ಹೆಲಿಕಾಪ್ಟರ್ ಪತನ; ನಾಲ್ವರು ಬಚಾವ್

Update: 2024-08-24 12:15 GMT

ಪುಣೆ: ಮುಂಬೈನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪುಣೆಯ ಮುಲ್ಶಿ ತೆಹಸಿಲ್‌ನ ಪೌಡ್‌ ನಲ್ಲಿ ಶನಿವಾರ ಮಧ್ಯಾಹ್ನ‌ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾಪ್ಟರ್‌ನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ʻಹೆಲಿಕಾಪ್ಟರ್‌ನ ಕ್ಯಾಪ್ಟನ್‌ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಉಳಿದ ಮೂವರ ಸ್ಥಿತಿ ಸ್ಥಿರವಾಗಿದೆ. ಹೆಲಿಕಾಪ್ಟರ್ ಗ್ಲೋಬಲ್ ವೆಕ್ಟ್ರಾ ಕಂಪನಿಗೆ ಸೇರಿದೆ. ಅಪಘಾತದ ಕಾರಣ ಪತ್ತೆಯಾಗಿಲ್ಲ,ʼ ಎಂದು ಹೇಳಿದರು. 

Tags:    

Similar News