ಆಂಧ್ರ ಅಗ್ನಿ ಅವಘಡ | ಫಾರ್ಮಾ ಕಂಪನಿಯಲ್ಲಿ ಬೆಂಕಿ: 17 ಮಂದಿ ಸಾವು
ಆಂಧ್ರಪ್ರದೇಶದ ಅಚ್ಚುತಪುರಂನಲ್ಲಿರುವ ಔಷಧ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 17 ಜನ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಅನಕಪಲ್ಲಿ ಜಿಲ್ಲೆಯ ಅಚ್ಯುತಪುರಂನಲ್ಲಿರುವ ಎಸ್ಸೆನ್ಷಿಯಾ ಅಡ್ವಾನ್ಸ್ಡ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಮಧ್ಯಾಹ್ನ 2:15 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅನಕಪಲ್ಲಿ ಜಿಲ್ಲಾಧಿಕಾರಿ ವಿಜಯ ಕೃಷ್ಣನ್ ತಿಳಿಸಿದ್ದಾರೆ.
ʻಕಾರ್ಖಾನೆಯು ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 381 ಉದ್ಯೋಗಿಗಳಿದ್ದಾರೆ. ಊಟದ ಸಮಯದಲ್ಲಿ ಸ್ಫೋಟ ಸಂಭವಿಸಿರುವುದರಿಂದ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು,ʼಎಂದು ಹೇಳಿದ್ದಾರೆ. ಸ್ಫೋಟವು ವಿದ್ಯುತ್ ಸಂಬಂಧಿತ ಎಂದು ಶಂಕಿಸಲಾಗಿದೆ.
ಆರು ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವು. ಗಾಯಾಳುಗಳನ್ನು ಅನಕಪಲ್ಲಿ ಮತ್ತು ಅಚ್ಯುತಪುರಂನಲ್ಲಿರುವ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಘಟಕದಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದು, ಮ್ಥತ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಮಧ್ಯಂತರ ರಾಸಾಯನಿಕಗಳು ಮತ್ತು ಸಕ್ರಿಯ ಔಷಧ ಘಟಕ(ಎಪಿಐ) ತಯಾರಿಸುವ ಕಾರ್ಖಾನೆ, 200 ಕೋಟಿ ರೂ.ಹೂಡಿಕೆಯೊಂದಿಗೆ ಏಪ್ರಿಲ್ 2019 ರಲ್ಲಿ ಪ್ರಾರಂಭಗೊಂಡಿತು. ಅಚ್ಚುತಪುರಂ ಕ್ಲಸ್ಟರ್‌ನಲ್ಲಿರುವ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ (ಎಪಿಐಐಸಿ) ಬಹು ಉತ್ಪನ್ನ ವಿಶೇಷ ಆರ್ಥಿಕ ವಲಯದ 40 ಎಕರೆ ಕ್ಯಾಂಪಸ್‌ನಲ್ಲಿದೆ.