Chennai Air Show Tragedy | ಕಾಲ್ತುಳಿತ : ಐದು ಸಾವು, 90 ಕ್ಕೂ ಹೆಚ್ಚು ಜನರಿಗೆ ಗಾಯ

ಭಾನುವಾರ (ಅ.6) ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ಭಾರತೀಯ ವಾಯುಪಡೆಯ (ಐಎಎಫ್) ವೈಮಾನಿಕ ಪ್ರದರ್ಶನದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಐವರು ಮೃತಪಟ್ಟಿದ್ದು ಕನಿಷ್ಠ 90 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Update: 2024-10-07 07:29 GMT
ಚೆನ್ನೈ ಏರ್ ಶೋ
Click the Play button to listen to article

ಭಾನುವಾರ (ಅ. 6) ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ಭಾರತೀಯ ವಾಯುಪಡೆಯ (ಐಎಎಫ್) ವೈಮಾನಿಕ ಪ್ರದರ್ಶನದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಉಂಟಾಗಿ ಐವರು ಮೃತಪಟ್ಟಿದ್ದು ಕನಿಷ್ಠ 96 ಮಂದಿ ಗಾಯಗೊಂಡಿದ್ದಾರೆ.

ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಡಿಎಂಕೆ ಸರ್ಕಾರವನ್ನು ಖಂಡಿಸಿದ್ದಾರೆ. ಅಂಥ ಮಹತ್ವದ ಘಟನೆಯನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡಲು ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ದುಃಖತಪ್ತರಿಗೆ ಸಂತಾಪ ಸೂಚಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜನರು 

ಕಾರ್ಯಕ್ರಮವನ್ನು ವೀಕ್ಷಿಸಲು, ಸಾವಿರಾರು ಜನರು ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಂತಿದ್ದರು. ಅವರಲ್ಲಿ ಬಹಳಷ್ಟು ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಛತ್ರಿಗಳನ್ನು ಹಿಡಿದಿದ್ದರು. ಏರ್ ಶೋ ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಡೆಯಿತಾದರೂ, ಕನಿಷ್ಠ ಒಂದು ಗಂಟೆಗೂ ಮುನ್ನವೇ ಹೆಚ್ಚಿನ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಅನೇಕ ಪ್ರೇಕ್ಷಕರು ಮೂರ್ಛೆ ಹೋಗಿದ್ದರು. ಬಳಿಕ 30 ಕ್ಕೂ ಹೆಚ್ಚು ಜನರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಮಾಧ್ಯಮ ವರದಿಗಳು ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯನ್ನು 230 ಎಂದು ಸೂಚಿಸಿವೆ.

ನೂಕುಗುಗ್ಗಲು 

ಘಟನೆಯ ಬಳಿಕ ರಸ್ತೆಗಳು, ವಿಶೇಷವಾಗಿ ಕಡಲತೀರದ ಪ್ರದೇಶಕ್ಕೆ ಹತ್ತಿರವಿರುವ ರಸ್ತೆಗಳು ಹಾಗೂ ಮರ್ಟ್ಸ್ ಬಸ್‌ಗಳು ಮಾತ್ರವಲ್ಲದೆ ಮೆಟ್ರೋ ಸೇರಿದಂತೆ ಸ್ಥಳೀಯ ರೈಲುಗಳಲ್ಲಿ ಕೂಡ ನೂಕುನುಗ್ಗಲು ಸಂಭವಿಸಿತ್ತು. ಪ್ರದರ್ಶನ ಸ್ಥಳದ ಸಮೀಪದಲ್ಲಿರುವ ಅಣ್ಣಾ ಚೌಕದ ಬಸ್ ನಿಲ್ದಾಣವು ಜನರಿಂದ ತುಂಬಿ ತುಳುಕುತ್ತಿತ್ತು.

