ರೈತರ ಆದಾಯ ದ್ವಿಗುಣವಾಗಲಿಲ್ಲ: ಶರದ್ ಪವಾರ್ ವಾಗ್ದಾಳಿ

Update: 2024-03-23 11:23 GMT

ಪುಣೆ, ಮಾ. 23- ರೈತರ ಆದಾಯವನ್ನು 2024 ರ ವೇಳೆಗೆ ದ್ವಿಗುಣಗೊಳಿಸುವ ಭರವಸೆಯನ್ನುಈಡೇರಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಶನಿವಾರ ದೂರಿದ್ದಾರೆ. 

ಅಧಿಕಾರದಲ್ಲಿರುವವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರದಲ್ಲಿ ನಡೆದ ರೈತರ ಸಮಾವೇಶ ದಲ್ಲಿ ಹೇಳಿದರು. 

ಎಂವಿಎಯಲ್ಲಿ ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಇದೆ. ಇದು ಇಂಡಿಯ ಒಕ್ಕೂಟದ ಭಾಗವಾಗಿದೆ. 48 ಸಂಸದರಿರುವ ಮಹಾರಾಷ್ಟ್ರದಲ್ಲಿ ಏಪ್ರಿಲ್ 19 ಮತ್ತು ಮೇ 20 ರ ನಡುವೆ ಐದು ಹಂತಗಳಲ್ಲಿ ಚುನಾವಣೆ ನಡೆಯ ಲಿದೆ. ಪವಾರ್ ಅವರ ಪುತ್ರಿ ಮತ್ತು ಮೂರು ಅವಧಿಯ ಸಂಸದೆ ಸುಪ್ರಿಯಾ ಸುಳೆ ಅವರು ಬಾರಾಮತಿಯಿಂದ ಸ್ಪರ್ಧಿಸುತ್ತಿದ್ದಾರೆ. ʻದೇಶದಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದು, ಮುಂಬರುವ ಚುನಾವಣೆ ಬಹಳ ಮಹತ್ವದ್ದಾಗಿದೆ. 2024 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದರು; ಆದರೆ, ಭರವಸೆ ಈಡೇರಿಲ್ಲ. ರೈತರು ಈರುಳ್ಳಿಗೆ ಬೆಲೆ ಪರಿಹಾರ ಕೋರಿದ್ದಾರೆ. ಆದರೆ, ಅಧಿಕಾರದಲ್ಲಿರುವವರಿಗೆ ರೈತರ ಬಗ್ಗೆ ಕಾಳಜಿ ಇಲ್ಲʼ ಎಂದು ಹೇಳಿದರು.

2022 ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ಯಸಭೆ ಸದದ್ಯರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದನ್ನು ಉಲ್ಲೇಖಿಸಿ, ಸರ್ಕಾರದ ವಿರುದ್ಧ ಮಾತನಾಡಿದ ನಂತರ ಸೇನಾ (ಯುಬಿಟಿ) ನಾಯಕ ರಾವುತ್ ಅವರನ್ನು ಬಂಧಿಸಲಾಗಿದೆ. ಕಠಿಣ ಪರಿಶ್ರಮದ ಹೊರತಾಗಿಯೂ, ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಕಳೆದ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಕೇವಲ ಶೇ. 2 ರಷ್ಟು ಸ್ಥಾನ ಗೆದ್ದುಕೊಂಡಿತ್ತು ಮತ್ತು ಉಳಿದವು ಕೇಜ್ರಿವಾಲ್ (ಎಎಪಿ) ಪರವಾಗಿತ್ತು,ʼ ಎಂದು ಹೇಳಿದರು.

ಕೇಂದ್ರ ಸರ್ಕಾರವನ್ನು ಖಂಡಿಸಿದ ರಾವುತ್‌, ʻನಮಗೆ ನಿಮ್ಮ ಅಚ್ಚೇ ದಿನ್ ಬೇಡ. ಬದಲಾಗಿ, 2014 ರ ಹಿಂದಿನ ದಿನಗಳನ್ನು ಕೊಡಿ. ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಪಕ್ಷ ತೊರೆದ ಬಳಿಕ ಪಕ್ಷ ಬಲಿಷ್ಠವಾಗಿದೆ. ನಮ್ಮನ್ನು ಬಿಟ್ಟು ಹೋದವರಿಂದ ಮಹಾರಾಷ್ಟ್ರದಲ್ಲಿ ಹೆಚ್ಚೇನೂ ವ್ಯತ್ಯಾಸ ಆಗಲಿಲ್ಲʼ ಎಂದು ಅವರು ಹೇಳಿದರು. ʻನಮಗೆ ಬೆದರಿಕೆ ಹಾಕಬೇಡಿ. ನಾವು ಹೆದರುವುದಿಲ್ಲ. ನಾಲ್ಕು ತಿಂಗಳಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾಗುತ್ತದೆ. ನಮ್ಮ ಸರ್ಕಾರ ರಚನೆಯಾದ ನಂತರ ನಿಮ್ಮ ಪಕ್ಷದಲ್ಲಿ ಯಾರೂ ಉಳಿಯುವುದಿಲ್ಲʼ ಎಂದು ರಾವುತ್‌ ಹೇಳಿದರು.

ಬಾಳಾಸಾಹೇಬ್ ಥೋರಟ್ ಮತ್ತು ಸುಪ್ರಿಯಾ ಸುಲೆ ಮತ್ತಿತರ  ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರು ಪಾಲ್ಗೊಂಡಿದ್ದರು.

Tags:    

Similar News