ಹತ್ರಾಸ್ ಕಾಲ್ತುಳಿತ: 90 ಕ್ಕೂ ಹೆಚ್ಚು ಹೇಳಿಕೆ ದಾಖಲು-ಎಸ್‌ಐಟಿ ಮುಖ್ಯಸ್ಥ

Update: 2024-07-05 12:44 GMT
ಬೋಧಕ ಸೂರಜ್‌ಪಾಲ್ ಅಲಿಯಾಸ್ ನಾರಾಯಣ್ ಸಾಕಾರ್ ಹರಿ ಅಲಿಯಾಸ್ ಭೋಲೆ ಬಾಬಾ ಅವರ ಮೈನ್‌ಪುರಿಯಲ್ಲಿರುವ ಆಶ್ರಮದ ಆವರಣ

ಹತ್ರಾಸ್ (ಯುಪಿ), ಜು. 5- ಹತ್ರಾಸ್ ಕಾಲ್ತುಳಿತದ ಬಗ್ಗೆ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ಎಸ್‌ಐಟಿ, ಇದುವರೆಗೆ 90 ಹೇಳಿಕೆಗಳನ್ನು ದಾಖಲಿಸಿದೆ ಎಂದು ತಂಡದ ಮುಖ್ಯಸ್ಥ ಅನುಪಮ್ ಕುಲಶ್ರೇಷ್ಠ ಶುಕ್ರವಾರ ತಿಳಿಸಿದ್ದಾರೆ.

ಮೂವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ನೇತೃತ್ವವನ್ನು ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಕುಲಶ್ರೇಷ್ಠ ಅವರು ವಹಿಸಿದ್ದಾರೆ.

ಹತ್ರಾಸ್‌ನಲ್ಲಿ ಮಾತನಾಡಿದ ಅವರು, ʻಇದುವರೆಗೆ ತೊಂಬತ್ತು ಹೇಳಿಕೆಗಳನ್ನು ದಾಖಲಿಸಲಾಗಿದೆ. ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿದೆ. ಹೆಚ್ಚಿನ ಪುರಾವೆಗಳ ಹಿನ್ನೆಲೆಯಲ್ಲಿ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ,ʼ ಎಂದು ಹೇಳಿದರು.

ʻಸಂಗ್ರಹಿಸಿದ ಪುರಾವೆಗಳು ಕಾರ್ಯಕ್ರಮದ ಸಂಘಟಕರ ತಪ್ಪನ್ನು ತೋರಿಸುತ್ತವೆ,ʼ ಎಂದು ಹೇಳಿದರು. 

ಏತನ್ಮಧ್ಯೆ, ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಲ್ತುಳಿತದ ಬಗ್ಗೆ ಪ್ರಾಥಮಿಕ ಎಸ್‌ಐಟಿ ವರದಿ ಬಗ್ಗೆ ಮಾಹಿತಿ ನೀಡಿದ್ದಾರೆ. 

ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಕುಮಾರ್, ಪೊಲೀಸ್ ಅಧೀಕ್ಷಕ ನಿಪುನ್ ಅಗರ್ವಾಲ್ ಮತ್ತು ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆಗಳನ್ನು ವರದಿ ಒಳಗೊಂಡಿದೆ. 

Tags:    

Similar News