UPSC Lateral Entry| ಇಂಡಿಯಾ ಒಕ್ಕೂಟ, ಎನ್‌ಡಿಎ ಪಾಲುದಾರರ ವಿರೋಧ: ಜಾಹೀರಾತು ಹಿಂಪಡೆದ ಕೇಂದ್ರ

ಪ್ರಧಾನಿಯವರಿಗೆ ಸಾರ್ವಜನಿಕ ಉದ್ಯೋಗದಲ್ಲಿ ಮೀಸಲು ʻಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿ ಹೊಂದಿರುವ ಸಾಮಾಜಿಕ ನ್ಯಾಯದ ಚೌಕಟ್ಟಿನ ಮೂಲಾಧಾರʼ ಎಂದು ಸಿಂಗ್ ಪತ್ರದಲ್ಲಿ ಹೇಳಿದ್ದಾರೆ.

Update: 2024-08-20 10:59 GMT

ಕೇಂದ್ರ ಸರ್ಕಾರವು ಅಧಿಕಾರಶಾಹಿಯಲ್ಲಿ ಲ್ಯಾಟರಲ್ ಎಂಟ್ರಿಗೆ ಇತ್ತೀಚೆಗೆ ನೀಡಿದ್ದ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ಯುಪಿಎಸ್‌ಸಿ ಯನ್ನು ಮಂಗಳವಾರ (ಆಗಸ್ಟ್ 20) ಕೇಳಿದೆ. ಈ ಕ್ರಮಕ್ಕೆ ವಿರೋಧ ಪಕ್ಷಗಳು ಮತ್ತು ಕೆಲವು ಎನ್‌ಡಿಎ ಪಾಲುದಾರರು ವಿರೋಧ ವ್ಯಕ್ತಪಡಿಸಿದ್ದರು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಯುಪಿಎಸ್‌ಸಿ ಅಧ್ಯಕ್ಷೆ ಪ್ರೀತಿ ಸುದನ್ ಅವರಿಗೆ ಪತ್ರ ಬರೆದು, ಲ್ಯಾಟರಲ್ ಎಂಟ್ರಿಗೆ ನೀಡಿದ್ದ ಜಾಹೀರಾತು ರದ್ದುಗೊಳಿಸುವಂತೆ ಸೂಚಿಸಿದ್ದಾರೆ. ಯುಪಿಎಸ್‌ಸಿ ಆಗಸ್ಟ್ 17 ರಂದು 45 ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳನ್ನು ಸರ್ಕಾರಿ ಇಲಾಖೆಗಳಲ್ಲಿ ತಜ್ಞರ ನೇಮಕ(ಖಾಸಗಿ ವಲಯದವರು ಸೇರಿದಂತೆ) ನೇಮಕ ಎಂದು ಉಲ್ಲೇ ಖಿಸಿ, ಲ್ಯಾಟರಲ್ ಎಂಟ್ರಿ ಮೂಲಕ ನೇಮಕ ಮಾಡಲು ಅಧಿಸೂಚನೆ ಹೊರಡಿಸಿತ್ತು.

ಪ್ರಧಾನಿ ನಿರ್ದೇಶನಗಳ ಉಲ್ಲೇಖ: ಪ್ರಧಾನಿ ನರೇಂದ್ರ ಮೋದಿಯವರ ನಿರ್ದೇಶನಗಳನ್ನು ಉಲ್ಲೇಖಿಸಿದ ಸಿಂಗ್, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳೊಂದಿಗೆ, ವಿಶೇಷವಾಗಿ ಮೀಸಲು ನಿಬಂಧನೆಗೆ ಸಂಬಂಧಿಸಿದಂತೆ, ಪಾರ್ಶ್ವ ಪ್ರವೇಶದ ಅಗತ್ಯವಿದೆ ಎಂದು ಹೇಳಿದ್ದರು.

ಪ್ರಧಾನಿಯವರಿಗೆ ಸಾರ್ವಜನಿಕ ಉದ್ಯೋಗದಲ್ಲಿ ಮೀಸಲು ʻಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಗುರಿ ಹೊಂದಿರುವ ಸಾಮಾಜಿಕ ನ್ಯಾಯದ ಚೌಕಟ್ಟಿನ ಮೂಲಾಧಾರʼ ಎಂದು ಸಿಂಗ್ ಪತ್ರದಲ್ಲಿ ಹೇಳಿದ್ದಾರೆ.

