ಪೂಜಾ ಸ್ಥಳಗಳ ಯಥಾಸ್ಥಿತಿ ಕಾಪಾಡುವುದು ಸಂವಿಧಾನದ ಮೂಲ ರಚನೆಯನ್ನು ರಕ್ಷಿಸಿದಂತೆ

ಜೋಧಪುರ, ವಾರಾಣಸಿ ಮತ್ತು ಇತರ ನಗರಗಳಲ್ಲಿನ ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳ ಕುರಿತು ನ್ಯಾಯಾಲಯಗಳಲ್ಲಿರುವ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ಹುಸೇನ್ ಕಳವಳ ವ್ಯಕ್ತಪಡಿಸಿದರು.

Update: 2024-12-10 01:30 GMT
Places Of worship

ಪೂಜಾ ಸ್ಥಳಗಳ ಕಾಯ್ದೆ 1991ರ ಪ್ರಕಾರ ಪ್ರಾರ್ಥನಾ ಜಾಗವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಇರುವಂತೆ ಕಾಪಾಡಿಕೊಳ್ಳುವುದು ಸಂವಿಧಾನದ ಮೂಲ ರಚನೆಗ ನೀಡುವ ರಕ್ಷಣ ಎಂಬುದಾಗಿ ಉತ್ತರ ಪ್ರದೇಶದ ಲಕ್ನೊ ಮೂಲಕ ಸಾಮಾಜಿಕ ಕಾರ್ಯಕರ್ತ ಅಥರ್​ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಭಾರತದ ನಾನಾ ನಗರಗಳಲ್ಲಿ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಕಾರ್ಯಾಚರಣೆಯನ್ನು ಹಾಗೂ ಅದರಿಂದ ಉಂಟಾಗಿರುವ ಧಾರ್ಮಿಕ ಹಾಗೂ ರಾಜಕೀಯ ಚರ್ಚೆಯ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದ ಫೆಡರಲ್​ ಜತೆ ಮಾತನಾಡಿದ ಅವರು ಈ ಮೇಲಿನ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

Full View

ಸಂಭಲ್​ ಕೋಮು ಗಲಭೆ ನಿರ್ವಹಣೆ

ಸಂಭಾಲ್​​ನಲ್ಲಿ ಇತ್ತೀಚೆಗೆ ಐದು ಜನರ ಸಾವಿಗೆ ಕಾರಣವಾದ ಕೋಮು ಗಲಭೆಗಳನ್ನು ನಿಭಾಯಿಸಿದ ರೀತಿಗೆ ಹುಸೇನ್ ಉತ್ತರ ಪ್ರದೇಶ ಸರ್ಕಾರದ ಆಡಳಿತವನ್ನು ಟೀಕಿಸಿದರು. ವಿಚಾರಣಾ ಆಯೋಗದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಎಂದು ಹೇಳಿದ ಅವರು ಸತ್ಯ ಬಹಿರಂಗವಾಗಲಿದೆ ಹಾಗೂ ಹಿಂಸಾಚಾರಕ್ಕೆ ಕಾರಣರಾದವರು ನ್ಯಾಯವನ್ನು ಎದುರಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕಾನೂನು ಮತ್ತು ಸುವ್ಯವಸ್ಥೆಗೆ ಬಲವಾಗಿರಬೇಕು ಎಂದು ಹೇಳಿದರು.

ನ್ಯಾಯಾಲಯದಲ್ಲಿರುವ ಪ್ರಕರಣಗಳು

ಜೋಧಪುರ, ವಾರಾಣಸಿ ಮತ್ತು ಇತರ ನಗರಗಳಲ್ಲಿನ ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳ ಕುರಿತು ನ್ಯಾಯಾಲಯಗಳಲ್ಲಿರುವ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ಹುಸೇನ್ ಕಳವಳ ವ್ಯಕ್ತಪಡಿಸಿದರು. ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳ ಸ್ಥಾನಮಾನವನ್ನು ಬದಲಾಯಿಸುವುದನ್ನು ನಿಷೇಧಿಸುವ ಪೂಜಾ ಸ್ಥಳಗಳ ಕಾಯ್ದೆ 1991 ಗೌರವಿಸುವುದು ಅಗತ್ಯ ಎಂದು ಹೇಳಿದರು. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸುಪ್ರೀಂ ಕೋರ್ಟ್​ನ ಪಾತ್ರವನ್ನು ಅವರು ವಿವರಿಸಿದರು. 2019 ರ ಅಯೋಧ್ಯೆ ತೀರ್ಪಿನಲ್ಲಿ ಈ ಕಾಯ್ದೆಯನ್ನು ಮಹತ್ವವನ್ನು ಉಲ್ಲೇಖಿಸಿರುವುದನ್ನು ಹುಸೇನ್ ಸ್ಮರಿಸಿದರು.

ಈ ಕಾಯ್ದೆಯು ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗ. ಅದನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನ ಅಗೌರವ ಎನಿಸಿಕೊಳ್ಳಲಿದೆ ಎಂದು ಹುಸೇನ್ ಹೇಳಿದರು. ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 12 ರಂದು ನಡೆಸಲಿದೆ ಎಂಬುದನ್ನು ಅವರು ಹೇಳಿದರು. ನ್ಯಾಯಾಲಯದ ನಿರ್ಧಾರವು ಈ ವಿಚಾರದಲ್ಲಿ ಸ್ಪಷ್ಟತೆ ತರುತ್ತದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ

ಸರ್ಕಾರದ ಪಾತ್ರವೇನು?

