Waqf Board Bill | ವಕ್ಫ್ ಕಾಯಿದೆ ತಿದ್ದುಪಡಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ನೆರೆಯ ರಾಷ್ಟ್ರಗಳ ನುಸುಳುಕೋರರನ್ನು ನಿಯಂತ್ರಿಸಲು ಅಗತ್ಯವಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನವನ್ನೂ ತಡೆಯಲು ಯಾರಿಗೂ ಸಾಧ್ಯವಿಲ್ಲ ಅವರು ಇದೇ ವೇಳೆ ಗೃಹ ಸಚಿವರು ಹೇಳಿದ್ದಾರೆ.

Update: 2024-11-12 13:42 GMT
ಅಮಿತ್‌ ಶಾ

ಕರ್ನಾಟಕದಲ್ಲಿ ವಕ್ಫ್‌ ಮಂಡಳಿಯು ದೇವಾಲಯಗಳು, ರೈತರು ಮತ್ತು ಬಡವರ ಭೂಮಿ ಕಬಳಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಆರೋಪಿಸಿದ್ದು, ಇದನ್ನು ತಡೆಯಲು ವಕ್ಫ್‌ ಕಾಯಿದೆ ತಿದ್ದುಪಡಿ ತರುವುದು ಖಚಿತ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಜಾರ್ಖಂಡ್‌ನ ಬಾಗ್ಮಾರಾದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ ಹೇಳಿದರು.

ನೆರೆಯ ರಾಷ್ಟ್ರಗಳ ನುಸುಳುಕೋರರನ್ನು ನಿಯಂತ್ರಿಸಲು ಅಗತ್ಯವಿರುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನವನ್ನೂ ತಡೆಯಲು ಯಾರಿಗೂ ಸಾಧ್ಯವಿಲ್ಲ ಅವರು ಇದೇ ವೇಳೆ ಹೇಳಿದ್ದಾರೆ. ಅದರೆ ಕಾನೂನಿನ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗುವುದು ಎಂದು ಅವರು ಹೇಳಿದರು.

"ವಕ್ಫ್ ಮಂಡಳಿಗೆ ಎಲ್ಲರ ಭೂಮಿ ಕಸಿದುಕೊಳ್ಳುವ ಅಭ್ಯಾಸವಿದೆ. ಕರ್ನಾಟಕದಲ್ಲಿ ಮಂಡಳಿಯು ಗ್ರಾಮಸ್ಥರ ಆಸ್ತಿಪಾಸ್ತಿಗಳನ್ನು ನುಂಗಿಹಾಕಿದೆ. ದೇವಾಲಯಗಳು, ರೈತರು ಮತ್ತು ಗ್ರಾಮಸ್ಥರ ಭೂಮಿ ಕಸಿದುಕೊಂಡಿದೆ. ಹೀಗಾಗಿ ವಕ್ಫ್ ಮಂಡಳಿಯಲ್ಲಿ ಬದಲಾವಣೆಗಳ ಅಗತ್ಯವಿದೆ ಎಂಬುದು ಎಲ್ಲರ ಅಭಿಪ್ರಾಯ. ಆದರೆ ಹೇಮಂತ್ ಸೊರೆನ್‌ ಮತ್ತು ರಾಹುಲ್ ಗಾಂಧಿ ಬೇಡ ಎಂದು ಹೇಳುತ್ತಾರೆ. ಅವರು ಅದನ್ನು ವಿರೋಧಿಸುತ್ತಲೇ ಇರಲಿ. ನಾನು ನಿಮಗೆ ಭರವಸೆ ನೀಡುತ್ತೇನೆ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಬಿಜೆಪಿ ಅಂಗೀಕರಿಸುತ್ತದೆ. ಈ ವಿಚಾರದಲ್ಲಿ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಸವಾಲು ಎಸೆದರು.

ಜೆಎಂಎಂ ನೇತೃತ್ವದ ಮೈತ್ರಿಕೂಟವು ನುಸುಳುಕೋರರನ್ನು ತನ್ನ ಮತ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಲಾಗುವುದು" ಎಂದು ಅಮಿತ್‌ ಶಾ ಹೇಳಿದರು .

ಜಾರ್ಖಂಡ್‌ನಲ್ಲಿ ವಿದೇಶಿಗರ ಒಳನುಸುಳುವಿಕೆ ತಡೆಗಟ್ಟುವ ಉದ್ದೇಶದಿಂದ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ಮಾಡುತ್ತೇವೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಬುಡಕಟ್ಟು ಜನರನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಒಬಿಸಿ ಮೀಸಲಾತಿಗೆ ವಿರೋಧ

ಒಬಿಸಿ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಶಾ ಆರೋಪಿಸಿದರು. "ರಾಹುಲ್ ಗಾಂಧಿಯವರ ನಾಲ್ಕು ತಲೆಮಾರುಗಳು ಬಂದರೂ ಒಬಿಸಿ ಮೀಸಲಾತಿಯನ್ನು ಯಾರಿಂದಲೂ ಮುಟ್ಟಲು ಸಾಧ್ಯವಿಲ್ಲ" ಎಂದು ಶಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಆರೋಪಿಸಿದರು.

"ಜೆಎಂಎಂ-ರಾಹುಲ್ ದೇಶವನ್ನು ಜಾತಿಗಳ ಆಧಾರದ ಮೇಲೆ ವಿಭಜಿಸುತ್ತಿದ್ದಾರೆ ಎಂದು ಅಮಿತ್‌ ಶಾ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕಲ್ಯಾಣಕ್ಕಾಗಿ ಬಡವರು, ರೈತರು, ಯುವಕರು ಮತ್ತು ಮಹಿಳೆಯರು ಎಂಬ ನಾಲ್ಕು ವರ್ಗಗಳನ್ನು ಮಾತ್ರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ, ಮುಂದಿನ ಐದು ವರ್ಷಗಳಲ್ಲಿ ಜಾರ್ಖಂಡ್ ಅನ್ನು ದೇಶದ ಅತ್ಯಂತ ಸಮೃದ್ಧ ರಾಜ್ಯವನ್ನಾಗಿ ಮಾಡುತ್ತದೆ. ಜೆಎಂಎಂ ಕಾಂಗ್ರೆಸ್ ನಾಯಕರು ಲೂಟಿ ಮಾಡಿದ ಪ್ರತಿ ಪೈಸೆಯನ್ನು ಅದರ ಬೊಕ್ಕಸಕ್ಕೆ ಹಿಂದಿರುಗಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ಭರವಸೆ ನೀಡಿದರು. ನಾವು ಜಾರ್ಖಂಡ್‌ನಲ್ಲಿ ಖನಿಜ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸುತ್ತೇವೆ ಮತ್ತು ಯಾರೂ ಇತರ ರಾಜ್ಯಗಳಿಗೆ ವಲಸೆ ಹೋಗದ ವಾತಾವರಣವನ್ನು ಸೃಷ್ಟಿಸುತ್ತೇವೆ" ಎಂದು ಅವರು ಹೇಳಿದರು.  

Tags:    

Similar News