ʻಈ ಹುದ್ದೆಗಳನ್ನು ವಿಶೇಷ ಎಂದು ಪರಿಗಣಿಸಿರುವುದರಿಂದ ಮತ್ತು ಏಕ ಶ್ರೇಣಿಯ ಹುದ್ದೆಗಳಾಗಿ ಗೊತ್ತುಪಡಿಸಿರುವುದರಿಂದ, ಈ ನೇಮಕಗಳಲ್ಲಿ ಮೀಸಲಿಗೆ ಯಾವುದೇ ಅವಕಾಶವಿಲ್ಲ.ಪ್ರಧಾನಿ ಸಾಮಾಜಿಕ ನ್ಯಾಯ ಖಾತ್ರಿಪಡಿಸಲು ಈ ಅಂಶವನ್ನು ಪರಿಶೀಲಿಸುವ ಮತ್ತು ಸುಧಾರಿಸುವ ಅಗತ್ಯವಿದೆ,ʼ ಎಂದು ಸಿಂಗ್ ಹೇಳಿದರು.

ಪ್ರತಿಪಕ್ಷಗಳ ಪ್ರತಿರೋಧ: ಸರ್ಕಾರದ ಆದೇಶವು ಚರ್ಚೆಗೆ ಕಾರಣವಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೊಂದು ʻದೇಶವಿರೋಧಿ ಹೆಜ್ಜೆʼ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಮೀಸಲುನ್ನು ʻಬಹಿರಂಗವಾಗಿ ಕಿತ್ತುಕೊಳ್ಳಲಾಗುತ್ತಿದೆʼ ಎಂದು ಆರೋಪಿಸಿದರು. ʻಈ ಕ್ರಮವು ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ಯುವಕರ ಹಕ್ಕುಗಳ ದರೋಡೆ ಮತ್ತು ಹಿಂದುಳಿದವರಿಗೆ ಮೀಸಲು ಸೇರಿದಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇಲಿನ ದಾಳಿ,ʼ ಎಂದು ಅವರು ಆರೋಪಿಸಿದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಹುಲ್‌ ಅವರನ್ನು ಬೆಂಬಲಿಸಿ, ʻಅಧಿಕಾರಶಾಹಿಯ ಪಾರ್ಶ್ವ ಪ್ರವೇಶದಿಂದ ಅರ್ಹತೆ ಮತ್ತು ಅಲ್ಪಸಂಖ್ಯಾತ ಅಧಿಕಾರಿಗಳನ್ನು ಅರ್ಹ ಅವಕಾಶಗಳಿಂದ ವಂಚಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.

ಜೆಡಿಯು, ಎಲ್‌ಜೆಪಿ (ರಾಮ್‌ ವಿಲಾಸ್) ಅಸಮಾಧಾನ: ಗಮನಾರ್ಹ ಅಂಶವೆಂದರೆ, ಬಿಜೆಪಿಯ ಮುಖ್ಯ ಪಾಲುದಾರ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)ದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಇದು ʻಸಂಪೂರ್ಣ ತಪ್ಪುʼ ಎಂದು ಕರೆದರು.

ʻಮೀಸಲು ತಪ್ಪಿಸಿ ನೇಮಕ ಮಾಡುವ ಕೇಂದ್ರದ ನಿರ್ಧಾರವನ್ನು ತಮ್ಮ ಪಕ್ಷ ಬೆಂಬಲಿಸುವುದಿಲ್ಲ. ವಿಷಯವನ್ನು ಸರ್ಕಾರದೊಂದಿಗೆ ಪ್ರಸ್ತಾಪಿಸಲಾಗುತ್ತದೆʼ ಎಂದು ಹೇಳಿದರು. ಅವರು ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣೆ ಉದ್ಯಮಗಳ ಸಚಿವ.

ಬಿಜೆಪಿಯ ಮತ್ತೊಂದು ಪ್ರಮುಖ ಮಿತ್ರ ಪಕ್ಷ ಜೆಡಿಯು ಕೂಡ ಇದೇ ಭಾವನೆ ವ್ಯಕ್ತಪಡಿಸಿತು. ʻನಾವು ಆರಂಭದಿಂದಲೂ ಮೀಸಲು ಸ್ಥಾನಗಳನ್ನು ತುಂಬಬೇಕೆಂದು ಕೇಳುತ್ತಿರುವ ಪಕ್ಷ. ನಾವು ರಾಮಮನೋಹರ್ ಲೋಹಿಯಾ ಅವರ ಅನುಯಾಯಿಗಳು. ಜನರು ಶತಮಾನಗಳಿಂದ ಸಾಮಾಜಿಕವಾಗಿ ಹಿಂದುಳಿದಿರುವಾಗ, ನೀವು ಅರ್ಹತೆಯನ್ನುಏಕೆ ಹುಡುಕುತ್ತಿದ್ದೀರಿ? ಸರ್ಕಾರದ ಆದೇಶ ಕಳವಳಕಾರಿ,ʼ ಎಂದು ಜೆಡಿಯು ರಾಷ್ಟ್ರೀಯ ವಕ್ತಾರ ಕೆ.ಸಿ. ತ್ಯಾಗಿ ಹೇಳಿದ್ದಾರೆ.

Tags:    

Similar News