಪಿಎಲ್‌ನ ಎಲ್ಲ ಪಂದ್ಯಗಳಲ್ಲಿ ಗೆಲುವಿನ ಪ್ರಮಾಣ ಕೇವಲ ಶೇ.31 ಮಾತ್ರ.

Update: 2024-05-18 09:07 GMT

ಶನಿವಾರ (ಮೇ 18)- ಬೆಂಗಳೂರಿನಲ್ಲಿ ನಡೆಯುವ ಪ್ಲೇಆಫ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸೆಣಸಲಿವೆ. ವಿಜೇತರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಾರೆ.

ಸತತ ಐದು ಜಯ ಗಳಿಸಿದ ಆರ್‌ಸಿಬಿ ಗರ್ಜಿಸುತ್ತಿದೆ: ಸಿಎಸ್‌ಕೆ ಏಳು-ಬೀಳು ಅನುಭವಿಸಿದೆ. ಸನ್ನಿವೇಶವನ್ನು ಪರಿಗಣಿಸಿದರೆ, ಸಿಎ‌ಸ್‌ಕೆ ಸುಲಭವಾಗಿ ಮುಂದಿನ ಹಂತಕ್ಕೆ ಹೋಗಬಹುದು. ಅವರು ಅಂಕಣಕ್ಕೆ ಹೋಗಿ, ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಬೇಕು ಅಥವಾ ಮಳೆಯಿಂದ ಆಟ ನಿಲ್ಲುತ್ತದೆ ಎಂದುಕೊಳ್ಳಬೇಕು: ಬೆಂಗಳೂರಿನ ಮಳೆಯ ಚಂಚಲ ಸ್ವಭಾವ ಪರಿಗಣಿಸಿದರೆ ಇದು ಅಸಂಭವವೇನಲ್ಲ.

ಆರ್ಸಿಬಿ ಎದುರು ಕಠಿಣ ಸವಾಲು ಇದೆ. ಏಕೆಂದರೆ, 200 ರನ್‌ ಸ್ಕೋರ್ ಆಗಲಿದೆ ಎಂದು ಊಹಿಸಿಕೊಂಡು, ನಿರ್ದಿಷ್ಟ ಅಂತರದಿಂದ ಗೆಲ್ಲಬೇಕು. 18 ರನ್‌ ಗಳಿಂದ ಗೆಲ್ಲಬೇಕು ಅಥವಾ ಸುಮಾರು 11 ಎಸೆತ ಬಾಕಿ ಇರುವಂತೆಯೇ ಗುರಿ ಮುಟ್ಟಬೇಕು.

ಮಳೆಯ ಸಾಧ್ಯತೆ ಹೆಚ್ಚು ಇರುವುದರಿಂದ, ಆರ್‌ಸಿಬಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ಕಡಿಮೆ. ಆಗಾಗಲೇ ತಂಡ ಭಾರಿ ಒತ್ತಡದಲ್ಲಿದೆ. ಆದರೆ, ಬೆಂಗಳೂರಿನಲ್ಲಿ ಮಳೆಯಾದರೆ ಸನ್ನಿವೇಶ ಮತ್ತಷ್ಟು ಜಟಿಲವಾಗಲಿದೆ.

ರನ್‌ ಲೆಕ್ಕಾಚಾರ: 5 ಓವರ್‌ಗಳ ಸ್ಪರ್ಧೆಯಲ್ಲಿ ಆರ್‌ ಸಿಬಿ ಮೊದಲು ಬ್ಯಾಟಿಂಗ್ ಮಾಡಿ 80 ರನ್ ಗಳಿಸಿದರೆ, ಸಿ ಎಸ್ಕೆಯನ್ನು ಗರಿಷ್ಠ 62 ರನ್‌ಗೆ ನಿರ್ಬಂಧಿಸಬೇಕಾಗುತ್ತದೆ. 10 ಓವರ್‌ ಆದಲ್ಲಿ 130 ರನ್ ಗಳಿಸಿ, ಸಿಎಸ್‌ಕೆ ಯನ್ನು 112 ಕ್ಕೆ ನಿರ್ಬಂಧಿಸಬೇಕಾಗುತ್ತದೆ. ಮತ್ತೊಂದೆಡೆ, ಸಿಎಸ್‌ಕೆ 10 ಓವರ್‌ಗಳಲ್ಲಿ 131 ರನ್‌ಗಳ ಗುರಿ ನೀಡಿದರೆ, ಆರ್‌ಸಿಬಿ ಅದನ್ನು ಕೇವಲ 8.1 ಓವರ್‌ಗಳಲ್ಲಿ ಸಾಧಿಸಬೇಕಾಗುತ್ತದೆ. 

ಸಿಎಸ್‌ಕೆ ಸೋತರೂ ಅರ್ಹತೆ ಪಡೆಯಬಹುದು. ಒಂದೇ ಷರತ್ತು ಎಂದರೆ, ಅವರ ನೆಟ್ ರನ್ ರೇಟ್ ಆರ್‌ಸಿಬಿಗಿಂತ ಕಡಿಮೆ ಆಗಬಾರದು. ಆದರೆ, ಸಿಎಸ್‌ಕೆ ನಿವ್ವಳ ರನ್ ರೇಟ್ ಫಾಫ್ ಡು ಪ್ಲೆಸಿಸ್ ತಂಡಕ್ಕಿಂತ ಉತ್ತಮವಾಗಿದೆ. ಇದರಿಂದ, ಆರ್‌ಸಿಬಿ ವಿರುದ್ಧಸಣ್ಣ ಅಂತರದಿಂದ ಸೋತರೂ, ಸಿಎಸ್‌ ಕೆ ಮುಂದಿನ ಹಂತ ತಲುಪುತ್ತದೆ. 

ಈವರೆಗೆ ಫಲಿತಾಂಶ ಸಿಎಸ್‌ಕೆ ಪರವಾಗಿದೆ. ಆರ್‌ಸಿಬಿ ಐದು ಪಂದ್ಯಗಳಲ್ಲಿ ಒಮ್ಮೆ ಮಾತ್ರ ಗೆದ್ದಿದೆ. ಐಪಿಎಲ್‌ನ ಎಲ್ಲಾ ಪಂದ್ಯಗಳಲ್ಲಿ ಗೆಲುವಿನ ಪ್ರಮಾಣ ಕೇವಲ ಶೇ. 31 ಮಾತ್ರ.

Tags:    

Similar News