ಮುಂಬಯಿ ಭೂಗತ ಲೋಕದ ಹೊಸ ಡಾನ್ ಲಾರೆನ್ಸ್ ಬಿಷ್ಣೋಯಿ?

ರಿಯಲ್‌ ಎಸ್ಟೇಟ್ ವ್ಯವಹಾರದಲ್ಲಿ ಪ್ರಮುಖರಾಗಿದ್ದ ಮಹಾರಾಷ್ಟ್ರದ ಪ್ರಮುಖ ರಾಜಕಾರಣಿ ಬಾಬಾ ಸಿದ್ದಿಕ್ ಅವರ ಸಿನಿಮೀಯ ರೀತಿಯ ಹತ್ಯೆಯೊಂದಿಗೆ ʻಮ್ಯಾಕ್ಸಿಮಮ್ʼ ಸಿಟಿ ಮುಂಬೈನ ಪರಿಸರದಲ್ಲಿ ಈ ರೀತಿಯ ಪ್ರಶ್ನೆಯೊಂದು ಧುತ್ತೆಂದು ಉದ್ಭವಿಸಿದೆ.

Update: 2024-10-20 01:00 GMT

ರಾಮ್‌ ಗೋಪಾಲ್‌ ವರ್ಮಾ ಅವರ ಸತ್ಯ ಸಿನಿಮಾದಲ್ಲಿನ ಕಾಲ್ಪನಿಕ ಪಾತ್ರ ಭಿಕು ಮ್ಹಾತ್ರೆ, ʻಕಲ್ಟ್‌ ಸಿನಿಮಾ ಎನ್ನಿಸಿಕೊಂಡ ಈ ಚಿತ್ರದಲ್ಲಿ ಮ್ಹಾತ್ರೆ ತನ್ನ ಮುಂದೆ ವಿಶಾಲವಾಗಿ ಹರಡಿಕೊಂಡಿರುವ ಸಮುದ್ರದ ದಡದ ಬಂಡೆಯ ಮೇಲೆ ನಿಂತು, ಮುಂಬೈನ ಮುಗಿಲೆತ್ತರದ ಕಾಂಕ್ರೀಟ್‌ ಕಟ್ಟಡಗಳನ್ನು ಉದ್ದೇಶಿಸಿ " ಮುಂಬೈ ಕಾ ಕಿಂಗ್ ಕೌನ್ (ಮುಂಬೈನ ರಾಜ ಯಾರು)?" ಎಂದು ಪ್ರಶ್ನಿಸುತ್ತಾನೆ. 

"ಭಿಕು ಮ್ಹಾತ್ರೆ," ಎಂದು ತಾನೇ ಸಂತೋಷದಿಂದ ಘೋಷಿಸಿಕೊಳ್ಳುತ್ತಾನೆ.

ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಕುಖ್ಯಾತ ಭೂಗತ ಜಗತ್ತಿನ ಪಾತಕಿ‌ ಲಾರೆನ್ಸ್ ಬಿಷ್ಣೋಯಿ ಕೂಡ ಅದೇ ಪ್ರಶ್ನೆಯನ್ನು ಕೇಳುವ ಮೂಲಕ, ಈಗ ನಿಜ ಜೀವನದಲ್ಲಿ ಈ ದೃಶ್ಯವನ್ನು ಪುನರಾವರ್ತಿಸುತ್ತಿರಬಹುದೇ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ, ಇದು ಬಂಡೆಯಿಂದಲ್ಲ ಆದರೆ ಈ ಪ್ರಶ್ನೆ ಕೇಳಿಬರುತ್ತಿರುವುದು ಅಹಮದಾಬಾದ್‌ನ ಬಿಗಿ ಭದ್ರತೆಯ ಸಬರಮತಿ ಕೇಂದ್ರ ಕಾರಾಗೃಹದಿಂದ ಎನ್ನುವುದು ಇಲ್ಲಿ ಮುಖ್ಯ.

