ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಏಮ್ಸ್ ನಿಂದ ಎಐ-ಆಧಾರಿತ ಆ್ಯಪ್ ಬಿಡುಗಡೆ

ದೆಹಲಿ ಕೇಂದ್ರದ ಜೊತೆಗೆ, ಈ ಅಪ್ಲಿಕೇಶನ್ ಅನ್ನು AIIMS-ಭುವನೇಶ್ವರ ಮತ್ತು ಶಹದಾರದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್ (IHBAS) ನಲ್ಲಿಯೂ ಪ್ರಾರಂಭಿಸಲಾಯಿತು.;

Update: 2025-09-11 13:57 GMT

"ನೆವರ್ ಅಲೋನ್" ಅಪ್ಲಿಕೇಶನ್ ಸ್ಕ್ರೀನಿಂಗ್, ಹಸ್ತಕ್ಷೇಪ ಮತ್ತು ಹಸ್ತಕ್ಷೇಪದ ನಂತರದ ಅನುಸರಣೆಯ ಮೇಲೆ ಕೇಂದ್ರೀಕರಿಸುತ್ತಿದೆ.

Click the Play button to listen to article

ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನದ ಅಂಗವಾಗಿ AIIMS-ದೆಹಲಿ ʻನೆವರ್ ಅಲೋನ್‌ʼ ಎಂಬ ಆಪ್‌  ಅನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.  

ಇದು AI ಆಧಾರಿತ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಟ್ರ್ಯಾಕಿಂಗ್ ಅಪ್ಲಿಕೇಶನ್ ಆಗಿದ್ದು, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯಾ ಪ್ರವೃತ್ತಿ ನಿಭಾಯಿಸುವ ಮತ್ತು ಮಾನಸಿಕ ಆರೋಗ್ಯ ಸ್ಥಿರಗೊಳಿಸುವ ಗುರಿ ಹೊಂದಿದೆ.

ತಂತ್ರಾಂಶ ಬಳಕೆಗಾಗಿ ಪ್ರತಿ ವಿದ್ಯಾರ್ಥಿಗೆ 70 ಪೈಸೆಯಷ್ಟು ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಇದರಿಂದಾಗಿ ಇದು ಎಲ್ಲರಿಗೂ ಸುಲಭವಾಗಿ ಲಭ್ಯವಾಗಲಿದೆ.  AIIMS-ದೆಹಲಿಯ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಂದ್ ಕುಮಾರ್ ಮಾತನಾಡಿ, ಈ ಅಪ್ಲಿಕೇಶನ್ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್, ಮಧ್ಯಸ್ಥಿಕೆ ಮತ್ತು ನಂತರದ ಅನುಸರಣೆ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು.

ಏಮ್ಸ್‌ ಆಸ್ಪತ್ರೆ ಜತೆಗೆ AIIMS-ಭುವನೇಶ್ವರ ಮತ್ತು ಶಹದಾರದಲ್ಲಿರುವ ಇನ್‌ಸ್ಟಿಟ್ಯೂಟ್‌ ಆಫ್‌ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸಸ್ (IHBAS) ನಲ್ಲಿ ತಂತ್ರಾಂಶದ ಬಳಕೆ ಆರಂಭಿಸಲಾಗಿದೆ. 

ನೆವರ್ ಅಲೋನ್

ನೆವರ್ ಅಲೋನ್ ಎಂಬುದು ವೆಬ್ ಆಧಾರಿತ, ಹೆಚ್ಚು ಸುರಕ್ಷಿತವಾದ ಅಪ್ಲಿಕೇಶನ್. ಇದನ್ನು WhatsApp ಮೂಲಕ ದಿನದ 24ಗಂಟೆಗಳ ಕಾಲ ಪ್ರವೇಶಿಸಬಹುದು ಎಂದು ಡಾ. ಕುಮಾರ್ ಹೇಳಿದರು. ವಿದ್ಯಾರ್ಥಿಗಳು ಈ ತಂತ್ರಾಂಶದ ಮೂಲಕ ಮಾನಸಿಕ ಆರೋಗ್ಯ ಮತ್ತು ಕ್ಷೇಮ ತಜ್ಞರ ಸಮಾಲೋಚನೆಗಳಿಗೆ ವರ್ಚುವಲ್ ಮತ್ತು ಆಫ್‌ಲೈನ್ ಪ್ರವೇಶ ಹೊಂದಿರುತ್ತಾರೆ ಎಂದು ಹೇಳಿದರು.

ಜಾಹೀರಾತು

ನೆವರ್ ಅಲೋನ್ ಅಪ್ಲಿಕೇಶನ್‌ನಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಸ್ಕ್ರೀನಿಂಗ್ ಹೆಚ್ಚು ಸುರಕ್ಷಿತ. ಪ್ರತಿ ವಿದ್ಯಾರ್ಥಿಗೆ ದಿನಕ್ಕೆ 70 ಪೈಸೆ ಮಾತ್ರ ವೆಚ್ಚವಾಗುತ್ತದೆ. ಅಪ್ಲಿಕೇಶನ್‌ನ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು AIIMS-ದೆಹಲಿಯನ್ನು ಸಂಪರ್ಕಿಸಬೇಕು ಎಂದು ಡಾ. ಕುಮಾರ್ ಸಲಹೆ ನೀಡಿದರು.

Tags:    

Similar News