Ram Charan : ಅಯ್ಯಪ್ಪ ವೃತದ ನಡುವೆ ದರ್ಗಾಕ್ಕೆ ತೆರಳಿ ಪ್ರಾರ್ಥಿಸಿದ ನಟ ರಾಮ್‌ ಚರಣ್‌; ಹೊಸ ವಿವಾದ ಸೃಷ್ಟಿ

ನಟ ರಾಮ್‌ಚರಣ್‌ ಅವರು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ದರ್ಗಾಕ್ಕೆ ಭೇಟಿ ನೀಡಿದ್ದರು. ಅಲ್ಲಿ ಆಯೋಜಿಸಲಾಗಿದ್ದ 80ನೇ ವರ್ಷದ ರಾಷ್ಟ್ರೀಯ ಮುಶೈರಾ ಘಜಲ್‌ ಕಾರ್ಯಕ್ರಮದ ಮುಖ್ಯ ಅತಿಥಿ ಅವರಾಗಿದ್ದರು.;

Update: 2024-11-21 10:37 GMT
Actor Ram Charan visits dargah to offer prayers while on Ayyappa vrata

ಶಬರಿಮಲೇ ಅಯ್ಯಪ್ಪ ಸ್ವಾಮಿ ವೃತ ಕೈಗೊಂಡು ಮಾಲೆ ಧರಿಸಿರುವ ತೆಲುಗು ನಟ ರಾಮ್‌ಚರಣ್‌, ದರ್ಗಾವೊಂದಕ್ಕೆ ತೆರಳಿ ಪ್ರಾರ್ಥನೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಅಯ್ಯಪ್ಪ ವೃತಧಾರಿಗಳು ಗೋರಿಗಳಿಗೆ ಪ್ರಾರ್ಥನೆ ಮಾಡುವ ಪದ್ಧತಿ ಹೊಂದಿರುವ ದರ್ಗಾಗಳಿಗೆ ಭೇಟಿ ನೀಡಬಾರದು ಎಂಬ ಅಭಿಪ್ರಾಯದ ನಡುವೆ ರಾಮ್‌ ಚರಣ್‌ ಈ ಸುಳಿಯಲ್ಲಿ ಸಿಲುಕಿದ್ದಾರೆ.

ಈ ಕಾರ್ಯಕ್ರಮವನ್ನು ಖ್ಯಾತ ಸಂಗೀತ ನಿರ್ದೇಶ ಎ. ಆರ್‌ ರೆಹಮಾನ್‌ ಆಯೋಜಸಿದ್ದರು. ಹೀಗಾಗಿ ಅವರ ವಿರುದ್ಧವೂ ಟೀಕೆಗಳು ಬಂದಿವೆ.


ನಟ ರಾಮ್‌ಚರಣ್‌ ಅವರು ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ದರ್ಗಾಕ್ಕೆ ಭೇಟಿ ನೀಡಿದ್ದರು. ಅಲ್ಲಿ ಆಯೋಜಿಸಲಾಗಿದ್ದ 80ನೇ ವರ್ಷದ ರಾಷ್ಟ್ರೀಯ ಮುಶೈರಾ ಘಜಲ್‌ ಕಾರ್ಯಕ್ರಮದ ಮುಖ್ಯ ಅತಿಥಿ ಅವರಾಗಿದ್ದರು. ಅಲ್ಲಿಗೆ ಹೋಗಿದ್ದ ಅವರು ದರ್ಗಾದ ಒಳಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನು ಕೆಲವು ಹಿಂದೂಪರ ಸಂಘಟನೆಗಳ ಗುಂಪು ವಿರೋಧಿಸಿದೆ. ಅವರು ತಕ್ಷಣ ಅಯ್ಯಪ್ಪ ವೃತ್ತವನ್ನು ನಿಲ್ಲಿಸಿ ಇಡೀ ಹಿಂದೂ ಸಮಾಜದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ರೆಹಮಾನ್‌ಗೂ ಟೀಕೆ

