ಸಂದಿಗ್ಧಕ್ಕೆ ಸಿಲುಕಿರುವ ಅನ್ವರ್ ಇಬ್ರಾಹಿಂ

ಪ್ರತಿಪಕ್ಷಗಳ ತೀವ್ರ ವಿರೋಧ, ಸಂಸತ್ತಿನಲ್ಲಿ ತೆಳು ಬಹುಮತ, ಮತ್ತು ಮಲಯನ್ ಬಹುಸಂಖ್ಯಾತರಲ್ಲಿ ಹೆಚ್ಚುತ್ತಿರುವ ಅಸಮಾಧಾನದಿಂದಾಗಿ ಪ್ರಧಾನಿ ಅನ್ವರ್ ಇಬ್ರಾಹಿಂ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

Update: 2024-02-05 06:30 GMT

ಸಂದಿಗ್ಧಕ್ಕೆ ಸಿಲುಕಿರುವ ಅನ್ವರ್ ಇಬ್ರಾಹಿಂ 

-ಸುಬೀರ್ ಭೌಮಿಕ್



ಮಲೇಷ್ಯಾದ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರು ಐವರು ಸಚಿವರನ್ನು ನೇಮಿಸುವ ಮೂಲಕ ಸಂಪುಟವನ್ನು ವಿಸ್ತರಿಸಿದ್ದಾರೆ. ಆದರೆ, 2022 ರ ವಿಜಯದ ಬಳಿಕ ನೀಡಿದ್ದ ಸುಧಾರಣೆಗಳ ಆಶ್ವಾಸನೆಗಳು ಮರೆತುಹೋಗಿವೆ. ಆಗ್ನೇಯ ಏಷ್ಯಾದ ಬಹುಭಾಷಿಕರಿರುವ ರಾಷ್ಟ್ರದಲ್ಲಿ ರಾಜಕೀಯ ಸ್ಥಿರತೆ ಬಗ್ಗೆ ಅನುಮಾನ ಗಳು ಎದ್ದಿವೆ.

ಅನ್ವರ್ ಅವರ ಸಂಫುಟ ಸೇರಿರುವವವರಲ್ಲಿ ಗೋವಿಂದ್ ಸಿಂಗ್ ದೇವ್, ಡೆಮಾಕ್ರಟಿಕ್ ಆಕ್ಷನ್ ಪಾರ್ಟಿಯ ಭಾರತೀಯ ಮೂಲದ ಕುಲಸೇಗರನ್ ಮತ್ತು ಟೆನಗಾ ನ್ಯಾಶನಲ್, ಪೆಟ್ರೋನಾಸ್ ಮತ್ತು ಶೆಲ್ ಕಂಪನಿಗಳಲ್ಲಿ ೨೫ ವರ್ಷ ಸೇವೆ ಸಲ್ಲಿಸಿ, ಆನಂತರ ಮಲೇಷ್ಯಾದ ಉದ್ಯೋಗಿಗಳ ಭವಿಷ್ಯ ನಿಧಿಯ ಸಿಇಒ ಆಗಿದ್ದ ಅಮೀರ್ ಹಮ್ಜಾ ಅಜೀಜಾನ್ ಇದ್ದಾರೆ..

ಆರ್ಥಿಕ ಸುಧಾರಣೆ:

ಸರ್ಕಾರವು ಮದನಿ ಆರ್ಥಿಕ ಚೌಕಟ್ಟು, ರಾಷ್ಟ್ರೀಯ ಇಂಧನ ಸ್ಥಿತ್ಯಂತರ ಮಾರ್ಗಸೂಚಿ, ಹೊಸ ಕೈಗಾರಿಕಾ ಯೋಜನೆ ಮತ್ತು 12 ನೇ ಯೋಜನೆಯ ಮಧ್ಯಂತರ ಅವಲೋಕನ ಸೇರಿದಂತೆ ಪ್ರಮುಖ ಆರ್ಥಿಕ ಯೋಜನೆಗಳನ್ನು ಪ್ರಾರಂಭಿಸಿದೆ. ಆದರೆ, ಭ್ರಷ್ಟಾಚಾರ ಮತ್ತು ಶಾಸಕರ ಮಾರಾಟದಂಥ ಅಕ್ರಮಗಳನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ. ವಿಶ್ಲೇಷಕರ ಪ್ರಕಾರ, ರಚನಾತ್ಮಕ ಸುಧಾರಣೆಗಳ ಸಾಧ್ಯತೆಯಿಲ್ಲ;ಏಕೆಂದರೆ, ಸಕಾರಾತ್ಮಕ ಕ್ರಿಯೆಗಳ ಮೂಲಕ ಮಲಯನ್ನರ ಆರ್ಥಿಕ ಪಾಲು ಕಡಿಮೆಮಾಡುವ ಯಾವುದೇ ಕ್ರಮ ತೆಗೆದು ಕೊಳ್ಳಲು ಅನ್ವರ್ ಸಿದ್ಧವಿಲ್ಲ.

