ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶವ ಯಮುನಾ ನದಿಯಲ್ಲಿ ಪತ್ತೆ

ದಕ್ಷಿಣ ದೆಹಲಿಯ ಪರ್ಯಾವರಣ ಕಾಂಪ್ಲೆಕ್ಸ್ ನಿವಾಸಿಯಾಗಿದ್ದ ಸ್ನೇಹಾ, ಮೂಲತಃ ತ್ರಿಪುರಾದವರಾಗಿದ್ದು, ಜುಲೈ 7 ರಂದು ನಾಪತ್ತೆಯಾಗಿದ್ದರು.;

Update: 2025-07-14 04:21 GMT

ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಆತ್ಮಾ ರಾಮ್ ಸನಾತನ ಧರ್ಮ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿ ಸ್ನೇಹಾ ದೇಬ್‌ನಾಥ್ ಭಾನುವಾರ ಸಂಜೆ ಯಮುನಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ . ಗೀತಾ ಕಾಲೋನಿ ಫ್ಲೈಓವರ್ ಸಮೀಪ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಕ್ಷಿಣ ದೆಹಲಿಯ ಪರ್ಯಾವರಣ ಕಾಂಪ್ಲೆಕ್ಸ್ ನಿವಾಸಿಯಾಗಿದ್ದ ಸ್ನೇಹಾ, ಮೂಲತಃ ತ್ರಿಪುರಾದವರಾಗಿದ್ದು, ಜುಲೈ 7 ರಂದು ನಾಪತ್ತೆಯಾಗಿದ್ದರು. ಪೊಲೀಸರ ಪ್ರಕಾರ, ಸ್ನೇಹಾ ಒಂದು ಕೈಬರಹದ ಪತ್ರ ಬಿಟ್ಟುಹೋಗಿದ್ದು, ಯಮುನಾ ನದಿಯ ಮೇಲಿರುವ ಸಿಗ್ನೇಚರ್ ಸೇತುವೆಯಿಂದ ಜಿಗಿಯುವುದಾಗಿ ಹೇಳಿದ್ದರು. ಈ ಸಂಬಂಧ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಕ್ಷಿಣ ಡಿಸಿಪಿ ಅಂಕಿತ್ ಚೌಹಾನ್ ಘಟನೆ ಕುರಿತು ನೀಡಿದ್ದು., "ಕ್ಯಾಬ್ ಚಾಲಕನೊಬ್ಬ ಆಕೆಯನ್ನು ಸಿಗ್ನೇಚರ್ ಸೇತುವೆಯಲ್ಲಿ ಬಿಟ್ಟು ಹೋಗಿದ್ದಾನೆ. ತಾಂತ್ರಿಕ ಮೇಲ್ವಿಚಾರಣೆಯಿಂದ ಆಕೆಯ ಕೊನೆಯ ಸ್ಥಳ ಸಿಗ್ನೇಚರ್ ಸೇತುವೆ ಎಂದು ಗೊತ್ತಾಯಿತು. ಪ್ರತ್ಯಕ್ಷದರ್ಶಿಗಳು ಆಕೆ ಸೇತುವೆಯ ಮೇಲೆ ನಿಂತಿದ್ದನ್ನು ಗಮನಿಸಿದ್ದರು ಎಂದು ಹೇಳಿದ್ದಾರೆ.

ಸ್ನೇಹಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿ.ಎ. ಗಣಿತಶಾಸ್ತ್ರ ಅಧ್ಯಯನ ಮಾಡುತ್ತಿದ್ದಳು. "ಕಳೆದ ನಾಲ್ಕು ತಿಂಗಳಿಂದ ಆಕೆ ತನ್ನ ಖಾತೆಯಿಂದ ಯಾವುದೇ ಹಣವನ್ನು ಹಿಂಪಡೆದಿಲ್ಲ. ಜುಲೈ 7 ರಂದು ಬೆಳಗ್ಗೆ ಕುಟುಂಬದ ಸದಸ್ಯರಿಗೆ ಕರೆ ಮಾಡಿ ತನ್ನ ಸಾಮಾನುಗಳನ್ನು ತೆಗೆದುಕೊಂಡು ಮನೆಯಿಂದ ಹೊರಟಿದ್ದೇನೆ ಎಂದಿದ್ದಳು. ಜುಲೈ 7 ರಂದು ಬೆಳಗ್ಗೆ 5.56ಕ್ಕೆ ತನ್ನ ಕುಟುಂಬಕ್ಕೆ ಸ್ನೇಹಾ ಕೊನೇ ಕರೆ ಮಾಡಿದ್ದಳು. 

Tags:    

Similar News