ಲಂಕಾ ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಭಾರತ ಭೇಟಿಯನ್ನು ಜಗತ್ತು ಏಕೆ ಕೌತುಕದಿಂದ ನೋಡುತ್ತಿದೆ?
ದಿಸ್ಸಾನಾಯಕೆ ಭೇಟಿಯಲ್ಲಿ ಸಿದ್ದಾಂತಕ್ಕಿಂತ ಮಿಗಿಲಾಗಿ ಲಂಕಾ ನಾಯಕರ ರಾಜಕೀಯ ಗೆಲುವಿನ ಅಭೀಕ್ಷೆಯಿದೆ ಎಂಬುದು ನಿಶ್ಚಿತ. ಕಳೆದ 10 ತಿಂಗಳಲ್ಲಿ ಲಂಕಾ ನಾಯಕ ಎರಡನೇ ಸಲ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ;
ಶ್ರೀಲಂಕಾದ ಹೊಸ ಅಧ್ಯಕ್ಷರಾಗಿ ಅನುರಾ ದಿಸ್ಸಾನಾಯಕೆ ಅವರು ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ನೆರೆಯ ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂಬುದಾಗಿ ಪ್ರಕಟಿಸಿದ್ದಾರೆ. ಲಂಕಾದಲ್ಲಿ ಚೀನಾ ಪರ ಮಾರ್ಕ್ಸ್‌ವಾದಿಗಳು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಭಾರತದ ಜತೆಗಿನ ಸಂಬಂಧ ಹಳಸಬಹುದು ಎಂಬ ಆತಂಕವು ಈ ಪ್ರವಾಸದ ಘೋಷಣೆಯೊಂದಿಗೆ ಇಲ್ಲವಾಗಿದೆ.
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ದಾಖಲಿಸಿ ಅಧಿಕಾರ ಹಿಡಿದವರು ಮೊದಲಿಗೆ ಭಾರತಕ್ಕೆ ಭೇಟಿ ನೀಡುವ ರಾಜತಾಂತ್ರಿಕ ಸಂಪ್ರದಾಯವಿದೆ. ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪವರ್‌ನ (ಎನ್‌ಪಿಪಿ) ಪ್ರಮುಖ ಘಟಕವಾದ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ) ದಶಕಗಳಿಂದ ತನ್ನ ದೇಶದ ಭಾರತ ವಿರೋಧಿ ಭಾವನೆಗಳನ್ನು ಹೊಂದಿದ್ದ ಕಾರಣ ದಿಸ್ಸಾನಾಯಕೆ ಅವರು ಈ ಸಂಪ್ರದಾಯಕ್ಕೆ ತಿಲಾಂಜಲಿ ನೀಡಬಹುದು ಎಂದು ನಂಬಲಾಗಿತ್ತು. ಆದಕ್ಕೆ ಅವರು ಆಸ್ಪದ ಕೊಡದೇ ನವ ದೆಹಲಿ ವಿಮಾನ ಏರುವುದಾಗಿ ತಿಳಿಸಿದ್ದಾರೆ.
ಸಿದ್ಧಾಂತವನ್ನುಮೀರಿದ ರಾಜಕೀಯ
ಇಲ್ಲಿ ಸಿದ್ದಾಂತಕ್ಕಿಂತ ಮಿಗಿಲಾಗಿ ಲಂಕಾ ನಾಯಕರ ರಾಜಕೀಯ ಗೆಲುವಿನ ಅಭೀಕ್ಷೆಯಿದೆ ಎಂಬುದು ನಿಶ್ಚಿತ. ಕಳೆದ 10 ತಿಂಗಳಲ್ಲಿ ಭಾರತದ ನಾಯಕ ಎರಡನೇ ಸಲ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಹಾಗೂ ಭಾರತೀಯ ನೇತಾರರ ಜತೆ ಮಾತುಕತೆ ನಡೆಸುವ ಉತ್ಸಾಹ ಹೊಂದಿದ್ದಾರೆ. ಲಂಕಾದ ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ ಅದನ್ನು ಮೇಲಕ್ಕೆತ್ತಲು ಭಾರತ ಸರ್ಕಾರ ಹಾಗೂ ಖಾಸಗಿ ಉದ್ಯಮಿಗಳ ನೆರವು ಅವರಿಗೆ ಬೇಕಾಗಿದೆ.
