ಮಣಿಪುರದಲ್ಲಿ 10 ನಕ್ಸಲರನ್ನು ಹತ್ಯೆ ಮಾಡಿದ ಅಸ್ಸಾಂ ರೈಫಲ್ಸ್
ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರವಾಗಿ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೈನ್ಯ ಮಾಹಿತಿ ನೀಡಿದೆ.;
ಮಣಿಪುರದ ಚಂದೇಲ್ ಜಿಲ್ಲೆಯ ಗಡಿ ಭಾಗದಲ್ಲಿ ಅಸ್ಸಾಂ ರೈಫಲ್ಸ್ ಸತತವಾಗಿ ಕಾರ್ಯಾಚರಣೆ ನಡೆಸಿ. ಕನಿಷ್ಠ 10 ಉಗ್ರರನ್ನು ಹತ್ಯೆ ಮಾಡಿದೆ. ಭಾರತ-ಮ್ಯಾನ್ಮಾರ್ ಗಡಿಯ ಸಮೀಪದ ಖೆಂಗ್‌ಜಾಯ್ ತೆಹಸಿಲ್‌ನ ನ್ಯೂ ಸಾಮ್ಟಲ್ ಗ್ರಾಮದ ಬಳಿ ಶಸ್ತ್ರಸಜ್ಜಿತ ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದು ಈ ದಾಳಿ ನಡೆಸಿದೆ.
ಮೇ 14ರಂದು ನಡೆದ ಈ ಕಾರ್ಯಾಚರಣೆಯನ್ನು ಸ್ಪಿಯರ್ ಕಾರ್ಪ್ಸ್‌ನ ಅಸ್ಸಾಂ ರೈಫಲ್ಸ್ ಘಟಕವು ನಡೆಸಿದೆ. ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೋಧ ಕಾರ್ಯ ನಡೆಯುತ್ತಿದ್ದಾಗ, ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ತಕ್ಷಣವೇ ಯೋಧರು ಪ್ರತಿದಾಳಿ ನಡೆಸಿದರು. ಈ ಗುಂಡಿನ ಕಾಳಗದಲ್ಲಿ 10 ಉಗ್ರರು ನೆಲಕ್ಕುರುಳಿದ್ದಾರೆ. ಅಲ್ಲದೆ, ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆಯ ಈಸ್ಟರ್ನ್ ಕಮಾಂಡ್ ತಿಳಿಸಿದೆ. ಸದ್ಯಕ್ಕೆ ಆ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.