ಫಲಿತಾಂಶಕ್ಕಿಂತ ಪ್ರಚಾರವೇ ಹೆಚ್ಚು; 'ಮೇಕ್ ಇನ್ ಇಂಡಿಯಾ' ವಿರುದ್ಧ ಖರ್ಗೆ ಟೀಕೆ
ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಪ್ರಕಟಿಸಿರುವ ಅವರು ಕೇಂದ್ರ ಸರ್ಕಾರವು ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಸಾಧಿಸಿದೆ ಎಂದು ಆರೋಪಿಸಿದ್ದಾರೆ.;
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಮೋದಿ ಸರ್ಕಾರದ 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಗುರಿಯಾಗಿಸಿ ಟೀಕೆ ಮಾಡಿದ್ದು, ಬಿಜೆಪಿಯ ಭರವಸೆಯಂತೆ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಭರವಸೆ ಈಡೇರಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್ ಪ್ರಕಟಿಸಿರುವ ಅವರು ಕೇಂದ್ರ ಸರ್ಕಾರವು ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಸಾಧಿಸಿದೆ ಎಂದು ಆರೋಪಿಸಿದ್ದಾರೆ.
"ಮೋದಿ ಸರ್ಕಾರದ 'ಮೇಕ್ ಇನ್ ಇಂಡಿಯಾ' ಎನ್ನುವುದು ಪ್ರಚಾರಕ್ಕೆ ಮಹತ್ವ ಯೋಜನೆ. ಫಲಿತಾಂಶಕ್ಕೆ ಒತ್ತು ಕೊಡದಿರುವುದಕ್ಕೆ ಇದು ಉತ್ತಮ ಉದಾಹರಣೆ. 2014ರ ಚುನಾವಣಾ ಪ್ರಣಾಳಿಕೆಯಲ್ಲಿ, ಬಿಜೆಪಿ ಭಾರತವನ್ನು 'ಜಾಗತಿಕ ಉತ್ಪಾದನಾ ಕೇಂದ್ರ'ವನ್ನಾಗಿ ಮಾಡಲು 10 ಭರವಸೆಗಳನ್ನು ನೀಡಿತ್ತು. ಅದರಲ್ಲಿ ಒಂದೂ ಈಡೇರಿಲ್ಲ," ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರು ಕೆಟ್ಟ ಪರಿಸ್ಥಿತಿ ಎಂದು ಹೇಳಿದರಲ್ಲದೆ, ಉತ್ಪಾದನಾ ಕ್ಷೇತ್ರ ಹಾಗೂ ಉದ್ಯೋಗದಲ್ಲಿ ಹಿನ್ನಡೆಯಾಗಿದ್ದು, ಜಿಡಿಪಿ ಕುಸಿತ ಕಂಡಿದೆ ಎಂದು ಅವರು ಹೇಳಿದ್ದಾರೆ.
"ಸರ್ಕಾರದ ಕಂಪನಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸಣ್ಣ ಕೈಗಾರಿಕೆಗಳು ತೊಂದರೆ ಅನುಭವಿಸುತ್ತಿವೆ. ಭಾರತೀಯ ಉದ್ಯಮಿಗಳು ವಿದೇಶಕ್ಕೆ ತೆರಳಿ ಅಲ್ಲಿ ಕಂಪನಿಗಳನ್ನು ಸ್ಥಾಪಿಸುತ್ತಿದ್ದಾರೆ. ರಫ್ತು ಕ್ಷೇತ್ರವೂ ಕುಸಿತ ಕಂಡಿದೆ ಎಂದು ಅವರು ಆರೋಪಿಸಿದರು.
"ಮೋದಿ ಸರ್ಕಾರವು 1.97 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಹುಪ್ರಚಾರಿತ ಪಿಎಲ್‌ಐ ಯೋಜನೆಯ ಮೊದಲ ಹಂತವನ್ನು ಮುಗಿಸಿದೆಯೇ? 14 ಗುರುತಿಸಲಾದ ಕ್ಷೇತ್ರಗಳಲ್ಲಿ 12 ಕ್ಷೇತ್ರಗಳು ಆರಂಭವಾಗದೆ ಉಳಿದಿವೆಯೇ? ಮೋದಿ ಸರ್ಕಾರದ ಅಡಿಯಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಸರಕುಗಳ ಪಾಲು ಕನಿಷ್ಠ 50 ವರ್ಷಗಳಲ್ಲಿ ತನ್ನ ಕೆಳಮಟ್ಟಕ್ಕೆ ಏಕೆ ಕುಸಿದಿದೆ? ಎಂದು ಪ್ರಶ್ನಿಸಿದ್ದಾರೆ.
ಖರ್ಗೆ ಅವರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ದಾಳಿ ಮಾಡಿದ್ದಾರೆ. ಮೋದಿ ಸರ್ಕಾರವು ಅಕ್ಟೋಬರ್ 2024ರವರೆಗೆ ಉತ್ಪಾದನಾ ಪ್ರೋತ್ಸಾಹಕಗಳಿಗೆ ಮೀಸಲಿಟ್ಟ ನಿಧಿಯಲ್ಲಿ 8 ಪ್ರತಿಶತಕ್ಕಿಂತ ಕಡಿಮೆ ಬಳಸಿದೆ ಎಂಬುದನ್ನು ಅವರು ಬೊಟ್ಟು ಮಾಡಿ ತೋರಿಸಿದರು. ಆ ವರದಿಯಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಸರಕುಗಳ ಪಾಲು ಕನಿಷ್ಠ 50 ವರ್ಷಗಳಲ್ಲಿ ತನ್ನ ಕೆಳಮಟ್ಟಕ್ಕೆ ಕುಸಿದಿದೆ ಎಂದು ಹೇಳಿವೆ.