ಶ್ರೀಲಂಕಾದಲ್ಲಿನ ನಾಗರಿಕರ ಭಾವನೆಗಳನ್ನು ಸಮಪರ್ಕವಾಗಿ ಗ್ರಹಿಸಿದ್ದ ಭಾರತ ಕಳೆದ , ಭಾರತವು ಫೆಬ್ರವರಿಯಲ್ಲಿ ದಿಸ್ಸಾನಾಯಕೆ ಮತ್ತು ಅವರ ಸಹೋದ್ಯೋಗಿಗಳಿಗೆ ಆತಿಥ್ಯ ನೀಡಿತ್ತು. ಈ ವೇಳೆ ದಿಸ್ಸಾನಾಯಕೆ ಅಧ್ಯಕ್ಷರಾಗುತ್ತಾರೆ ಮತ್ತು ನಂತರ ಸಂಸತ್ತಿನಲ್ಲಿ ಭರ್ಜರಿ ಗೆಲುವು ಸಾಧಿಸುತ್ತಾರೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ಈ ಭೇಟಿ ಎಡಪಂಥೀಯ ಎನ್‌ಪಿಪಿಯಲ್ಲಿ ಉತ್ಸಾಹ ತುಂಬಿದ್ದಂತೂ ನಿಜ .
ಹಾಗಾದ ಮಾತ್ರಕ್ಕೆ ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧದ ಮರು ಹೊಂದಿಕೆಯ ಪ್ರಯತ್ನವಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.
ಕೊಲಂಬೋದ ಹೊಸ ಆಡಳಿತಗಾರ ಯುವ, ಆದರ್ಶವಾದಿ, ಸಿಂಹಳೀಯ ರಾಷ್ಟ್ರೀಯವಾದಿ. ಮಾರ್ಕ್ಸ್‌ವಾದಿ ಉಡುಗೆಯಲ್ಲಿರುವ ದಿಸ್ಸಾನಾಯಕೆ ಅವರು,. ಇದುವರೆಗೆ ಲಂಕಾವನ್ನು ಆಳಿದ ಗಣ್ಯವರ್ಗದಿಂದ ಪ್ರತ್ಯೇಕವಾಗಿದ್ದವರು. ಹೀಗಾಗಿ ಭಾರತ ಅವರ ವಿಚಾರದಲ್ಲಿ ಸಂವೇದನಾಶೀಲವಾಗಿರುತ್ತದೆ.
ಶ್ರೀಲಂಕಾ ತಮಿಳರ ವಿಷಯದಲ್ಲಿ ಭಾರತೀಯ ಆಡಳಿತವು ತನ್ನ ನಿಲುವನ್ನು ಬದಲಾಯಿಸಬೇಕಾಗುತ್ತದೆ. ಯಾಕೆಂದರೆ, ಮಾರ್ಕ್ಸ್‌ವಾದಿ ಅಧಿಕಾರಕ್ಕೆ ಬಂದಿರುವುದು ಅಚ್ಚರಿಯಾದರೆ, ಬಹುಸಂಖ್ಯಾತ ಸಿಂಹಳೀಯರ ಗಣನೀಯ ಬೆಂಬಲ ಪಡೆದಿರುವುದು ಇನ್ನೊಂದು ವಿಶೇಷ. ಹೀಗೆ ದ್ವೀಪರಾಷ್ಟ್ರದಲ್ಲಿ ಒಂದಕ್ಕಿಂತ ಹೆಚ್ಚು ಕಾರಣಗಳಿಂದಾಗಿ ಅತ್ಯಂತ ಅನಿರೀಕ್ಷಿತ ಘಟನೆ ಸಂಭವಿಸಿದೆ.
ತಮಿಳರು ಎನ್‌ಪಿಪಿಗೆ ವೋಟ್ ಕೊಟ್ಟಿದ್ದು ಯಾಕೆ?