ರಿಯಲ್‌ ಎಸ್ಟೇಟ್ ವ್ಯವಹಾರದಲ್ಲಿ ಪ್ರಮುಖರಾಗಿದ್ದ ಮಹಾರಾಷ್ಟ್ರದ ಪ್ರಮುಖ ರಾಜಕಾರಣಿ ಬಾಬಾ ಸಿದ್ದಿಕ್ ಅವರ ಸಿನಿಮೀಯ ರೀತಿಯ ಹತ್ಯೆಯೊಂದಿಗೆ ʻಮ್ಯಾಕ್ಸಿಮಮ್ʼ ಸಿಟಿ ಮುಂಬೈನ ಪರಿಸರದಲ್ಲಿ ಈ ರೀತಿಯ ಪ್ರಶ್ನೆಯೊಂದು ಧುತ್ತೆಂದು ಉದ್ಭವಿಸಿದೆ. ಉತ್ತರಕ್ಕಾಗಿ ತಡಕಾಡುತ್ತಿದೆ.

ಬಿಷ್ಣೋಯ್ ಸಾಕಷ್ಟು ಮಂದಿ ಶಕ್ತಿವಂತ ಬೆಂಬಲಿಗರನ್ನು ಹೊಂದಿದ್ದಾನೆಯೇ ? ಅವನಿಗೆ ಮುಂಬೈನಲ್ಲಿ ಅವನ ಭೂಗತ ಜಗತ್ತಿನ ಜಾಲ ವಿಸ್ತಾರವಾಗುತ್ತಿದೆಯೇ? ಅಥವಾ ಅವನಿಗೆ ಮುಂಬೈ ನಗರದ ಆಳ-ಅಗಲಗಳ ಬಗ್ಗೆ ಅರಿವಿದೆಯೇ? ದಾವೂದ್ ಇಬ್ರಾಹಿಂ, ಚೋಟಾ ರಾಜನ್, ವರದರಾಜನ್ ಮೊದಲಿಯಾರ್‌ ಮತ್ತು ಅರುಣ್ ಗಾವ್ಲಿಯಂತಹ ʻಆʼ ಕಾಲದ ಭೂಗತ ಜಗತ್ತಿನ ಪಂಟರ್ ಗಳಿಗಿಂತ ಇವನು ಚಾಲಾಕಿಯೇ? ಸದ್ಯಕ್ಕೆ ಮುಂಬೈ ಭೂಗತ ಜಗತ್ತಿನಲ್ಲಿ ಕಾಲಿಯಾಗಿರುವ ನಾಯಕ ಪಟ್ಟದ ಮೇಲೆ ಇವನು ಕಣ್ಣು ಹಾಕಿದ್ದಾನೆಯೇ? ಹೀಗೆ ನೂರಾರು ಪ್ರಶ್ನೆಗಳು…

ಬಿಷ್ಣೋಯಿ ಅವರ ಪ್ರಯಾಣ

ಈ ಪ್ರಶ್ನೆಗಳಿಗೆ ಉತ್ತರಿಸಲು, ಪುಟಾಣಿ ಕೊಲೆ ಸುಲಿಗೆಗಳಲ್ಲಿ ನಿರತನಾಗಿದ್ದ ಬಿಷ್ಣೋಯ್ ಅಂತರರಾಷ್ಟ್ರೀಯ ಕುಖ್ಯಾತಿಯತ್ತ ಸಾಗಿರುವ ಹಾದಿಯನ್ನು ನೋಡುವುದು ಮುಖ್ಯ. ಬಿಷ್ಣೋಯ್ ಉತ್ತರ ಭಾರತದ ಸಣ್ಣ ಪ್ರಮಾಣದ ಅಪರಾಧಗಳ ಮೂಲಕ ಮೊಳಕೆಯೊಡೆದವನು. ಆರಂಭದಲ್ಲಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಇವನು ಕ್ರಿಯಾಶೀಲನಾಗಿದ್ದ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಖ್ಯಾತ ಸಿನಿಮಾ ನಟ ಸಲ್ಮಾನ್ ಖಾನ್ ಅವರನ್ನು ಜೋಧ್‌ಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಮೂಲಕ ಅವರು ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಕ್ಕೆ ಬಂದವನು ಈ ಬಿಷ್ಣೋಯ್ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

