ಎನ್‌ಸಿಪಿ ಶರದ್‌ ಪವಾರ್‌ ಬಣಕ್ಕೆ ಹೊಸ ಹೆಸರು ನೀಡಿದ ಚುನಾವಣಾ ಆಯೋಗ

ಶರದ್ ಪವಾರ್ ನೇತೃತ್ವದ ಗುಂಪಿಗೆ ಚುನಾವಣಾ ಆಯೋಗವು ಬುಧವಾರ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್' ಎಂಬ ಹೆಸರನ್ನು ನಿಗದಿಪಡಿಸಿದೆ.

Update: 2024-02-08 07:15 GMT
ಶರದ್‌ ಪವಾರ್‌ ನೇತೃತ್ವದ ಎನ್‌ ಸಿಪಿ ಬಣಕ್ಕೆ ಇದೀಗ ಹೊಸ ಹೆಸರು ನೀಡಿದ ಚುನಾವಣಾ ಆಯೋಗ

ನವದೆಹಲಿ, ಫೆ 7 (ಪಿಟಿಐ): ಶರದ್ ಪವಾರ್ ನೇತೃತ್ವದ ಎನ್‌ ಸಿಪಿ ಬಣಕ್ಕೆ ಚುನಾವಣಾ ಆಯೋಗವು ಬುಧವಾರ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ಚಂದ್ರ ಪವಾರ್' ಎಂಬ ಹೊಸ ಹೆಸರನ್ನು ನೀಡಿದೆ.

ಕಳೆದ ವರ್ಷ ಜುಲೈನಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಬಹುಪಾಲು ಎನ್‌ಸಿಪಿ ಶಾಸಕರೊಂದಿಗೆ ಹೊರನಡೆದಿದ್ದ ಅಜಿತ್ ಪವಾರ್ ನೇತೃತ್ವದ ಗುಂಪಿಗೆ ʼನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿʼ ಎಂಬ ಮೂಲ ಹೆಸರು ಮತ್ತು ʼಗಡಿಯಾರʼ ಚುನಾವಣಾ ಚಿಹ್ನೆಯನ್ನು ನೀಡಿದ ಒಂದು ದಿನದ ಬಳಿಕ ಚುನಾವಣಾ ಪ್ರಾಧಿಕಾರದ ಈ ಆದೇಶ ಬಂದಿದೆ.

ಮಹಾರಾಷ್ಟ್ರದಲ್ಲಿ ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಹೆಸರುಗಳನ್ನು ನೀಡುವಂತೆ ಚುನಾವಣಾ ಆಯೋಗವು ಶರದ್ ಪವಾರ್ ಗುಂಪಿಗೆ ಸೂಚಿಸಿತ್ತು.

ಅದರಂತೆ, ಶರದ್ ಪವಾರ್ ಬಣವು, ʼನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ- ಶರದ್‌ಚಂದ್ರ ಪವಾರ್ʼ, ʼನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್‌ರಾವ್ ಪವಾರ್ʼ ಮತ್ತು ʼನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ ಪವಾರ್ʼ ಎಂಬ ಮೂರು ಹೆಸರನ್ನು ಆಯೋಗಕ್ಕೆ ನೀಡಿತ್ತು. ‘ಆಲದ ಮರ’ವನ್ನು ತನ್ನ ಚುನಾವಣಾ ಚಿಹ್ನೆಯನ್ನಾಗಿಯೂ ಶರದ್‌ ಪವಾರ್‌ ಬಣ ಕೋರಿತ್ತು.

"ನಿಮ್ಮ ಮೊದಲ ಆದ್ಯತೆಗೆ ಒಪ್ಪಿಕೊಳ್ಳಲಾಗಿದೆ, ಅಂದರೆ 'ರಾಷ್ಟ್ರೀಯ ಕಾಂಗ್ರೆಸ್ ಪಕ್ಷ -ಶರದ್‌ಚಂದ್ರ ಪವಾರ್' ಅನ್ನು ನಿಮ್ಮ ಬಣದ ಹೆಸರಾಗಿ ಮಹಾರಾಷ್ಟ್ರ ರಾಜ್ಯಸಭೆಯ 6 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಉದ್ದೇಶಗಳಿಗೆ ಬಳಸಿಕೊಳ್ಳಲು ಆಯ್ಕೆಯಾಗಿದೆ" ಎಂದು ಆಯೋಗವು ತಿಳಿಸಿದೆ. 

Tags:    

Similar News