2009ರಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ನಿರ್ನಾಮಗೊಂಡ ಬಳಿಕ, ಸಾಮಾನ್ಯ ತಮಿಳರ ಪರ ಮಾತನಾಡುವ ಸಾಂಪ್ರದಾಯಿಕ ತಮಿಳು ರಾಜಕಾರಣಿಗಳಿಂದ ದೂರವಾಗುತ್ತಿದ್ದಾರೆ, ತುಳಿತಕ್ಕೊಳಗಾದ ಸಮುದಾಯದ ಆರ್ಥಿಕ ಸ್ಥಿತಿ ಸುಧಾರಿಸಲು ಯಾವುದೇ ಪ್ರಮುಖ ಕೆಲಸ ಆಗದಿರುವುದೇ ಅದಕ್ಕೆ ಕಾರಣ.
ಎಲ್‌ಟಿಟಿ ವಿರುದ್ಧದ ಯುದ್ಧದ ಸಮಯದಲ್ಲಿ ಸೇನೆಯು ತಮಿಳರಿಂದ ಕಸಿದುಕೊಂಡ ಭೂಮಿಯನ್ನು ನಿಜವಾದ ಮಾಲೀಕರಿಗೆ ಹಿಂದಿರುಗಿಸಲಾಗುವುದು ಎಂದು ದಿಸ್ಸಾನಾಯಕೆ ಚುನಾವಣಾ ರ್ಯಾಲಿಗಳಲ್ಲಿ ಭರವಸೆ ನೀಡಿದರು. ಈದು ತಮಿಳರ ದೀರ್ಘ ಕಾಲದ ಸಂಕಟವಾಗಿತ್ತು.
ಸ್ಥಿರ ಸರ್ಕಾರ ರಚಿಸಿದರೆ, ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾದ ಭಯೋತ್ಪಾದನಾ ತಡೆ ಕಾಯ್ದೆಯನ್ನು (ಪಿಟಿಎ) ರದ್ದುಗೊಳಿಸುವುದಾಗಿ ಮತ್ತು "ರಾಜಕೀಯ ಕೈದಿಗಳನ್ನು" ಬಿಡುಗಡೆ ಮಾಡುವುದಾಗಿ ಭರವಸೆ ದಿಸ್ಸಾನಾಯಕೆ ನೀಡಿದ್ದರು. ಇದು ಮಾಜಿ ಎಲ್‌ಟಿಟಿಇ ನಾಯಕರಿಗೆ ಅಪೇಕ್ಷಿತ ಬೇಡಿಕೆ .
ಸ್ಥಳೀಯ ಸಮುದಾಯಗಳಿಗೆ ಅಧಿಕಾರ ವಿಕೇಂದ್ರೀಕರಿಸುವುದೂ ಅವರ ಭರವಸೆಯಾಗಿತ್ತು. ತಮಿಳು ಪ್ರದೇಶಗಳಲ್ಲಿ ದೀರ್ಘಕಾಲದ ಬೇಡಿಕೆಯಾದ ಪ್ರಾಂತೀಯ ಕೌನ್ಸಿಲ್ ಚುನಾವಣೆ ನಡೆಸುವುದಾಗಿ ಅವರು ಭರವಸೆ ನೀಡಿದ್ದರು.
ತಮಿಳರ ಅಸ್ಮಿತೆ ಅಧ್ಯಕ್ಷರ ಭರವಸೆ
ಉತ್ತರದ ಜಾಫ್ನಾದ 11 ಚುನಾವಣಾ ವಿಭಾಗಗಳಲ್ಲಿ ಎಂಟರಲ್ಲಿ ಎನ್‌ಪಿಪಿ ಜಯಭೇರಿ ಬಾರಿಸಿದ್ದರೆ ಮತ್ತು ಪೂರ್ವದಲ್ಲಿ ಬಟ್ಟಿಕಲೋವಾ ಹೊರತುಪಡಿಸಿ ಇತರ ತಮಿಳು ಪ್ರದೇಶಗಳಲ್ಲಿ ಪ್ರಶಂಸನೀಯ ಪ್ರದರ್ಶನ ನೀಡಿದೆ. , ಅದಕ್ಕೆ ಕಾರಣ, ತಮ್ಮದೇ ನಾಯಕರಿಂದ ಬಳಲುತ್ತಿರುವ ಮತ್ತು ಬೇಸತ್ತಿರುವ ಅಪಾರ ಸಂಖ್ಯೆಯ ತಮಿಳರು. ತಮ್ಮಲ್ಲಿ ಒಬ್ಬರಂತೆ ಕಾಣುವ ದಿಸ್ಸಾನಾಯಕೆ ಶ್ರೀಲಂಕಾದ ರಾಜಕಾರಣಿಗಳಿಗಿಂತ ಭಿನ್ನ ಎಂದು ನಂಬಿದ್ದಾರೆ.