ಇಂಥ ಸುಧಾರಣೆಗಳು ಎಲ್ಲರಿಗೂ ಆರ್ಥಿಕ ಅವಕಾಶ ಮತ್ತು ತೀವ್ರವಾಗಿ ಬಾಧಿತರಾದವರಿಗೆ ಸೀಮಿತ ಹಣಕಾಸಿನ ನೆರವು ನೀಡುತ್ತವೆ. 2024 ರ ಬಜೆಟ್ ಭಾಷಣ ಇದನ್ನು ಸಾಧಿಸಲು ಸೂಕ್ತ ಸಮಯ ಎಂದು ವಿಶ್ಲೇಷಕರು ಹೇಳುತ್ತಾರೆ.

ಅನ್ವರ್ ಅವರು ಹಲವು ಹಗರಣಗಳಲ್ಲಿ ಸಿಲುಕಿದ್ದ ಯುಎಂಎನ್ಒದ ಅಧ್ಯಕ್ಷ ಜಾಹಿದ್ ಹಮಿದಿ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಿದ ನಂತರ ಅವರ ಸುಧಾರಣಾ ಕಾರ್ಯಸೂಚಿ ದಿಕ್ಕು ತಪ್ಪಿತು. ಹಮಿದಿ ಅವರನ್ನು ಎಲ್ಲಾ ಭ್ರಷ್ಟಾಚಾರ ಆರೋಪಗಳಿಂದ ಮುಕ್ತಗೊಳಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ನಿರ್ಧಾರ ಎಲ್ಲರನ್ನು ಚಕಿತಗೊಳಿಸಿತು. ಮಲೇಷ್ಯಾದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಅಟಾರ್ನಿ ಜನರಲ್ ಒಬ್ಬರೇ ಆಗಿರುತ್ತಾರೆ. ಆದ್ದರಿಂದ, ಸರ್ಕಾರ ಈ ಎರಡನ್ಡು ಪ್ರತ್ಯೇಕಿಸುವ ಮೂಲಕ ನ್ಯಾಯಾಂಗವನ್ನು ರಾಜಕೀಯ ಹಸ್ತಕ್ಷೇಪದಿಂದ ಪ್ರತ್ಯೇಕಿಸಬೇಕಿದೆ..

ಕಾನೂನು ಮತ್ತು ಆಡಳಿತ ಸುಧಾರಣೆ ಸಚಿವರು ಸುಧಾರಣೆ ಯೋಜನೆಗಳನ್ನುಇತ್ತೀಚೆಗೆ ಘೋಷಿಸಿದ್ದು, ಅವುಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಬೇಕಿದೆ. ಆದರೆ, ಇದು ಸಮಸ್ಯಾತ್ಮಕವಾಗಿರಲಿದೆ. ಏಕೆಂದರೆ, ವಿರೋಧ ಪಕ್ಷಗಳು ಮಲಯನ್ನರ ಅಸುರಕ್ಷತೆಯನ್ನು ಹೆಚ್ಚಿಸುತ್ತಿದ್ದಾರೆ. ಎಂದು ಸಾರ್ವಜನಿಕ ಕಾರ್ಯನೀತಿಗಳ ಸ್ವತಂತ್ರ ಚಿಂತನಾ ಟ್ಯಾಂಕ್ ಮುಖ್ಯಸ್ಥ ಟ್ರಿಷಿಯಾ ಯೋ ಹೇಳುತ್ತಾರೆ.

ಜನಾಂಗೀಯ ವಿಭಾಗೀಕರಣ: ನವೆಂಬರ್ 2022 ರಲ್ಲಿ, ಪೀಪಲ್ಸ್ ಜಸ್ಟಿಸ್ ಪಾರ್ಟಿಯ ನಾಯಕ ಅನ್ವರ್ ಇಬ್ರಾಹಿಂ(75) ಪ್ರಧಾನಮಂತ್ರಿಯಾದರು. ರಾಜಕೀಯ ಪ್ರೇರಿತ ಆರೋಪಗಳಿಂದ ಎಂಟು ವರ್ಷ ಜೈಲಿನಲ್ಲಿ ಕಳೆದಿದ್ದರು. ಅವರ ಪಕ್ಷ, ಪಾರ್ಟಿ ಕೀಡಿಲಾನ್ ರಾಕ್ಯಟ್, ದೇಶದ ಬಹುಪಾಲು ಜನರನ್ನು ಪ್ರತಿನಿ ಧಿಸುತ್ತದೆ. ಆದರೆ, ಇತರ ಪಕ್ಷಗಳು ಧರ್ಮ ಮತ್ತು ಜನಾಂಗೀಯತೆಯನ್ನು ಆಧರಿಸಿವೆ.

