ಬಾಂಗ್ಲಾ ದೇಶದ ಚುನಾವಣೆ ಭಾರತಕ್ಕೆ ಏಕೆ ಸವಾಲಾಗಲಿದೆ?

ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಚೀನಾದ ವೀಟೋ ಭಾರತದ ಬೆಂಬಲಕ್ಕಿಂತ ಹೆಚ್ಚು ಉಪಯುಕ್ತವಾಗಿರುವುದರಿಂದ, ಶೇಖ್ ಹಸೀನಾ ಅವರನ್ನು ಪ್ರಭಾವಿಸುವ ಭಾರತದ ಸಾಮರ್ಥ್ಯ ಕಡಿಮೆಯಾಗಿದೆ.

Update: 2024-02-05 06:30 GMT

ಬಾಂಗ್ಲಾ ದೇಶದ ಚುನಾವಣೆ ಭಾರತಕ್ಕೆ ಏಕೆ ಸವಾಲಾಗಲಿದೆ?

-ಸುಬೀರ್ ಭೌಮಿಕ್

ಭಾರತಕ್ಕೆ ಕೇವಲ ಎರಡು ಆಯ್ಕೆಗಳಿದ್ದು, ಅವಾಮಿ ಲೀಗ್ ಅಥವಾ ಬಿಎನ್‌ಪಿ-ಜಮಾತ್ ಒಕ್ಕೂಟದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಭಾರತದ ಕಾರ್ಯತಂತ್ರದ ಪಾಲುದಾರ ಅಮೆರಿಕ, ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಅನ್ನು ಅಧಿಕಾರದಿಂದ ಹೊರಹಾಕಲು ನಿರ್ಧರಿಸಿದೆ. . ಇದು ಢಾಕಾದಲ್ಲಿ ಇಸ್ಲಾಮಿಸ್ಟ್ ಒಕ್ಕೂಟ ಅಧಿಕಾರಕ್ಕೆ ಬರಲು ನೆರವಾಗಬಹುದು(ಫೈಲ್ ಫೋಟೋ)

ಬಾಂಗ್ಲಾ ಸಂಸತ್‌ ಚುನಾವಣೆ ಜನವರಿ 7 ರಂದು ನಡೆಯಲಿದ್ದು, ಆಡಳಿತಾರೂಢ ಅವಾಮಿ ಲೀಗ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ ಪಿ) ನಡುವೆ ಸ್ಪರ್ಧೆಯಿದೆ. ಪ್ರಮುಖ ಇಸ್ಲಾಮಿ ಪಕ್ಷವಾದ ಜಮಾತ್-ಎ-ಇಸ್ಲಾಮ್‌ನ ನೋಂದಣಿಯನ್ನು ಚುನಾವಣೆ ಆಯೋಗ ರದ್ದುಗೊಳಿಸಿತು. ವಕೀಲ ತಾನಿಯಾ ಅಮೀರ್ ಅವರ ಪುನಃಸ್ಥಾಪನೆ ಮನವಿ ತಿರಸ್ಕೃತವಾಯಿತು.

ನೋಂದಣಿ ರದ್ದು ಹೊರತಾಗಿಯೂ, ಜಮಾತ್ ಚುನಾವಣೆ ವೇಳೆ ಹಿಂಸಾಚಾರ ನಡೆಸಲು ನಾಲ್ಕು ಗುಂಪುಗಳನ್ನು (ಅಜಮ್ ಸ್ಕ್ವಾಡ್, ರಾವ್ಜನ್ ಸ್ಕ್ವಾಡ್, ಅಲ್ ಹಜರತ್ ಸ್ಕ್ವಾಡ್ ಮತ್ತು ಜಮಾತುಲ್ ಅನ್ಸಾರ್ ಫಿಲ್ ಹಿಂಡಾಲ್ ಶರ್ಕಿಯಾ) ಒಟ್ಟುಗೂಡಿಸಿದೆ ಎಂಬ ವದಂತಿ ಇದೆ. ಮತ್ತು, ಯುನೈಟೆಡ್ ಜಿಹಾದ್ ಕೌನ್ಸಿಲ್ ಅನ್ನು ರಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಬಾಂಗ್ಲಾದೇಶ ಮತ್ತು ಭಾರತದ ಗುಪ್ತಚರ ಅಧಿಕಾರಿಗಳು ಹೇಳುತ್ತಾರೆ. ಒಂದು ವೇಳೆ ಅವಾಮಿ ಲೀಗ್ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳುವಂಥ ಪರಿಸ್ಥಿತಿಯನ್ನು ಸೃಷ್ಟಿಸಿದರೆ, ಲೀಗ್ ಅನ್ನು ಹೊರಹಾಕಲು ಬಿಎನ್ಪಿ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಮುಂದಾಗಬೇಕಾಗುತ್ತದೆ.