ತಮಿಳರ ಅಸ್ಮಿತೆ ಪ್ರಶ್ನೆಯ ಬಗ್ಗೆ ಭಾರತವು ಇನ್ನು ಮುಂದೆ ಶ್ರೀಲಂಕಾವನ್ನು ಒತ್ತಾಯಿಸಲು ಸಾಧ್ಯವಿಲ್ಲ. ನವೆಂಬರ್ 14ರ ಚುನಾವಣೆ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತಂದಿದೆ. ಮೊದಲ ಬಾರಿಗೆ ದ್ವೀಪದ ಎಲ್ಲಾ ಭಾಗಗಳಿಂದ ಮತ್ತು ಎಲ್ಲಾ ಸಮುದಾಯಗಳಿಂದ ಸಾಮೂಹಿಕ ಬೆಂಬಲ ಹೊಂದಿರುವ ನಾಯಕ ಹೊರಹೊಮ್ಮಿದ್ದಾರೆ. ಶ್ರೀಲಂಕಾದ ರಾಷ್ಟ್ರೀಯವಾದಿ ನಾಯಕರಿಗೆ ಭಾರತವು ಈ ಹಿಂದೆ ಆತಿಥ್ಯ ನೀಡಿದ್ದ ಮಾದರಿಯೂ ಕೊನೆಯಾಗಲಿದೆ.
ಭಾರತ ಸರ್ಕಾರದ ನಾಯಕರು ಮತ್ತು ರಾಜತಾಂತ್ರಿಕರು ತಮಿಳು ನಾಯಕರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಬಯಸಿದರೆ, ಎನ್‌ಪಿಪಿಗೆ ಬೆಂಬಲ ನೀಡಿದ ತಮಿಳರನ್ನು ಹೊರಗಿಡಲಾಗುವುದಿಲ್ಲ.
ಶ್ರೀಲಂಕಾದ ಜಲಪ್ರದೇಶದಲ್ಲಿ ಭಾರತೀಯ ತಮಿಳು ಮೀನುಗಾರರು ಪದೇ ಪದೇ ಬಂಧನಕ್ಕೆ ಒಳಗಾಗುತ್ತಿರುವುದು ದೀರ್ಘಕಾಲದ ಸಮಸ್ಯೆಯಾಗಿದೆ, ಇದು ಆಗಾಗ್ಗೆ ಬಂಧನಗಳು ಮತ್ತು ಸಾಂದರ್ಭಿಕ ಸಾವುಗಳಿಗೆ ಕಾರಣವಾಗುತ್ತದೆ. ಶ್ರೀಲಂಕಾದಲ್ಲಿರುವ ತಮಿಳರು, ಮುಸ್ಲಿಮರು ಮತ್ತು ಸಿಂಹಳೀಯರು ಈ ವಿಷಯದಲ್ಲಿ ಒಂದಾಗಿದ್ದಾರೆ. ದೃಢವಾದ ಕ್ರಮಗಳನ್ನು ತೆಗೆದುಕೊಳ್ಳದೆ ಭಾರತವು ವಿವಾದ ಮುಂದುವರಿಸುವುದಿಲ್ಲ.