ಸ್ವಾತಂತ್ರ್ಯಕ್ಕೆ ಮೊದಲು ದೇಶದ ರಾಜಕೀಯವು ಜನಾಂಗೀಯ ವಿಭಜನೆಗಳನ್ನು ಆಧರಿಸಿತ್ತು. ಯುನೈಟೆಡ್ ಮಲಯ್ ನ್ಯಾಷನಲ್ ಆರ್ಗನೈಸೇಶನ್ (ಯುಎಂಎನ್ಒ), ಮಲಯನ್ ಚೈನೀಸ್ ಅಸೋಸಿಯೇಷನ್ (ಎಂಸಿಎ) ಮತ್ತು ಇಂಡಿಯನ್ ಇನ್ ಮಲೇಷಿಯನ್ ಕಾಂಗ್ರೆಸ್ (ಎಂಐಸಿ) ಪಕ್ಷಗಳು ಅಧಿಕಾರವನ್ನು ಹಂಚಿಕೊಳ್ಳುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರೋಧ ಇರುವ ಸನ್ನಿವೇಶದಲ್ಲಿ ಅನ್ವರ್ ಸರ್ಕಾರದ ʻಮಲೇಷ್ಯಾ ಮದನಿ ಅಥವಾ ʻಸಿವಿಲ್ ಮಲೇಷ್ಯಾʼ ಉಪಕ್ರಮ ಸಕಾಲಿಕ ಎನ್ನಿಸಿದರೂ, ದೀರ್ಘ ಕಾಲದಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೈರಾಣಾಗಿರುವ ಮಲೇಷಿಯನ್ನರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ.

2018 ರ ಯಶಸ್ಸಿನಿಂದ ಸ್ಪೂರ್ತಿ ಪಡೆದ ಅನ್ವರ್ ಇಬ್ರಾಹಿಂ, ಸುಧಾರಣೆ ಕಾರ್ಯಸೂಚಿಯನ್ನು ಮುಂದೊತ್ತಿದರು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಪ್ರತಿಸ್ಪರ್ಧಿ ಯುನೈಟೆಡ್ ಮಲಯ್ಸ್ ನ್ಯಾಷನಲ್ ಆರ್ಗನೈಸೇಶನ್ ಜೊತೆ ಮೈತ್ರಿ ಮಾಡಿಕೊಂಡರು. ಇದು ಸುಧಾರಣೆಗಳ ಮೇಲೆ ಕಪ್ಪು ನೆರಳು ಮೂಡಿಸಿತು. 2018 ರಲ್ಲಿ ಯುಎಂಎನ್ಒ ಚುನಾವಣೆಯಲ್ಲಿ ಸೋತಿತು. ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿ ನಜೀಬ್ ರಜಾಕ್ ಅವರನ್ನು ಆಗಸ್ಟ್ 2022 ರಲ್ಲಿ ಜೈಲಿಗೆ ಕಳುಹಿಸಲಾಯಿತು. ಅವರು 12 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ಭ್ರಷ್ಟಾಚಾರ ಆರೋಪಗಳು:

1ಎಂಡಿಬಿ ಪ್ರಕರಣ ಮತ್ತು ಹೆಚ್ಚು ಜನರಿಗೆ ಗೊತ್ತಿಲ್ಲದ ಎಸ್ಸಿಆರ್ ಪ್ರಕರಣದಲ್ಲಿ ಮಲೇಷ್ಯಾದ ಉನ್ನತ ನಾಯಕರು, ಹಾಲಿವುಡ್ ತಾರೆಗಳು ಮತ್ತು ವಾಲ್ ಸ್ಟ್ರೀಟ್ ಹಣಕಾಸುದಾರರು ಪಾಲ್ಗೊಂಡಿದ್ದಾರೆ. 1ಎಂಡಿಬಿ ಪ್ರಕರಣ ಹಣಕಾಸು ಉದ್ಯಮಿ ಜೋಲೋ ಅವರ ಸುತ್ತ ಸುತ್ತುತ್ತಿದೆ. ಆನಂತರ ಸನ್ನಿವೇಶ ಬದಲಾಗಿದೆ. ಮತದಾರರು ಈಗ ಬೆರ್ಸಾಟು, ಇಸ್ಲಾಮಿಕ್ ಪಾರ್ಟಿ ಆಫ್ ಮಲೇಷಿಯಾ (ಪಿಎಎಸ್) ಮತ್ತು ಯುಎಂಎನ್ಒ ನಡುವೆ ವಿಭಜನೆಗೊಂಡಿದ್ದಾರೆ. ಪಕಟಾನ್ ಹರಪನ್ (ಪಿಎಚ್) ಮೈತ್ರಿ ಎಂದು ಕರೆಯಲ್ಪಡುವ ಅನ್ವರ್ ಇಬ್ರಾಹಿಂ ನೇತೃತ್ವದ ಒಕ್ಕೂಟವು ಬೆಂಬಲದ ಕೊರತೆಯಿಂದಾಗಿ ಸವಾಲುಗಳನ್ನು ಎದುರಿಸುತ್ತಿದೆ.

