ಫಡ್ನವಿಸ್ ಸಿಎಂ, ಶಿಂಧೆಗೆ ಡಿಸಿಎಂ; ಮಹಾರಾಷ್ಟ್ರದ ರಾಜಕೀಯ ಕುತೂಹಲಕ್ಕೆ ತೆರೆ

ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದ ನಂತರ ಮಾಧ್ಯಮಗಳನ್ನು ಭೇಟಿಯಾದ ಶಿಂಧೆ ಮತ್ತು ಫಡ್ನವೀಸ್, ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ಹೇಳಿದರು.

Update: 2024-12-04 14:13 GMT
Fadnavis cm, Shinde deputy CM; Political suspense in Maharashtra

ಮಹಾರಾಷ್ಟ್ರದ ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ (ಡಿಸೆಂಬರ್ 4) ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಅವರು ಶಿವಸೇನೆ ಮುಖಂಡ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಕ್ಯಾಬಿನೆ ಉಳಿಯುವಂತೆ ವಿನಂತಿಸಿದ್ದಾರೆ. ಅಲ್ಲಿಗೆ ಮಹಾರಾಷ್ಟ್ರದ ಸರ್ಕಾರ ರಚನೆಯ ರಾಜಕೀಯ ಕುತೂಹಲ ಕೊನೆಗೊಂಡಿದೆ.



ಶಿಂಧೆ ಸರ್ಕಾರದ ಭಾಗವಾಗಲು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಶಿಂಧೆ, ಬಿಜೆಪಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ತಾನು ಅಡ್ಡಿಯಾಗುವುದಿಲ್ಲ ಎಂದು ಘೋಷಿಸಿದ ನಂತರ ಸತಾರಾದಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದ್ದರು.

ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದ ನಂತರ ಮಾಧ್ಯಮಗಳನ್ನು ಭೇಟಿಯಾದ ಶಿಂಧೆ ಮತ್ತು ಫಡ್ನವೀಸ್, ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ ಎಂದು ಹೇಳಿದರು. ಯಾಕೆಂದರೆ ಸಿಎಂ ಆಯ್ಕೆ ವಿಳಂ ವಿರೋಧ ಪಕ್ಷಗಳಿಂದ ಸಾಕಷ್ಟು ಗೇಲಿಗೆ ಕಾರಣವಾಗಿತ್ತು. ಏಕನಾಥ್ ಶಿಂಧೆ ಅವರನ್ನು ಸಂಪುಟದಲ್ಲಿ ಉಳಿಯುವಂತೆ ವಿನಂತಿಸಿದ್ದೇನೆ ಎಂದು ಫಡ್ನವೀಸ್ ಮಾಧ್ಯಮಗಳಿಗೆ ತಿಳಿಸಿದ್ದರು.

"ಮುಖ್ಯಮಂತ್ರಿ ಹುದ್ದೆ ನಮ್ಮ ನಡುವಿನ ಒಪ್ಪಂದವಾಗಿದೆ. ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಒಟ್ಟಿಗೆ ಇದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ" ಎಂದು ಫಡ್ನವಿಸ್ ಹೇಳಿದ್ದರು. ಎರಡೂವರೆ ವರ್ಷಗಳ ಹಿಂದೆ, ಫಡ್ನವೀಸ್ ತಮ್ಮ ಹೆಸರನ್ನು ಮುಖ್ಯಮಂತ್ರಿಯಾಗಲು ಶಿಫಾರಸು ಮಾಡಿದ್ದರು ಎಂದು ಶಿಂಧೆ ಹೇಳಿದ್ದಾರೆ. Fadnavis cm, Shinde deputy CM; Political suspense in Maharashtra"ಈ ಬಾರಿ, ಮುಖ್ಯಮಂತ್ರಿಯಾಗಲು ನಾವು ಅವರ ಹೆಸರನ್ನು ಶಿಫಾರಸು ಮಾಡುತ್ತೇವೆ" ಎಂದು ಶಿಂಧೆ ಹೇಳಿದ್ದಾರೆ.

ಕುತೂಹಲ ಅಂತ್ಯ

ಇಂದು ನಡೆದ ಪ್ರಮುಖ ಬಿಜೆಪಿ ಸಭೆಯಲ್ಲಿ ಫಡ್ನವೀಸ್ ಅವರನ್ನು ಸರ್ಕಾರದ ಉನ್ನತ ಸ್ಥಾನಕ್ಕೆ ಹೆಸರಿಲಾಗಿದೆ. ಇದು ಕಳೆದ ಎರಡು ವಾರಗಳಿಂದ ಮುಖ್ಯಮಂತ್ರಿಯ ಆಯ್ಕೆಯ ತೀವ್ರ ಕುತೂಹಲಕ್ಕೆ ಕೊನೆ ಹಾಡಿದೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆ ಮತ್ತು ಎನ್​ಸಿಪಿ (ಅಜಿತ್ ಪವಾರ್) ಗಿಂತ ಹೆಚ್ಚು ಅಂದರೆ 132 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಸಿಎಂ ಹುದ್ದೆ ಬೇಡ ಎಂದು ಶಿಂಧೆ ಬಣ ಒತ್ತಾಯಿಸಿತ್ತು. ಆದರೆ, ಬಿಜೆಪಿ ಅದಕ್ಕೆ ಒಪ್ಪಿರಲಿಲ್ಲ. ಶಿಂಧೆ ಸರ್ಕಾರದ ಕಲ್ಯಾಣ ಯೋಜನೆಗಳು ಮಹಾಯುತಿ ಮೈತ್ರಿಕೂಟವನ್ನು ಗೆಲುವಿನತ್ತ ಮುನ್ನಡೆಸಿವೆ ಎಂದು ಶಿವಸೇನೆ ಹೇಳಿಕೊಂತ್ತು. ಈ ವಿಷಯದಲ್ಲಿ ಬಿಜೆಪಿಯ ನಿರ್ಧಾರವನ್ನು ಶಿಂಧೆ ಒಪ್ಪಿಕೊಂಡರೂ ಅವರ ಪಕ್ಷದ ಕೆಲವು ನಾಯಕರು ಸಮ್ಮತಿಸಿರಲಿಲ್ಲ.

ಡಿಸೆಂಬರ್ 5ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ

ಬಿಜೆಪಿ ಸಭೆಯಲ್ಲಿ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಭಾಗವಹಿಸಿದ್ದ ಫಡ್ನವೀಸ್, ನಿಯಮಗಳ ಪ್ರಕಾರ ರಾಜ್ಯದಲ್ಲಿ ಹೊಸ ಕ್ಯಾಬಿನೆಟ್ ರಚಿಸಲು ಹಕ್ಕು ಸಲ್ಲಿಸಿದ್ದೇವೆ ಎಂದು ಹೇಳಿದರು.

"ರಾಜ್ಯಪಾಲರು ಈ ಹಕ್ಕನ್ನು ಸ್ವೀಕರಿಸಿದ ನಂತರ, ಡಿಸೆಂಬರ್ 5 ರಂದು ಸಂಜೆ 5.30 ಕ್ಕೆ ಪ್ರಮಾಣವಚನ ಸಮಾರಂಭಕ್ಕೆ ನಮಗೆ ಸಮಯ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ" ಎಂದು ಫಡ್ನವೀಸ್ ಹೇಳಿದರು.

ಸಭೆಯಲ್ಲಿ ಸಂಪುಟದ ಸದಸ್ಯರು ಮತ್ತು ಅವರ ಖಾತೆಗಳನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು. 

Tags:    

Similar News