2022 ರಲ್ಲಿ ಭಾರತದ ಆರ್ಥಿಕ ಸಹಾಯದಿಂದ ಮನೋಭಾವ ಬದಲಾವಣೆ
ದಶಕಗಳಿಂದ ಜೆವಿಪಿ (ಜನತಾ ವಿಮುಕ್ತಿ ಪೆರುಮನಾ) ಭಾರತ ವಿರೋಧಿ ಧೋರಣೆ ಹೊಂದಿತ್ತು . "ಭಾರತೀಯ ವಿಸ್ತರಣಾವಾದ"ದ ಬಗ್ಗೆ ಅದರ ಕಾರ್ಯಕರ್ತರು ಕೋಪ ಇಟ್ಟುಕೊಂಡಿದ್ದರು. 1987-89ರಲ್ಲಿ ಜೆವಿಪಿ ಮಾಡಿರುವ ದಂಗೆಯು ಶ್ರೀಲಂಕಾದ ಆಗಿನ ಸಂಯುಕ್ತ ಈಶಾನ್ಯ ಪ್ರಾಂತ್ಯದಲ್ಲಿ ಭಾರತೀಯ ಮಿಲಿಟರಿಯ ವಿರುದ್ಧವಾಗಿತ್ತು.
ಭಾರತದ ಬಗ್ಗೆ ಜೆವಿಪಿಯ ಮನೋಭಾವದಲ್ಲಿ ನಾಟಕೀಯ ಬದಲಾವಣೆಯನ್ನು ತಂದದ್ದು 2022 ರ ಶ್ರೀಲಂಕಾದ ಆರ್ಥಿಕ ಕುಸಿತ ಮತ್ತು ಭಾರತವು ಆ ದೇಶಕ್ಕೆ ನೀಡಿದ ಬೃಹತ್ ನೆರವು.
ಇಂದು ಎನ್‌ಪಿಪಿ ಹಿಂದಿನ ಜೆವಿಪಿ ಅಲ್ಲ. ಅದರ ಕಾರ್ಯಕರ್ತರು ಹೆಚ್ಚಾಗಿ ಗ್ರಾಮೀಣ ಸಿಂಹಳೀಯ ಪ್ರದೇಶಗಳಿಂದ ಬಂದವರು. ಎನ್‌ಪಿಪಿಯಾಗಿ ರೂಪುಗೊಂಡ ನಂತರ ಜೆವಿಪಿ ವೃತ್ತಿಪರರು ಮತ್ತು ಬುದ್ಧಿಜೀವಿಗಳು ಸೇರಿದಂತೆ ನಗರ ವರ್ಗಗಳಿಂದ ಹೆಚ್ಚಿನ ಸಂಖ್ಯೆಯ
ಜನರನ್ನು ಆಕರ್ಷಿಸಿದ ಜಾಗತಿಕ ವಾಸ್ತವಗಳು
ಯುವ ಸಮುದಾಯುವ ಎನ್‌ಪಿಪಿ ಮತ್ತು ಜೆವಿಪಿಯನ್ನು ಬೆಂಬಲಿಸಬಹುದು. ಆದರೆ ಹಿಂಸಾತ್ಮಕ ಕೃತ್ಯಕ್ಕೆ ಇಳಿಯುವುದಿಲ್ಲ. ಈ ವರ್ಗವು ಬಡವರಿಗೆ ಒಳಿತನ್ನು ಬಯಸುತ್ತಾರೆ. ವ್ಯಾಪಾರ ನಾಯಕರನ್ನು ವಿರೋಧಿಸುವುದಿಲ್ಲ. ಸೈದ್ಧಾಂತಿಕವಾಗಿ 1970 ರ ದಶಕಕ್ಕೆ ವ್ಯತಿರಿಕ್ತ ನೀತಿ. ಎನ್ಪಿಪಿಯ ಹೃದಯಭಾಗವಾಗಿರುವ ಜೆವಿಪಿ ನಾಯಕರು ಸಹ ತಮ್ಮ ಹಿಂದಿನ ವಿಶ್ವ ದೃಷ್ಟಿಕೋನ ಬದಲಾಯಿಸಿ ಹೊಸ ಜಾಗತಿಕ ವಾಸ್ತವಗಳಿಗೆ ದಾರಿ ಮಾಡಿಕೊಡಬೇಕು ಎಂದು ಅರ್ಥಮಾಡಿಕೊಂಡಿದ್ದಾರೆ.
