ಹಳೆ ಸೆಂಟ್ ಬಾಟಲ್ ಎಕ್ಸ್‌ಫೈರಿ ಡೇಟ್ ಬದಲಿಸುವಾಗ ಸ್ಫೋಟ; ಒಂದೇ ಕುಟುಂಬದ ನಾಲ್ವರಿಗೆ ಗಾಯ
ಮುಂಬೈನ ಹೊರವಲಯದಲ್ಲಿರುವ ನಲ ಸೊಪಾರಾದ ರೋಶನ್ ಅಪಾರ್ಟ್‌ಮೆಂಟ್‌ನ ಕೊಠಡಿ ಸಂಖ್ಯೆ 112ರಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ ಎಂದು ಅವರು ಹೇಳಿದರು.;
ಅವಧಿ ಮುಗಿದಿರುವ ಸುಗಂಧ ದ್ರವ್ಯ ಬಾಟಲಿಗಳ ದಿನಾಂಕ ಬದಲಿಸುತ್ತಿದ್ದ ವೇಳೆ ಅದು ಸ್ಫೋಟಗೊಂಡ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನವರೂ ಸೇರಿದ್ದಾರೆ. ಫ್ಲ್ಯಾಟ್ ಒಂದರಲ್ಲಿ ಅವರು ಆ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಮುಂಬೈನ ಹೊರವಲಯದಲ್ಲಿರುವ ನಲ ಸೊಪಾರಾದ ರೋಶನಬಿ ಅಪಾರ್ಟ್‌ಮೆಂಟ್‌ನ ಕೊಠಡಿ ಸಂಖ್ಯೆ 112ರಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ ಎಂದು ಅವರು ಹೇಳಿದರು.
ಮೃತರನ್ನು ಮಹಾವೀರ್ ವಡಾರ್ (41), ಸುನೀತಾ ವಡಾರ್ (38), ಕುಮಾರ್ ಹರ್ಷವರ್ಧನ್ ವಾಡರ್ (9) ಮತ್ತು ಕುಮಾರಿ ಹರ್ಷದಾ ವಡಾರ್ (14) ಎಂದು ಗುರುತಿಸಲಾಗಿದೆ .
ಅವರು ಎಕ್ಸ್‌ಫೈಯರಿ ಡೇಟ್ ಮುಗಿದಿರುವ ಫರ್ಫ್ಯೂಮ್ ಬಾಟಲ್‌ಗಳ ಪ್ಯಾಕಿಂಗ್ ಹಾಗೂ ಎಕ್ಸ್‌ಫೈಯರಿ ಡೇಟ್ ಬದಲಾಯಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕುಮಾರ್ ಹರ್ಷವರ್ಧನ್ ನಲ ಸೊಪಾರಾದ ಲೈಫ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಅದೇ ಪ್ರದೇಶದ ಆಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.