ಪೂಜಾ ಸ್ಥಳಗಳ ಕಾಯ್ದೆಯನ್ನು ಜಾರಿಗೊಳಿಸುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲಿದೆ ಎಂದು ಹುಸೇನ್ ಹೇಳಿದ್ದಾರೆ. ಅನಗತ್ಯ ಕಾನೂನು ಪ್ರಕ್ರಿಯೆಗಳನ್ನು ತಡೆಗಟ್ಟಲು ಕಾಯ್ದೆಯ ನಿಬಂಧನೆಗಳನ್ನು ನ್ಯಾಯಾಲಯಗಳಿಗೆ ನೆನಪಿಸುವಂತೆ ಅವರು ಮನವಿ ಮಾಡಿದ್ದಾರೆ. ನಂಬಿಕೆ ಮತ್ತು ಸ್ಥಿರತೆ ಬೆಳೆಸಲು ಸಾಂವಿಧಾನಿಕ ತತ್ವಗಳಿಗೆ ಬದ್ಧವಾಗಿರಬೇಕು ಎಂದು ಅವರು ಹೇಳಿದರು.

ಸಾಮುದಾಯಿಕ ನಾಯಕತ್ವ

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಂತಹ ಸಂಘಟನೆಗಳು ಇಡೀ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುತ್ತವೆ ಎಂಬ ಕಲ್ಪನೆಯನ್ನು ಹುಸೇನ್ ಪ್ರಶ್ನಿಸಿದ್ದಾರೆ. , 20 ಕೋಟಿ ಮುಸ್ಲಿಮರ ಜೀವn ವೈವಿಧ್ಯತೆಯನ್ನು ಎತ್ತಿ ಸ್ಮರಿಸಿಕೊಂಡು. ಸಮಸ್ಯೆ ಪರಿಹರಿಸಲು ಎಲ್ಲರ ಸಮಾನ ಸಹಭಾಗಿತ್ವನ್ನು ಖಚಿತಪಡಿಸಿಕೊಳ್ಳಲು ವರಾಜಕೀಯ ನಾಯಕರು ಮತ್ತು ಸಮುದಾಯದ ಸದಸ್ಯರ ನಡುವಿನ ಹೊಂದಾಣಿಕೆ ಅಗತ್ಯ ಎಂದು ಹೇಳಿದ್ದಾರೆ.

ಸಂವಿಧಾನದ ಪಾಲನೆಗೆ ಮನವಿ

ಮುಸ್ಲಿಂ ಸಮುದಾಯಕ್ಕೆ ಅಭಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾಹಿ ಇಮಾಮ್ ಅಹ್ಮದ್ ಬುಖಾರಿ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಹುಸೇನ್, ಇದು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುವ ಸಕಾರಾತ್ಮಕ ಹೆಜ್ಜೆ ಎಂದು ಹೇಳಿದರು. "ಎಲ್ಲಾ ಸಮುದಾಯಗಳೊಂದಿಗೆ ಪ್ರಧಾನಿಯವರ ಬಾಂಧವ್ಯವು ಸಾಂವಿಧಾನಿಕ ಚೌಕಟ್ಟನ್ನು ಬಲಪಡಿಸುತ್ತದೆ ಮತ್ತು ಏಕತೆ ಬೆಳೆಸುತ್ತದೆ" ಎಂದು ಹೇಳಿದ್ದಾರೆ.

ಧಾರ್ಮಿಕ ಸ್ಥಳಗಳ ಬಗ್ಗೆ ಅನಗತ್ಯ ವಿವಾದಗಳನ್ನು ಮಾಡದಂತೆ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಕರೆಯನ್ನು ಹುಸೇನ್​ ಸ್ವಾಗತಿಸಿದರು. ವ್ಯಕ್ತಿಗಳು ಮತ್ತು ಕಿಡಿಗೇಡಿಗಳ ಗುಂಪುಗಳು ಕಾನೂನು ಮೀರಿ ನಡೆದುಕೊಳ್ಳುತ್ತವೆ. ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತವೆ ಎಂದೂ ಅವರು ಹೇಳಿದರು.

ಭವಿಷ್ಯದ ಭರವಸೆ

ವಿವಾದಗಳನ್ನು ಪರಿಹರಿಸುವಲ್ಲಿ ಸಾಂವಿಧಾನಿಕ ರಕ್ಷಣೆಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಮಹತ್ವವನ್ನು ಹುಸೇನ್ ಪುನರುಚ್ಚರಿಸಿದರು. ನ್ಯಾಯ, ಶಾಂತಿ ಮತ್ತು ಕಾನೂನಿನ ನಿಯಮವನ್ನು ಖಚಿತಪಡಿಸಿಕೊಳ್ಳಲು ಸಾಂವಿಧಾನಿಕ ಚೌಕಟ್ಟಿನೊಳಗೆ ಕೆಲಸ ಮಾಡಲು ಅವರು ಮನವಿ ಮಾಡಿದ್ದಾರೆ.

ಹುಸೇನ್ ಅವರೊಂದಿಗಿನ ಈ ಸಂದರ್ಶನ ಭಾರತದಲ್ಲಿನ ಕೋಮು ಉದ್ವಿಗ್ನತೆ ಮತ್ತು ಪೂಜಾ ಸ್ಥಳಗಳ ಕಾನೂನು ವಿವಾದಗಳ ಮೇಲೆ ಬೆಳಕು ಚೆಲ್ಲುತ್ತದೆ. ಪೂಜಾ ಸ್ಥಳಗಳ ಕಾಯ್ದೆಯ ಬಗ್ಗೆ ಮುಂಬರುವ ಸುಪ್ರೀಂ ಕೋರ್ಟ್ ವಿಚಾರಣೆಗಳು ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.

Tags:    

Similar News