ಮಾಲ್ಡೀವ್ಸ್‌ನ ಮೊಹಮ್ಮದ್ ಮುಯಿಝು ಭಾರತ ವಿರೋಧಿ ನಡೆಯ ಮೂಲಕ ಸಮಸ್ಯೆಗೆ ಸಿಲುಕಿದ್ದು ಲಂಕಾ ನಾಯಕರ ಕಣ್ಣ ಮುಂದಿದೆ. ಮಾಲ್ಡೀವ್ಸ್ ಬಯಸಿದ ಸಾಲವನ್ನು ಚೀನಾ ನೀಡುವುದಿಲ್ಲ ಎಂದು ಗೊತ್ತಾದ ಬಳಿಕ ಭಾರತದಿಂದ ಆರ್ಥಿಕ ಬೇಲ್‌ಔಟ್ ಪಡೆದುಕೊಂಡರು.
ತಮ್ಮ ಫೆಬ್ರವರಿ ಪ್ರವಾಸದ ಸಮಯದಲ್ಲಿ ಮತ್ತು ನಂತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ದಿಸ್ಸಾನಾಯಕೆ ಮತ್ತು ಅವರ ಸಹೋದ್ಯೋಗಿಗಳು ಹಿಂದೂ ಮಹಾಸಾಗರ ಸೇರಿದಂತೆ ಯಾವುದೇ ಚೀನಾ-ಭಾರತೀಯ ಜಗಳಗಳಿಂದ ದೂರವಿರಲು ಬಯಸಿರುವುದು ಸ್ಪಷ್ಟ.
ಶ್ರೀಲಂಕಾದಲ್ಲಿ ಹೆಚ್ಚು ತೀವ್ರಗಾಮಿ ಎಡಪಂಥೀಯರು ಇದ್ದಾರೆ ಎಂಬುದನ್ನು ಭಾರತೀಯ ನೀತಿ ನಿರೂಪಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ಹಿಂದೆ ಜೆವಿಪಿಯಲ್ಲಿದ್ದರು. ಅವರು ಚೀನಾವನ್ನು ಶ್ಲಾಘಿಸಲು ಮತ್ತು ಸಾಧ್ಯವಾದಾಗಲೆಲ್ಲಾ ಭಾರತವನ್ನು ಖಂಡಿಸಲು ಸಿದ್ಧರಿದ್ದಾರೆ. ಅವರು ಈಗಾಗಲೇ ವಿಜಯಶಾಲಿ ಎನ್‌ಪಿಪಿಗೆ ಬೇಡಿಕೆಗಳನ್ನು ಇಡಲು ಪ್ರಾರಂಭಿಸಿದ್ದಾರೆ.
ಒಂದು ವಿಷಯ ಖಚಿತ. ಡಿಸೆಂಬರ್‌ನಲ್ಲಿ ಅವರು ನವದೆಹಲಿಗೆ ಭೇಟಿ ನೀಡಿದಾಗ, ದಿಸ್ಸಾನಾಯಕೆ ಅವರು ಭಾರತೀಯ ಸೇನೆಯಿಂದ ಔಪಚಾರಿಕ ಗೌರವ ರಕ್ಷೆಯನ್ನು ಪಡೆಯಲಿದ್ದಾರೆ. ಆ ಸೇನೆಯು ಹೋರಾಟಗಾರರಿದ್ದ ಅವಧೀಯಲ್ಲಿ ಅವರಿಗೆ ಶತ್ರುವಾಗಿತ್ತು. ಲಂಕಾದಿಂದ ಈ ಸೇನೆಯನ್ನು ಅವ್ರು ಹೊರ ಹಾಕಲು ಬಯಸಿದ್ದರು. ದಿಸ್ಸಾನಾಯಕೆ ಅವರ ಪ್ರವಾಸವನ್ನು ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲದೆ ವಿಶ್ವದ ಪ್ರಮುಖ ರಾಜಧಾನಿಗಳಲ್ಲಿಯೂ ಸೂಕ್ಷ್ಮವಾಗಿ ಗಮನಿಸುತಿದ್ದಾರೆ.
(ಮೂಲ ಬರಹ The Federal ನಲ್ಲಿ ಪ್ರಕಟವಾಗಿದ್ದು, ಇದು ಅನುವಾದಿತ ಲೇಖನವಾಗಿದೆ)