Lok Sabha Election: ಗೋವಾದಲ್ಲಿ ಎಎಪಿ-ಕಾಂಗ್ರೆಸ್‌ ಸೀಟು ಹಂಚಿಕೆ ಫೈನಲ್; ಎರಡೂ ಕ್ಷೇತ್ರಗಳು ಕೈ ಪಾಲು

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಕೈಜೋಡಿಸುವಂತೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಪಾಟ್ಕರ್ ಮತ್ತು ಎಎಪಿ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಕರೆ ನೀಡಿದರು.

Update: 2024-02-24 11:44 GMT

ಪಣಜಿ: ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಶನಿವಾರ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ, ಕಾಂಗ್ರೆಸ್ ಪಕ್ಷವು ಗೋವಾದಿಂದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

‌ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಪಾಟ್ಕರ್ ಮತ್ತು ಎಎಪಿ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಅವರು, ʼʼಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳು ಕೈಜೋಡಿಸುವಂತೆ ಕರೆ ನೀಡಿದರು.

"2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಕೇಳಿದ್ದ ಎಲ್ಲಾ ಶಾಸಕರಿಗೆ ನಾನು ಮನವಿ ಮಾಡುತ್ತೇನೆ, ಎಲ್ಲರೂ ನಮ್ಮನ್ನು ಬೆಂಬಲಿಸಬೇಕು" ಎಂದು ಪಾಟ್ಕರ್ ಹೇಳಿದರು.

ಕಾಂಗ್ರೆಸ್‌ನ ಎರಡೂ ಕ್ಷೇತ್ರಗಳಲ್ಲಿ ಮುಂದಿನ 4-5 ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಅವರು ಹೇಳಿದರು.

ಕೆಲವು ದಿನಗಳ ಹಿಂದೆ ದಕ್ಷಿಣ ಗೋವಾ ಕ್ಷೇತ್ರದಿಂದ ಎಎಪಿ ತನ್ನ ಶಾಸಕ ವೆಂಜಿ ವಿಗಾಸ್ ಅಭ್ಯರ್ಥಿ ಎಂದು ಘೋಷಿಸಿತ್ತು.

"INDIA ಮೈತ್ರಿಕೂಟವು ಎಲ್ಲಾ ವಿರೋಧ ಪಕ್ಷಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಗೋವಾ ಫಾರ್ವರ್ಡ್ ಪಕ್ಷವು ನಮ್ಮ ಮೈತ್ರಿಯನ್ನು ಬೆಂಬಲಿಸುವುದಾಗಿ ಈಗಾಗಲೇ ಘೋಷಿಸಿದೆ" ಎಂದು ಪಾಲೇಕರ್ ಹೇಳಿದರು.

Tags:    

Similar News