1998ರಲ್ಲಿ ರಾಜಸ್ಥಾನದಲ್ಲಿ ಹಮ್ ಸಾಥ್ ಸಾಥ್ ಹೇ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದ ಆರೋಪ ಹೊರಿಸಲಾಗಿತ್ತು. ರಾಜಸ್ಥಾನದಲ್ಲಿ ಸಲ್ಮಾನ್ ವಿರುದ್ಧ ಬಿಷ್ಣೋಯ್ ಸಮುದಾಯ ಪ್ರತಿಭಟನೆ ನಡೆಸಿತು. ಸಮುದಾಯವು ಕೃಷ್ಣಮೃಗವನ್ನು ರಕ್ಷಿಸುವುದನ್ನು ತಮ್ಮ ಆಧ್ಯಾತ್ಮಿಕ ಕರ್ತವ್ಯವೆಂದು ಪರಿಗಣಿಸುತ್ತದೆ ಏಕೆಂದರೆ ಇದು ಅವರ 14 ನೇ ಶತಮಾನದ ಆಧ್ಯಾತ್ಮಿಕ ನಾಯಕ ಗುರು ಮಹಾರಾಜ್ ಜಾಂಬಾಜಿಯ ಪುನರ್ಜನ್ಮ ಎಂಬ ಗಾಢವಾದ ನಂಬಿಕೆ ಬಿಷ್ಣೋಯ್ ಸಮುದಾಯದ್ದು . ಈ ಕೃಷ್ಣಮೃಗಗಳ ಮೇಲೆ ಯಾವುದೇ ಆಕ್ರಮಣಕಾರಿ ಪ್ರಯತ್ನ ನಡೆದರೆ ಈ ಸಮುದಾಯವು ಸಹಿಸಿಕೊಳ್ಳುವುದಿಲ್ಲ.

ಸಲ್ಮಾನ್ ಖಾನ್ ಗೆ ಬೆದರಿಕೆ

ಬಿಷ್ಣೋಯ್‌ ಹಾಕಿದ ಬೆದರಿಕೆಯನ್ನು ಮೊದಮೊದಲು ಕೇವಲ ಪ್ರಚಾರದ ಸ್ಟಂಟ್ ಎಂದು ತಳ್ಳಿಹಾಕಲಾಯಿತು. ಜೂನ್ 2018 ರಲ್ಲಿ ಬಿಷ್ಣೋಯ್ ಅವರ ಪ್ರಮುಖ ಸಹಾಯಕ ಸಂಪತ್ ನೆಹ್ರಾ ಅವರನ್ನು ಹರ್ಯಾಣ ಪೊಲೀಸರು ಬಂಧಿಸಿದ ನಂತರ ಮುಂಬೈ ಪೊಲೀಸರು ಸಲ್ಮಾನ್‌ಗೆ ಬಂದಿದ್ದ ಬೆದರಿಕೆಯನ್ನು ಲಘುವಾಗಿ ಪರಿಗಣಿಸಿತು. ನೆಹ್ರಾ ಮುಂಬೈಗೆ ತೆರಳಿ ಬಾಂದ್ರಾದಲ್ಲಿರುವ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ನಿವಾಸದಲ್ಲಿ ಸಲ್ಮಾನ್‌ ಅವರನ್ನು ಗುರಿಯಾಗಿಸಲು ಯಾವ ರೀತಿಯ ಅಸ್ತ್ರ ಸೂಕ್ತ ಎಂದು ಸಮೀಕ್ಷೆ ನಡೆಸಿದ್ದ. ಅವನು ಸಲ್ಮಾನ್ ಅವರ ಬಾಲ್ಕನಿಯಲ್ಲಿ ನಿಂತಿದ್ದ ಅಲ್ಲಿಂದ ಕೆಲವೊಮ್ಮೆ ಹೊರಗೆ ನೆರೆದಿದ್ದ ಅವರ ಅಭಿಮಾನಿಗಳನ್ನು ಸ್ವಾಗತಿಸುವ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ. 

ಬಿಷ್ಣೋಯ್‌  ನೆಹ್ರಾ ಸಲ್ಮಾನ್‌ಗೆ ಗುರಿ ಇಡುವ ಜವಾಬ್ದಾರಿ ನೀಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಪ್ರಯತ್ನ ಯಶಸ್ವಿಯಾಗುವ ಮುನ್ನವೇ ನೆಹ್ರಾ ಅವರನ್ನು ಪೊಲೀಸರು ಬಂಧಿಸಿದರು. ಆದರೆ, ಅಂದಿನಿಂದ, ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡ ಬಿಷ್ಣೋಯ್ ಸಲ್ಮಾನ್ ಅವರನ್ನು ಗುರಿಯಾಗಿಸುವ ಪ್ರಯತ್ನಗಳನ್ನು ಮುಂದುರವರಿಸಿಕೊಂಡೇ ಬಂದಿದ್ದಾರೆ.

