ಮನೀಶ್ ಸಿಸೋಡಿಯಾಗೆ ಸುಪ್ರೀಂ ಜಾಮೀನು

ಕೆಳ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ ಗಳ ಮೇಲೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್‌, ಸಿಸೋಡಿಯಾ 17 ತಿಂಗಳಿನಿಂದ ಬಂಧನದಲ್ಲಿದ್ದು, ವಿಚಾರಣೆ ಆರಂಭವಾಗಿಲ್ಲ.ಅವರ ತ್ವರಿತ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿತು.

Update: 2024-08-09 06:05 GMT

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 9) ಜಾಮೀನು ನೀಡಿದೆ. 

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಸಿಸೋಡಿಯಾ 17 ತಿಂಗಳಿನಿಂದ ಬಂಧನದಲ್ಲಿದ್ದು, ವಿಚಾರಣೆ ಆರಂಭವಾಗಿಲ್ಲ. ಅವರ ತ್ವರಿತ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿತು. 

ಈ ಪ್ರಕರಣಗಳಲ್ಲಿ ಜಾಮೀನು ಕೋರಿ ಅವರನ್ನು ವಿಚಾರಣೆ ನ್ಯಾಯಾಲಯಕ್ಕೆ ಕಳಿಸುವುದು ನೀಡುವುದು ನ್ಯಾಯದ ಅಪಹಾಸ್ಯ ಎಂದು ಪೀಠ ಹೇಳಿದೆ.

ವಿಚಾರಣೆ ನ್ಯಾಯಾಲಯ ಮತ್ತು ಹೈ ಕೋರ್ಟ್‌ಗಳ ಖಂಡನೆ: ʻವಿಚಾರಣೆ ಮತ್ತು ಹೈ ಕೋರ್ಟ್‌ಗಳು ಜಾಮೀನು ನೀಡಿಕೆ ಒಂದು ನಿಯಮ ಮತ್ತು ಜೈಲು ಒಂದು ಅಪವಾದ ಎಂಬುದನ್ನು ಗುರುತಿಸಲು ಇದು ಸಕಾಲ,ʼ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

10 ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರ ಜಾಮೀನಿನೊಂದಿಗೆ ಸಿಸೋಡಿಯಾ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. 

ದೆಹಲಿಯ ಮಾಜಿ ಉಪಮುಖ್ಯಮಂತ್ರಿಯನ್ನು ಫೆಬ್ರವರಿ 26, 2023 ರಂದು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ), ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗಾಗಿ ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ವು ಅವರನ್ನು ಮಾರ್ಚ್‌ 9, 2023ರಂದು ಬಂಧಿಸಿತು. ಫೆಬ್ರವರಿ 28, 2023 ರಂದು ಸಿಸೋಡಿಯಾ ದೆಹಲಿ ಸಂಪುಟಕ್ಕೆ ರಾಜೀನಾಮೆ ನೀಡಿದರು.

ತಾವು 17 ತಿಂಗಳಿನಿಂದ ಬಂಧನದಲ್ಲಿದ್ದು, ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ ಎಂದು ಪ್ರತಿಪಾದಿಸಿ ಜಾಮೀನು ಕೋರಿದ್ದರು. ಇಡಿ ಮತ್ತು ಸಿಬಿಐ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದವು. 

Tags:    

Similar News