ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ: ಸಿಬಿಐನಿಂದ ಸಮಾಪ್ತಿ ವರದಿ ಸಲ್ಲಿಕೆ
ಸಿಬಿಐ ತನಿಖೆಯ ನಂತರ ನೀಡಿದ ಸಮಾಪ್ತಿ ವರದಿಯಲ್ಲಿ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವು ಆತ್ಮಹತ್ಯೆಯೇ ಆಗಿದ್ದು, ಇದರಲ್ಲಿ ಕೊಲೆ ಅಥವಾ ಇನ್ನಾವುದೇ ಅಪರಾಧದ ಅಂಶಗಳು ಕಂಡುಬಂದಿಲ್ಲವೆಂದು ಸ್ಪಷ್ಟಪಡಿಸಿದೆ.;
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದ ತನಿಖೆಗೆ ಇದೀಗ ಪ್ರಮುಖ ತಿರುವು ಸಿಕ್ಕಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಕೇಂದ್ರ ತನಿಖಾ ದಳ (CBI) ಇದೀಗ ಸಮಾಪ್ತಿ ವರದಿ (closure report) ಸಲ್ಲಿಸಿದೆ. ರೆಜಪೂತ್ ಅವರ ಆತ್ಮಹತ್ಯೆಯಲ್ಲಿ ಯಾವುದೇ ಅಪರಾಧದ ಅಂಶವಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಮೇಲಿನ ಆರೋಪಗಳು ನಿರಾಧಾರ ಎಂಬುದು ಸಾಬೀತಾಗಿದೆ.
2020ರ ಜೂನ್ 14ರಂದು ಮುಂಬೈಯಲ್ಲಿನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಸುಶಾಂತ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣವು ದೇಶದಾದ್ಯಂತ ಭಾರೀ ಸುದ್ದಿಯಾಗಿತ್ತು. ಮೊದಲಿಗೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾ ಜನರ ಒತ್ತಡ ಮತ್ತು ರಾಜಕೀಯ ಮುಖಂಡರ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಲಾಗಿತ್ತು.
ಸಿಬಿಐ ತನಿಖೆಯ ನಂತರ ನೀಡಿದ ಸಮಾಪ್ತಿ ವರದಿಯಲ್ಲಿ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವು ಆತ್ಮಹತ್ಯೆಯೇ ಆಗಿದ್ದು, ಇದರಲ್ಲಿ ಕೊಲೆ ಅಥವಾ ಇನ್ನಾವುದೇ ಅಪರಾಧದ ಅಂಶಗಳು ಕಂಡುಬಂದಿಲ್ಲವೆಂದು ಸ್ಪಷ್ಟಪಡಿಸಿದೆ.
ಮಾದಕ ದ್ರವ್ಯ ಪೂರೈಕೆ ಆರೋಪ
ಇದಕ್ಕೂ ಮುನ್ನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮತ್ತು ಎನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ಸಂಸ್ಥೆಗಳೂ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದವು.
ಜನಮಾನಸದಲ್ಲಿ ಬೇಸರ ಹಾಗೂ ಕುತೂಹಲ ಮೂಡಿಸಿದ್ದ ಈ ಪ್ರಕರಣ ಇದೀಗ ತಾರ್ಕಿಕ ಅಂತ್ಯ ಕಂಡಿದೆ.