ನೀರಿನ ಮಡಕೆ ಮುಟ್ಟಿದ್ದಕ್ಕೆ ದಲಿತ ಬಾಲಕನ ಮೇಲೆ ಹಲ್ಲೆ; ಮರಕ್ಕೆ ಕಟ್ಟಿ ಥಳಿತ

ಬಾಲಕನನ್ನು ಸಮೀಪದ ಮನೆಗೆ ಎಳೆದೊಯ್ದು, ಮರಕ್ಕೆ ಉಲ್ಟಾ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ.;

Update: 2025-09-01 06:27 GMT

ಸಾಂದರ್ಭಿಕ ಚಿತ್ರ 

ರಾಜಸ್ಥಾನದ ಬಾರ್ಮೇರ್ ಜಿಲ್ಲೆಯಲ್ಲಿ ಎಂಟು ವರ್ಷದ ದಲಿತ ಬಾಲಕನೊಬ್ಬ ನೀರಿನ ಮಡಕೆ ಮುಟ್ಟಿದನೆಂಬ ಕಾರಣಕ್ಕೆ, ಆತನನ್ನು ಮನಬಂದಂತೆ ಥಳಿಸಿ, ಮರಕ್ಕೆ ಉಲ್ಟಾ ನೇತುಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಭಾಕ್ರಾಪುರ ಗ್ರಾಮದಲ್ಲಿ ಆಟವಾಡುತ್ತಿದ್ದ ಬಾಲಕನಿಗೆ, ನರ್ನಾರಾಮ್ ಪ್ರಜಾಪತ್ ಮತ್ತು ದೇಮರಾಮ್ ಪ್ರಜಾಪತ್ ಎಂಬುವವರು ಶೌಚಾಲಯ ಸ್ವಚ್ಛಗೊಳಿಸಿ ಕಸ ತೆಗೆಯುವಂತೆ ಹೇಳಿದ್ದಾರೆ. ಕೆಲಸ ಮುಗಿದ ನಂತರ, ಬಾಲಕ ಕುಡಿಯಲು ನೀರು ಕೇಳಿ ಅಲ್ಲಿಯೇ ಇದ್ದ ಮಡಕೆಯನ್ನು ಮುಟ್ಟಿದ್ದಾನೆ.

ಇದರಿಂದ ಕೋಪಗೊಂಡ ಆರೋಪಿಗಳು, ಬಾಲಕನನ್ನು ಸಮೀಪದ ಮನೆಗೆ ಎಳೆದೊಯ್ದು, ಮರಕ್ಕೆ ಉಲ್ಟಾ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಬಾಲಕನನ್ನು ಬಿಡಿಸಲು ಬಂದ ಆತನ ತಾಯಿ ಮತ್ತು ಅಜ್ಜಿಯ ಮೇಲೂ ಹಲ್ಲೆ ನಡೆಸಲಾಗಿದೆ. ಈ ವೇಳೆ, ಬಾಲಕನ ಸಂಬಂಧಿಕರೊಬ್ಬರು ಘಟನೆಯನ್ನು ವಿಡಿಯೋ ಮಾಡಲು ಪ್ರಾರಂಭಿಸಿದಾಗ, ಆರೋಪಿಗಳು ಥಳಿಸುವುದನ್ನು ನಿಲ್ಲಿಸಿದ್ದಾರೆ.

ಈ ಘಟನೆಯು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಜಾತಿ ತಾರತಮ್ಯದ ಕ್ರೂರ ಮುಖವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

Tags:    

Similar News