ದೆಹಲಿ: ಎಎಪಿ ಚುನಾವಣೆ ಪ್ರಚಾರ ಆರಂಭ

Update: 2024-04-09 10:22 GMT

ಏಪ್ರಿಲ್‌ 9- ದೆಹಲಿಯ ಶಹದಾರಾದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 'ಜೈಲ್ ಕಾ ಜವಾಬ್ ವೋಟ್ ಸೆ' ಅಭಿಯಾನದ ಭಾಗವಾಗಿ ಮನೆ ಮನೆಗೆ ತೆರಳಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಲು ಕೋರಿತು.

ಎಎಪಿಯ ದೆಹಲಿ ಸಂಚಾಲಕ ಗೋಪಾಲ್ ರೈ ಅವರು ಶಹದಾರಾದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದರು. ಅವರ ಜೊತೆ ಪಕ್ಷದ ಪೂರ್ವ ದೆಹಲಿ ಅಭ್ಯರ್ಥಿ ಕುಲದೀಪ್ ಕುಮಾರ್ ಕೂಡ ಇದ್ದರು. ಪಕ್ಷ ನಾಲ್ಕು ಲೋಕಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಆಪ್‌ ನಾಯಕರು ಪ್ರತಿ ಮನೆಗೆ ಭೇಟಿ ನೀಡಲಿದ್ದಾರೆ.

ಕೇಜ್ರಿವಾಲ್ ಅವರನ್ನು ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಸದ್ಯ ಅವರು ತಿಹಾರ್ ಜೈಲಿನಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಎಎಪಿ, ನವದೆಹಲಿ, ಪೂರ್ವ ದೆಹಲಿ, ದಕ್ಷಿಣ ದೆಹಲಿ ಮತ್ತು ಪಶ್ಚಿಮ ದೆಹಲಿಯಲ್ಲಿ ಸ್ಪರ್ಧಿಸಲಿದೆ. ಉಳಿದ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ.

ದೆಹಲಿಯ ಏಳು ಲೋಕಸಭೆ ಸ್ಥಾನಗಳಿಗೆ ಮೇ 25 ರಂದು ಮತಚಲಾವಣೆ ನಡೆಯಲಿದೆ.

Tags:    

Similar News