ಏನಿಲ್ಲ ಏನಿಲ್ಲ...: ಕವನವನ್ನೇ ರಚಿಸಿ ಬಿಜೆಪಿಗೆ ತಿರುಗೇಟು ಕೊಟ್ಟ ಕಾಂಗ್ರೆಸ್

ಕರ್ನಾಟಕದ ಯಜಮಾನರು ನೀವಲ್ಲ ಎಂದು ಕಾಂಗ್ರೆಸ್‌ ಕವನವನ್ನೇ ರಚಿಸಿದೆ. ಈ ಕವನದಲ್ಲಿ ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ ಹಾಗೂ ಕನ್ನಡಿಗರ ಮೇಲೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ;

Update: 2024-02-17 08:07 GMT

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿರುವ ಏನಿಲ್ಲ.. ಏನಿಲ್ಲ ಕರಿಮಣಿ ಮಾಲೀಕ ನೀನಲ್ಲ ಎನ್ನುವ ಹಾಡು ಇದೀಗ ರಾಜಕೀಯ ವಲಯಕ್ಕೂ ಕಾಲಿಟ್ಟಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ ಬಳಿಕ ಬಿಜೆಪಿ ನಾಯಕರು ʼಏನಿಲ್ಲ ಏನಿಲ್ಲ ಸಿದ್ರಾಮಣ್ಣನ ಬಜೆಟ್ ನಲ್ಲಿ ಏನಿಲ್ಲʼ ಎಂದು ಘೋಷಣೆ ಕೂಗಿದ್ದರು. ಈದೀಗ ಕಾಂಗ್ರೆಸ್ ನವರು ʼಏನಿಲ್ಲ ಏನಿಲ್ಲ ಕರ್ನಾಟಕದ ಯಜಮಾನರು ನೀವಲ್ಲʼ ಎಂದು ಕವನವನ್ನೇ ಬರೆದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶುಕ್ರವಾರ ಬಜೆಟ್ ಮಂಡನೆ ಬಳಿಕ ಪ್ಲಕಾರ್ಡ್ ಹಿಡಿದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಬಜೆಟ್ನಲ್ಲಿ ಏನಿಲ್ಲ.. ಏನಿಲ್ಲ ಎಂದು ಹೇಳುತ್ತಾ ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ನಡೆಸಿದ್ದರು. ಇದೀಗ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ತಿರುಗೇಟು ನೀಡುವ ಮೂಲಕ ಕರ್ನಾಟಕದ ಯಜಮಾನರು ನೀವಲ್ಲ ಎಂದು ಹೇಳಿದೆ.

ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಏನಿಲ್ಲ ಏನಿಲ್ಲ ಎಂದು ಪದ್ಯ ಬರೆದು ಪೋಸ್ಟ್ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ. ಕರ್ನಾಟಕದ ಯಜಮಾನರು ನೀವಲ್ಲ ಎಂದು ಕಾಂಗ್ರೆಸ್‌ ಕವನವನ್ನೇ ರಚಿಸಿದೆ. ಈ ಕವನದಲ್ಲಿ ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ ಹಾಗೂ ಕನ್ನಡಿಗರ ಮೇಲೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಕವನವನ್ನೇ ರಚಿಸಿದ ಕಾಂಗ್ರೆಸ್

ಏನಿಲ್ಲ ಏನಿಲ್ಲ...

ಬಿಜೆಪಿಯವರ ಮೆದುಳಲ್ಲಿ ಏನೂ ಇಲ್ಲ,

ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ,

ಅರ್ಥ ವ್ಯವಸ್ಥೆಯ ಬಗ್ಗೆ ತಿಳಿದೇ ಇಲ್ಲ,

ಕನ್ನಡಿಗರ ಮೇಲೆ ಕಾಳಜಿ ಇಲ್ಲ,

ಶಾಂತಿ ಸಹಬಾಳ್ವೆ ಸಹಿಸೋದಿಲ್ಲ,

ಏನಿಲ್ಲ ಏನಿಲ್ಲ...

ಬಿಜೆಪಿಗರ ಬುರುಡೆಯಲ್ಲಿ ಏನೂ ಇಲ್ಲ,

ಅವರು ಹೇಳುವುದೆಲ್ಲ ನಿಜವಲ್ಲ,

ನಂಬಿಕೆಗೆ ಅರ್ಹರು ಅವರಲ್ಲ,

ಜನಪರ ಚಿಂತನೆ ಇಲ್ಲವೇ ಇಲ್ಲ,

ಜನರ ಕಷ್ಟವು ಅವರಿಗೆ ಬೇಕಿಲ್ಲ,

ಏನಿಲ್ಲ ಏನಿಲ್ಲ...

ಬಿಜೆಪಿ ಹೃದಯದಲಿ ಏನೂ ಇಲ್ಲ,

ಕರುಣೆ, ಪ್ರೀತಿಯು ತಿಳಿದಿಲ್ಲ.

ಮಾನವೀಯತೆಯಂತೂ ಇಲ್ಲವೇ ಇಲ್ಲ,

ಏನಿಲ್ಲ, ಏನಿಲ್ಲ...

ಕರ್ನಾಟಕದ ಯಜಮಾನರು ನೀವಲ್ಲ!

Tags:    

Similar News