ಲೋಕಸಭೆ ಚುನಾವಣೆ: ತೆಲಂಗಾಣ ಅಥವಾ ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ?
ಕೇರಳದಲ್ಲಿ ಎಲ್‌ಡಿಎಫ್ ರಾಹುಲ್ ಕೇರಳದಿಂದ ಸ್ಪರ್ಧಿಸದಿರಲು ಬಯಸುವುದಾಗಿ ಸ್ಪಷ್ಟಪಡಿಸಿದೆ ಮತ್ತು ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲೇ ವಯನಾಡಿನಿಂದ ಪ್ರಬಲ ಅಭ್ಯರ್ಥಿಯನ್ನು ಘೋಷಿಸಿದೆ.;
ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕೇರಳದ ಸಿಪಿಐ( Communist Party of India) ವಯನಾಡ್ ಕ್ಷೇತ್ರದಿಂದ ಹಿರಿಯ ನಾಯಕ ಅನ್ನಿ ರಾಜಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
2019 ರಲ್ಲಿ ಈ ಕ್ಷೇತ್ರದಿಂದ ರಾಹುಲ್ ಗಾಧಿ ಗೆದ್ದಿದ್ದರು. ಈ ಬಾರಿ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಹೊರತುಪಡಿಸಿ ತೆಲಂಗಾಣ ಅಥವಾ ಕರ್ನಾಟಕ 'ಸುರಕ್ಷಿತ' ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹವಿದೆ.
ರಾಹುಲ್ ಗಾಂಧಿ ಕೇರಳದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಾರದು ಎಂದು ಕೇರಳದ ಎಲ್‌ಡಿಎಫ್ ಸ್ಪಷ್ಟಪಡಿಸಿದೆ. ಆದ್ದರಿಂದ ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲೇ ವಯನಾಡಿನಿಂದ ಪ್ರಬಲ ಅಭ್ಯರ್ಥಿಯನ್ನು ನೇಮಿಸಿದೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನಿ ರಾಜಾ ಅವರು ಸಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮತ್ತು ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸುವುದನ್ನು ಎಡಪಕ್ಷಗಳು ಬಯಸದಿರುವುದಕ್ಕೆ ಎರಡು ಕಾರಣಗಳಿವೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ವಯನಾಡ್‌ನಿಂದ ರಾಹುಲ್ ಅವರ ಉಮೇದುವಾರಿಕೆಯು ಕೇರಳದ ಫಲಿತಾಂಶಗಳ ಮೇಲೆ ಗಮನಾರ್ಹ ಪರಿಣಾಮ ಬೀರಿತು. ರಾಜ್ಯದ 20 ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ UDF ( United Democratic Front) ಗೆದ್ದುಕೊಂಡಿತು ಇದು ಮೊದಲ ಕಾರಣವಾದರೆ, ಎರಡನೆಯದಾಗಿ 2019ರಲ್ಲಿ ಉತ್ತರ ಭಾರತದಲ್ಲಿ ರಾಹುಲ್ ಗಾಧಿ ಸ್ಪರ್ಧಿಸದಿರಲು ಓಡಿಹೋಗುತ್ತಿದ್ದಾರೆ ಎಂದು ಬಿಂಬಿಸಲು ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡಿತ್ತು ಎಂಬುದು ಎಡಪಕ್ಷಗಳ ವಾದ.
ಕಳೆದ ವರ್ಷ ತೆಲಂಗಾಣ ಮತ್ತು ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿತ್ತು. ಹಾಗಾಗಿ ರಾಹುಲ್ ಗಾಂಧಿ ಅಲ್ಲಿನ ಕ್ಷೇತ್ರದಿಂದ ಸುಲಭವಾಗಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಹೊಂದಿದ್ದಾರೆ. ತೆಲಂಗಾಣದಲ್ಲಿ ಖಮ್ಮಂ ಮತ್ತು ಭುವನಗಿರಿ ಎರಡು ಕ್ಷೇತ್ರಗಳನ್ನು ರಾಹುಲ್‌ಗೆ ನೀಡಲಾಗುತ್ತಿದೆ. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿವೆ.
ತೆಲಂಗಾಣದ ಕಾಂಗ್ರೆಸ್ ನಾಯಕರು 2019 ರಲ್ಲಿ ಕೇರಳದಂತೆಯೇ ರಾಜ್ಯದಿಂದ ಸ್ಪರ್ಧಿಸುವ ಪರಿಣಾಮವನ್ನು ಬೀರಬಹುದು ಮತ್ತು 2019 ರಲ್ಲಿ ಗೆದ್ದ ಮೂರು ಸ್ಥಾನಗಳಿಂದ (ತೆಲಂಗಾಣದಲ್ಲಿ ಒಟ್ಟು 17 ಸ್ಥಾನಗಳಲ್ಲಿ) ಪಕ್ಷವು ತನ್ನ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ತೆಲಂಗಾಣದ ಕಾಂಗ್ರೆಸ್ ನಾಯಕರು ಭರವಸೆ ಹೊಂದಿದ್ದಾರೆ.
ತೆಲಂಗಾಣದ ಕಾಂಗ್ರೆಸ್ ಘಟಕವು ಹೊಸದಿಲ್ಲಿಯಲ್ಲಿರುವ ಪಕ್ಷದ ಕೇಂದ್ರ ನಾಯಕತ್ವಕ್ಕೆ ತಮ್ಮ ಪ್ರಸ್ತಾಪವನ್ನು ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಅನಾರೋಗ್ಯದ ಕಾರಣ ಚುನಾವಣಾ ರಾಜಕೀಯದಿಂದ ದೂರವಿರಲು ನಿರ್ಧರಿಸಿದ ಸೋನಿಯಾ ಗಾಂಧಿ ತೆಲಂಗಾಣದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಈ ಹಿಂದೆ ರಾಜ್ಯದ ನಾಯಕರು ವಿನಂತಿಸಿದ್ದರು. ಆದರೆ ಅವರು ರಾಜಸ್ಥಾನದಿಂದ ಸ್ಪರ್ಧಿಸಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.