2022 ರಲ್ಲಿ ಬಿಷ್ಣೋಯ್ ಗ್ಯಾಂಗ್ ನಿಂದ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯಾಯಿತು. ನಂತರ ಸಲ್ಮಾನ್‌ಗೆ ಮತ್ತೆ ಬೆದರಿಕೆ ಸಂದೇಶ ಬಂದಿತು. ಸಲ್ಮಾನ್ ಗೂ ಸಿಧು ಮೂಸೆವಾಲಾ ಗತಿಯೇ ಆಗುತ್ತದೆ ಎಂಬ ಎಚ್ಚರಿಕೆ ನೀಡಲಾಯಿತು. ಆಗಲೇ ಸಲ್ಮಾನ್‌ ಮನೆಯ ಮೇಲೆ ಗುಂಡಿನ ದಾಳಿ ಕೂಡ ನಡೆಯಿತು. ಫೆಬ್ರವರಿಯಲ್ಲಿ ಪನ್ವೇಲ್‌ನಲ್ಲಿರುವ ಅವರ ಫಾರ್ಮ್‌ಹೌಸ್‌ನ ಸುತ್ತಲೂ ಸಲ್ಮಾನ್‌ನನ್ನು ಗುರಿಯಾಗಿಸುವ ಮತ್ತೊಂದು ಯೋಜನೆ ಪೊಲೀಸರಿಗೆ ತಿಳಿದಿತ್ತು. ಅಲ್ಲಿ ಬೀಡುಬಿಟ್ಟಿದ್ದ ಬಿಷ್ಣೋಯ್‌ ತಂಡದವರನ್ನು ಪೊಲೀಸರು ಬಂಧಿಸಿದರು. 

ಬಿಷ್ಣೋಯ್ ಜೈಲಿನಲ್ಲಿಈ ಎಲ್ಲಾ ಬೆಳವಣಿಗೆಗಳೂ ಬಿಷ್ಣೋಯ್ ಗ್ಯಾಂಗ್‌ ಬಗ್ಗೆ ಭಯದ ವಾತಾವರಣ ಸೃಷ್ಟಿಸಿದರೂ, 2015 ರಲ್ಲಿ ಬಂಧನಕ್ಕೊಳಗಾದ ನಂತರ ಬಿಷ್ಣೋಯ್ ಕಳೆದ ಒಂಬತ್ತು ವರ್ಷಗಳಿಂದ ಜೈಲಿನಲ್ಲಿದ್ದಾನೆ ಎಂದು ಬಿಷ್ಣೋಯ್ ಅವರನ್ನು ಹಲವು ಪ್ರಕರಣಗಳಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

“ನಾವು ಅವರ ವಿರುದ್ಧ (ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ) ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದೇವೆ. ಆದರೆ ಅವರು ಈ ಎಲ್ಲಾ ಪ್ರಕರಣಗಳಲ್ಲಿ ನಿರಪರಾಧಿ ಎಂದು ಸಾಬೀತು ಪಡಿಸಲು ಯತ್ನಿಸಬಹುದು. ಅವರು ಜೈಲಿನಲ್ಲಿದ್ದ, ಜೈಲು ಅಧಿಕಾರಿಗಳ ಕಣ್ಗಾವಲಿನಲ್ಲಿ ಈ ಎಲ್ಲಾ ಅಪರಾಧಗಳ ಮಾಸ್ಟರ್‌ಮೈಂಡ್ ಮಾಡಲು ಸಾಧ್ಯವಾದಂತಿಲ್ಲ ”ಎಂದು ಅಧಿಕಾರಿಯೊಬ್ಬರು ದ ಫೆಡರಲ್‌ಗೆ ತಿಳಿಸಿದರು.

ಹೆಸರು ಬಹಿರಂಗ ಪಡಿಸಲು ಬಯಸದ ಈ ಅಧಿಕಾರಿ “ಲಾರೆನ್ಸ್ ಬಿಷ್ಣೋಯ್‌ ಈಗ ಬಂಧನದಲ್ಲಿರುವುದರಿಂದ ಈ ಎಲ್ಲಾ ಪ್ರಕರಣಗಳಲ್ಲಿ ಅವರನ್ನು ಅಪರಾಧಿ ಮಾಡುವುದು ಪೊಲೀಸರಿಗೆ ಕಷ್ಟವಾಗಬಹುದು” ಎಂದು ಹೇಳಿದರು.

