ಕಾಂಗ್ರೆಸ್ ಶಾಸಕ ಮಹೇಂದ್ರಜೀತ್ ಮಾಳವೀಯ ಬಿಜೆಪಿಗೆ ಸೇರ್ಪಡೆ

Update: 2024-02-19 13:04 GMT

ಜೈಪುರ, ಫೆ.19 - ರಾಜಸ್ಥಾನದ ನಾಲ್ಕು ಬಾರಿ ಶಾಸಕ ಮತ್ತು ಮಾಜಿ ಸಚಿವ ಮಹೇಂದ್ರಜೀತ್ ಮಾಳವೀಯ ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

ಮಾಜಿ ಸಂಸದ ಹಾಗೂ ಬನ್ಸ್ವಾರಾ ಜಿಲ್ಲೆಯ ಬಗಿದೋರಾದ ಶಾಸಕ ಮಾಳವೀಯ ಅವರ ರಾಜೀನಾಮೆಯಿಂದ ಕಾಂಗ್ರೆಸ್‌ ಗೆ ಹಿನ್ನಡೆಯಾಗಿದೆ. ವಾಗಡ್ ದಕ್ಷಿಣ ರಾಜಸ್ಥಾನದ ಬುಡಕಟ್ಟು ಪ್ರದೇಶವಾಗಿದ್ದು, ಬನ್ಸ್ವಾರಾ ಮತ್ತು ಡುಂಗರ್ಪುರ್ ಜಿಲ್ಲೆಗಳನ್ನು ಒಳಗೊಂಡಿದೆ. ಜೈಪುರದ ಬಿಜೆಪಿ ಕಚೇರಿಯಲ್ಲಿ ಮಾಳವೀಯ ಅವರನ್ನು ರಾಜಸ್ಥಾನದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಮುಖ್ಯಸ್ಥ ಸಿ.ಪಿ. ಜೋಶಿ ಮತ್ತು ಇತರ ನಾಯಕರು ಪಕ್ಷಕ್ಕೆ ಸ್ವಾಗತಿಸಿದರು. ಭಾನುವಾರ ದೆಹಲಿಯಲ್ಲಿ ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೆ. ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಿಂದ ಪ್ರಭಾವಿತನಾದೆ ಎಂದು ಮಾಳವೀಯ ಹೇಳಿದರು. 

ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ ನಿರಾಕರಿಸಿದ್ದರಿಂದ ನೋವಾಗಿದೆ ಎಂದು ಮಾಳವೀಯ ಹೇಳಿದ್ದಾರೆ. 2008 ರಿಂದ ಶಾಸಕರಾಗಿರುವ ಅವರು 2008 ರಿಂದ 2013 ಮತ್ತು 2021 ರಿಂದ 2023 ರವರೆಗೆ ಕ್ಯಾಬಿನೆಟ್ ಸಚಿವರಾಗಿದ್ದರು. 1998ರಲ್ಲಿ ಬನ್ಸ್ವಾರಾದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.

Tags:    

Similar News