ಸಂಚಾರ ನಿರ್ಬಂಧಗಳ ದೃಷ್ಟಿಯಿಂದ ಜನರು ಬಸ್ಸುಗಳನ್ನು ಹಿಡಿಯಲು ಅಥವಾ ರೈಲು ನಿಲ್ದಾಣಗಳನ್ನು ತಲುಪಲು ಸಾಕಷ್ಟು ದೂರ ನಡೆಯಬೇಕಾಗಿತ್ತು. ಸಾವಿರಾರು ಜನರು ಒಂದೇ ಸಮಯದಲ್ಲಿ ಸ್ಥಳದಿಂದ ನಿರ್ಗಮಿಸಲು ಪ್ರಯತ್ನಿಸಿದಾಗ ಸ್ವಲ್ಪ ಸಮಯದವರೆಗೆ ಕಾಲ್ತುಳಿತದಂತಹ ಪರಿಸ್ಥಿತಿ ಉದ್ಭವಿಸಿದರೂ, ಪೊಲೀಸರು ಯಶಸ್ವಿಯಾಗಿ ಗುಂಪನ್ನು ನಿಯಂತ್ರಿಸಿದರು ಮತ್ತು ಆಂಬ್ಯುಲೆನ್ಸ್‌ಗಳಿಗೆ ತೆರಳಲು ಸರಕ್ಷಿತ ಮಾರ್ಗಗಳನ್ನು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು. 

ಮರೀನಾದಲ್ಲಿ ರೆಕಾರ್ಡ್ ಜನಸಂದಣಿ

ಐಎಎಫ್‌ನ ವಿಶೇಷ ಗರುಡ್ ಫೋರ್ಸ್ ಕಮಾಂಡೋಗಳು ಸಿಮ್ಯುಲೇಟೆಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ಮತ್ತು ಒತ್ತೆಯಾಳುಗಳನ್ನು ಮುಕ್ತಗೊಳಿಸುವಲ್ಲಿ ತಮ್ಮ ಧೈರ್ಯಶಾಲಿ ಕೌಶಲ್ಯಗಳನ್ನು ಪ್ರದರ್ಶಿಸಿದ ವೈಮಾನಿಕ ಪ್ರದರ್ಶದ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಮರೀನಾ ಬೀಚ್‌ಗೆ ಜಮಾಯಿಸಿದ್ದರು. ಪ್ಯಾರಾ ಜಂಪ್ ತರಬೇತುದಾರರು ಗುರಿ ಪ್ರದೇಶದ ಮೇಲೆ ನಿಖರವಾದ ಲ್ಯಾಂಡಿಂಗ್ ಮತ್ತು ಗುರಿ ಪ್ರದೇಶವನ್ನು ತಲುಪಲು ಕಮಾಂಡೋಗಳು ನುಣುಚಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಲೈಟ್‌ಹೌಸ್ ಮತ್ತು ಚೆನ್ನೈ ಬಂದರಿನ ನಡುವಿನ ಮರೀನಾದಲ್ಲಿ 92 ನೇ ಐಎಎಫ್ ದಿನಾಚರಣೆಯನ್ನು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಚೆನ್ನೈ ಮೇಯರ್ ಆರ್ ಪ್ರಿಯಾ ಮತ್ತು ಇತರ ಗಣ್ಯರು ಕುತೂಹಲದಿಂದ ವೀಕ್ಷಿಸಿದರು. 

15 ಲಕ್ಷ ಪ್ರೇಕ್ಷಕರು, 72 ವಿಮಾನಗಳು

ರಕ್ಷಣಾ ಇಲಾಖೆಯ ಪ್ರಕಟಣೆಯ ಪ್ರಕಾರ 15 ಲಕ್ಷಕ್ಕೂ ಹೆಚ್ಚು ಜನರು 72 ಕ್ಕೂ ಹೆಚ್ಚು ವಿಮಾನಗಳೊಂದಿಗೆ ರಾಷ್ಟ್ರದ ವಾಯು ಯೋಧರು ನಡೆಸಿಕೊಟ್ಟ ವರ್ಣರಂಜಿತ ಮತ್ತು ಅದ್ಭುತ ಪ್ರದರ್ಶನವನ್ನು ವೀಕ್ಷಿಸಿದರು. ಸುಮಾರು 21 ವರ್ಷಗಳ ನಂತರ ನಗರಕ್ಕೆ ಹಿಂದಿರುಗಿದ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಪೂರ್ವ ಕರಾವಳಿ ರಸ್ತೆಯ ಕೋವಲಂನಿಂದ ಎನ್ನೋರ್‌ವರೆಗಿನ ಸಂಪೂರ್ಣ ಬೀಚ್‌ ಮತ್ತು ಬಹುಮಹಡಿ ಕಟ್ಟಡಗಳ ಮೇಲ್ಛಾವಣಿಯು ಜನರಿಂದ ತುಂಬಿತ್ತು ಎಂದು ಪ್ರಕಟಣೆ ತಿಳಿಸಿದೆ. 

Tags:    

Similar News