ರಾಮ್‌ ಚರಣ್‌ ದರ್ಗಾಕ್ಕೆ ಘಜಲ್‌ ಕಾರ್ಯಕ್ರಮಕ್ಕಾಗಿ ಭೇಟಿ ನೀಡುವ ವೇಳೆ ಸಂಗೀತ ನಿರ್ದೇಶಕ ಎ .ಆರ್‌ ರೆಹಮಾನ್‌ ಕೂಡ ಇದ್ದರು. ಹೀಗಾಗಿ ತೆಲಂಗಾಣ ಅಯ್ಯಪ್ಪ ಸ್ವಾಮಿ ಭಕ್ತರ ಸಂಘಟನೆ ಅವರ ವಿರುದ್ಧವೂ ಟೀಕೆ ವ್ಯಕ್ತಪಡಿಸಿದೆ. ಅಯ್ಯಪ್ಪ ವೃತದ ಕಠಿಣ ನಿಯಮಗಳನ್ನು ಮೀರಿ ದರ್ಗಾಕ್ಕೆ ಹೋದ ರಾಮ್‌ಚರಣ್‌ ಕ್ಷಮೆ ಕೋರಬೇಕು. ತಪ್ಪಿದರೆ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೆಲವರು ಎ. ಆರ್‌ ರೆಹಮಾನ್‌ ಅವರ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ. ರಾಮ್‌ಚರಣ್‌ ಅವರ ಜತೆ ತಿರುಪತಿ ಅಥವಾ ಶಬರಿಮಲೆಗೆ ಹೋಗಲು ಅವರು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಪತ್ನಿಯಿಂದ ಪ್ರತಿಕ್ರಿಯೆ

ರಾಮ್‌ಚರಣ್‌ ಅವರು ಈ ವಿವಾದದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಆದರೆ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ಟ್ವೀಟ್‌ ಮಾಡಿ ತಮ್ಮ ಪತ್ನಿಯ ಸರ್ವಧರ್ಮ ದೈವ ಭಕ್ತಿಯನ್ನು ಪ್ರಶಂಸಿಸಿದ್ದಾರೆ. ನಂಬಿಕೆಗಳು ಜನರನ್ನು ಒಂದು ಮಾಡುತ್ತವೆ. ಎಂದಿಗೂ ಬೇರೆ ಮಾಡುವುದಿಲ್ಲ. ಭಾರತೀಯರಾಗಿ ನಾವು ದೈವೀಕತೆಯ ಎಲ್ಲ ಮಾರ್ಗಗಳ ಮೇಲೆ ವಿಶ್ವಾಸ ಇರಿಸಿದ್ದೇವೆ. ಏಕತೆಯೇ ನಮ್ಮಶಕ್ತಿ. ರಾಮ್‌ಚರಣ್‌ ತಮ್ಮ ಧರ್ಮದಲ್ಲಿ ಶ್ರದ್ಧೆ ಹೊಂದಿರುವ ಜತೆಗೆ ಉಳಿದೆಲ್ಲ ಧರ್ಮಗಳ ಮೇಲೆ ಭಕ್ತಿ ಇಟ್ಟುಕೊಂಡಿದ್ದಾರೆ ಎಂದು ಬರೆದಕೊಂಡಿದ್ದಾರೆ.

ರಾಮ್‌ಚರಣ್‌ ಅವರ ತಂದೆ ಚಿರಂಜೀವಿ ಹಾಗೂ ಹಾಲಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಚಿಕ್ಕಪ್ಪ ಪವನ್‌ ಕಲ್ಯಾಣ್‌ ಅವರು ನಿಷ್ಠಾವಂತ ಹಿಂದೂಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಚಿಕ್ಕಪ್ಪ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಾವು ಸನಾತನ ರಕ್ಷಕ ಎಂದು ಹೇಳುತ್ತಿದ್ದಾರೆ.

Bhavani!2!240

Tags:    

Similar News