ಕಳೆದ ನವೆಂಬರ್ನಲ್ಲಿ, ಅನ್ವರ್, ಸ್ನೇಹಿತ ಅಹ್ಮದ್ ಜಾಹಿದ್ ಹಮಿದಿ ಅವರನ್ನು ಉಪಪ್ರಧಾನಿಯಾಗಿ ನೇಮಿಸಿ ದರು. ಜಾಹಿದ್ ಭ್ರಷ್ಟಾಚಾರದ 47 ಆರೋಪಗಳಲ್ಲದೆ, ಚಾರಿಟಿ ಫಂಡ್ಗಳಿಂದ 27 ದಶಲಕ್ಷ ಡಾಲರ್ ದುರುಪ ಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದರು. ಆನಂತರ ಜಾಹಿದ್ ಎಲ್ಲಾ ಆರೋಪಗಳಿಂದ ಖುಲಾಸೆ ಗೊಂಡರು.

ಅನಿಶ್ಚಿತ ಸ್ಥಾನ:

ಅನ್ವರ್ ನಿರಂತರ ತೊಂದರೆಗಳಿಂದಾಗಿ ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಇದರಿಂದ ಸುಧಾರಣೆಗಳು ಹಿಂದೆ ಸರಿದಿವೆ. ಯುಎಂಎನ್ಒ ಮತ್ತು ಆಕ್ರಮಣಶೀಲ ವಿರೋಧ ಪಕ್ಷ, ಸಂಸತ್ತಿನಲ್ಲಿ ಕ್ಷೀಣ ಬಹುಮತ ಮತ್ತು ಬಹುಸಂಖ್ಯಾತ ಮಲಯನ್ನರಲ್ಲಿ ಅಸಮಾಧಾನ ಹೆಚ್ಚಳದಿಂದ, ಅನ್ವರ್ ಏಣಿ ಮೇಲೆ ನಡಿಗೆ ಮಾಡಬೇಕಾಗಿ ಬಂದಿದೆ. ಜನಪ್ರಿಯತೆ ಗಳಿಸಲು ಅವರು ನಡೆಸುತ್ತಿರುವ ಪ್ರಯತ್ನಗಳು ಪಕ್ಷದಲ್ಲೇ ಟೀಕೆಗೆ ಗುರಿಯಾಗಿವೆ.

ಮಲೇಷ್ಯಾದಲ್ಲಿ ಚುನಾವಣೆ ಉಸ್ತುವಾರಿ ಸಂಸ್ಥೆ ಬೆರ್ಸಿ ಮತ್ತು ಇನ್ ಸ್ಟಿಟ್ಯೂಟ್ ಫಾರ್ ಡೆಮಾಕ್ರಸಿ ಆಂಡ್ ಎಕನಾಮಿಕ್ ಅಫೇರ್ಸ್ ನಡೆಸಿದ ತನಿಖೆ ಪ್ರಕಾರ, ಅನ್ವರ್ ಅವರ ರಾಜಕೀಯ ನೇಮಕಗಳು ಚುನಾವಣೆಗೆ ಹಣಕಾಸು ನೆರವು ನೀಡಿದವರ ಪರವಾಗಿವೆ. ಎಲ್ಜಿಬಿಟಿಕ್ಯು+ ಸಮುದಾಯದ ಹಕ್ಕುಗಳ ಕುರಿತ ಅವರ ತದ್ವಿರುದ್ಧ ನಿಲುವುಗಳು ಮಾನವ ಹಕ್ಕು ಸಂಘಟನೆಗಳಿಂದ ಟೀಕೆಗೊಳಗಾಗಿವೆ.

(ಲೇಖನದಲ್ಲಿರುವ ಅಭಿಪ್ರಾಯ, ಆಲೋಚನೆ ಅಥವಾ ಅಭಿಪ್ರಾಯಗಳು ಲೇಖಕರವು. ಅವು ಫೆಡರಲ್ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ).

ಫೋಟೋ: ವಿಕಿಕಾಮನ್ಸ್

ಚಿತ್ರ: ವಿಕಿಮೀಡಿಯಾ ಕಾಮನ್ಸ್…………………………

Similar News