“ಅವರು ಈಗ ತಮ್ಮ ಬೆಂಬಲಿಗರ ಜೊತೆ ಮಾತನಾಡುವ ಅಗತ್ಯವಿಲ್ಲ. ಮತ್ತು ಅನೇಕ ಬಾರಿ, ಅವನ ಪರವಾಗಿ ಹತ್ಯೆಗಳನ್ನು ನಡೆಸುವ ಬೆಂಬಲಿಗರ ಗುರುತು ಕೂಡ ಅವನಿಗೆ ತಿಳಿದಿಲ್ಲ. ಅವರು ಜೈಲಿನಲ್ಲಿಯೇ ಯಾರಿಗಾದರೂ ಸೂಚನೆಗಳನ್ನು ಮೌಖಿಕವಾಗಿ ರವಾನಿಸುವ ಸಾಧ್ಯತೆಯಿದೆ. ಇವುಗಳನ್ನು ದೇಶದ ಹೊರಗೆ ಕುಳಿತಿರುವ ಅವನ ಸಹಚರರಿಗೆ ರವಾನಿಸಲಾಗುತ್ತದೆ ಮತ್ತು ಅವರು ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಲು ತಮ್ಮ ತಂಡವನ್ನು ಸಿದ್ಧಮಾಡಿಕೊಳ್ಳುತ್ತಾರೆ ಎಂದು ಅಧಿಕಾರಿ ವಿವರಿಸಿದರು.

ಎನ್ಐಎ ಹಗ್ಗಜಗ್ಗಾಟ ನಡೆಸಿತು

ಮೂಸೆವಾಲಾ ಹತ್ಯೆಯ ನಂತರ, ಕೇಂದ್ರ ಗೃಹ ಸಚಿವಾಲಯವು, ಭೂಗತ ಜಗತ್ತಿನ –ಮಾದಕ ದ್ರವ್ಯ ಕಳ್ಳಸಾಗಣೆ-ಭಯೋತ್ಪಾದನೆಯ ಸಂಬಂಧವನ್ನು ತನಿಖೆ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ನೆರವು ಪಡೆಯಲು ನಿರ್ಧರಿಸಿತು.

"ಬಿಷ್ಣೋಯ್ ತನ್ನ ಅಪರಾಧ ಸಾಮ್ರಾಜ್ಯವನ್ನು ಅಡೆತಡೆಯಿಲ್ಲದೆ ನಡೆಸಲು ಪ್ರಮುಖ ಜೈಲು ಅಧಿಕಾರಿಗಳ ಅಂಗೈ ಬೆಚ್ಚಗೆ ಮಾಡುವ ಮೂಲಕ ಜೈಲು ವ್ಯವಸ್ಥೆಯನ್ನು ಸುಲಭವಾಗಿ ಕುಶಲತೆಯಿಂದ ನಿರ್ವಹಿಸುತ್ತಿರುವುದು ಕಂಡುಬಂದಿದೆ" ಎಂದು ಬಿಷ್ಣೋಯ್ ಗ್ಯಾಂಗ್ ವಿರುದ್ಧ ತನಿಖೆಯ ಭಾಗವಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಫೆಡರಲ್ ಗೆ ತಿಳಿಸಿದರು. "ಜೈಲು ಅಧಿಕಾರಿಗಳನ್ನು ಸಂತೋಷವಾಗಿರಿಸುವುದು ಜೈಲಿನೊಳಗೆ ಬಿಷ್ಣೋಯ್‌ ಗೆ ಲಾಭದಾಯಕ" ಎನ್ನುತ್ತಾರೆ ಆ ಅಧಿಕಾರಿ.

"ಲಾರೆನ್ಸ್ ಬಿಷ್ಣೋಯ್‌ ಗೆ ಅವರ ಬೆಂಬಲಿಗರನ್ನು ಭೇಟಿ ಮಾಡುವ ಸಾಧ್ಯತೆಯನ್ನು ಕಡಿತಗೊಳಿಸಲು ಅವನನ್ನು ಸಬರಮತಿ ಜೈಲಿಗೆ ಕಳುಹಿಸಲು ನಿರ್ಧರಿಸಲಾಯಿತು. 

Tags:    

Similar News