Union Budget 2024: ಯುಪಿಎಸ್ಸಿಗೆ 200 ಕೋಟಿ‌ ರೂ. ಲೋಕಪಾಲ್‌ ಗೆ 33.32 ಕೋಟಿ ರೂ.

Update: 2024-07-23 15:08 GMT

ನವದೆಹಲಿ, ಜುಲೈ 23- ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ಕ್ಕೆ ನಾಗರಿಕ ಸೇವೆಯ ಅಧಿಕಾರಿಗಳ ಪರೀಕ್ಷೆ ಮತ್ತು ಆಯ್ಕೆಗೆ 200 ಕೋಟಿ ರೂ. ಮೀಸಲಿಟ್ಟಿದೆ. 

ಆಯೋಗ ಪ್ರತಿವರ್ಷ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗೆ ಮೂರು ಹಂತಗಳಲ್ಲಿ ಪರೀಕ್ಷೆಯನ್ನು ನಡೆಸುತ್ತದೆ - ಪೂರ್ವಭಾವಿ, ಮುಖ್ಯ ಮತ್ತು ಸಂದರ್ಶನ. ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುಪಿಎಸ್‌ಸಿಗೆ ಪ್ರಸಕ್ತ ಹಣಕಾಸು ವರ್ಷ 425.71 ಕೋಟಿ ರೂ. ನೀಡಿದ್ದಾರೆ. ಇದರಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ವೇತನ, ಭತ್ಯೆ, ಆಡಳಿತಾತ್ಮಕ ವೆಚ್ಚಗಳು ಮತ್ತು ಇತರ ವೆಚ್ಚ 208.99 ಕೋಟಿ ರೂ. ಯುಪಿಎಸ್ಸಿ ನಡೆಸುವ ಪರೀಕ್ಷೆ, ನೇಮಕ ಪರೀಕ್ಷೆಗಳು ಮತ್ತು ಆಯ್ಕೆಗಳಿಗೆ 216.72 ಕೋಟಿ ರೂ.ನಿಗದಿಪಡಿಸಲಾಗಿದೆ. 2023-24ರಲ್ಲಿ ಆಯೋಗಕ್ಕೆ 426.24 ಕೋಟಿ ರೂ. ನೀಡೆಲಾಗಿತ್ತು. 

ಭ್ರಷ್ಟಾಚಾರ ನಿಗ್ರಹ ಓಂಬುಡ್ಸ್‌ಮನ್ ಲೋಕಪಾಲ್‌ಗೆ 33.32 ಕೋಟಿ ರೂ.‌ ಮತ್ತು ಕೇಂದ್ರ ವಿಚಕ್ಷಣ ಆಯೋಗ(ಸಿವಿಸಿ)ಗೆ 51.31 ಕೋಟಿ ರೂ.ನೀಡಲಾಗಿದೆ. ಸಿವಿಸಿಗೆ ಕಳೆದ ಆರ್ಥಿಕ ವರ್ಷದಲ್ಲಿ 44.46 ಕೋಟಿ ರೂ. ನೀಡಲಾಗಿತ್ತು. ಬಳಿಕ 47.73 ಕೋಟಿ ರೂ.ಗೆ ಪರಿಷ್ಕರಿಸಲಾಯಿತು.

Tags:    

Similar News