ಭಾರತಕ್ಕೆ ಕೇವಲ ಎರಡು ಆಯ್ಕೆಗಳಿದ್ದು, ಅವಾಮಿ ಲೀಗ್ ಅಥವಾ ಬಿಎನ್‌ಪಿ-ಜಮಾತ್ ಒಕ್ಕೂಟ, ಆಯ್ಕೆಯ ಸಾಧ್ಯತೆಯನ್ನು ಸೀಮಿತಗೊಳಿಸುತ್ತದೆ. ಏಕೆಂದರೆ, ಅಮೆರಿಕ ಪ್ರಧಾನ ಮಂತ್ರಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನ್ನುಅಧಿಕಾರದಿಂದ ಇಳಿಸಲು ನಿರ್ಧರಿಸಿದೆ. ಆಗ ದಿಲ್ಲಿಗೆ ಢಾಕಾದಲ್ಲಿ ಇಸ್ಲಾಮಿಸ್ಟ್ ಒಕ್ಕೂಟದ ಸಾಧ್ಯತೆ ಮಾತ್ರ ಉಳಿಯುತ್ತದೆ.

ಅಟಲ್ ಬಿಹಾರಿ ವಾಜಪೇಯಿ ಅವರ ಬಿಜೆಪಿ ಸರ್ಕಾರ ಬಿಎನ್ಪಿ-ಜಮಾತ್ ಒಕ್ಕೂಟವನ್ನು ಬೆಂಬಲಿಸಿತು ಮತ್ತು ಆರು ವರ್ಷಗಳ ಹಿಂದೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ( RAW)ದ ಕಾರ್ಯಾಚರಣೆ ಮೂಲಕ ತನ್ನ ಸರ್ಕಾರವನ್ನು ಉರುಳಿಸಿತು ಎಂದು ಹಸೀನಾ ಆರೋಪಿಸಿದರು. ಖಲೀದಾ ಜಿಯಾ (2001 ಜೊತೆಗಿನ ಭಾರತದ ಅನುಭವ ಹೇಳಿಕೊಳ್ಳುವಂತೆ ಇರಲಿಲ್ಲ. ಬಾಂಗ್ಲಾದೇಶ ಮೂಲದ ಇಸ್ಲಾಮಿಸ್ಟ್ ಮೂಲಭೂತವಾದಿಗಳು ಅಥವಾ ಜನಾಂಗೀಯ ಪ್ರತ್ಯೇಕತಾವಾದಿಗಳು ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ನಡೆಸಿದ ದಾಳಿಗಳಿಂದ ಭಾರತ ಅಸಂತುಷ್ಟಗೊಂಡಿತ್ತು.

ಭಾರತದ ಕಳವಳ

ಹಸೀನಾ ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯಕ್ಕೆ ಸಂಪರ್ಕಿಸಲು ಸಹಾಯ ಮಾಡುವ ಮಾರ್ಗಗಳ ಸಮಸ್ಯೆ ಗಳನ್ನು ಭಯೋತ್ಪಾದನೆ ನಿಗ್ರಹ ಮತ್ತು ಸಾರಿಗೆ ಹಾಗೂ ಹಡಗು ಸಂಚಾರ ಒಪ್ಪಂದಗಳ ಮೂಲಕ ಬಗೆಹರಿಸಿದ್ದಾರೆ. ಆದರೆ, ಭಾರತ ಸರ್ಕಾರ ನದಿ ನೀರು ಹಂಚಿಕೆ ಒಪ್ಪಂದಗಳನ್ನು ಇತ್ಯರ್ಥಗೊಳಿಸುವಲ್ಲಿ ವಿಫಲವಾಗಿದ್ದರಿಂದ ಮತ್ತು ಬಲಪಂಥೀಯ ಹಿಂದುತ್ವ ಪಕ್ಷದಿಂದ ಅಂತರವನ್ನು ಕಾಯ್ದುಕೊಳ್ಳಲು ನಿರ್ಧರಿಸಿದ್ದರಿಂದ ಅವರು ದೂರವನ್ನು ಕಾಯ್ದುಕೊಳ್ಳಲು ನಿರ್ಧರಿಸಿದರು.

ಆದ್ದರಿಂದ, ಭಾರತ ಬಿಎನ್ಪಿ ಪರ ವಹಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರೂ, ಹಸೀನಾ ಅವರ ಸಲಹೆಗಾರ ಸಲ್ಮಾನ್ ಎಫ್. ರೆಹಮಾನ್ ಮತ್ತು ಮಾಹಿತಿ ಸಚಿವ ಹಸನ್ ಮಹಮೂದ್ ನೇತೃತ್ವದಲ್ಲಿ ಅವಾಮಿ ಲೀಗ್‌ ಮೇಲೆ ಹಿಡಿತ ಸಾಧಿಸಲು ಹಸೀನಾ ವಿಫಲವಾಗಿರುವುದು ಭಾರತದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಇಬ್ಬರು ಪಕ್ಷದಲ್ಲಿ ಗರಿಷ್ಠ ಚುನಾವಣಾ ನಾಮನಿರ್ದೇಶನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಮೂಲಕ 1971 ರ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತದ ಪರ ವ್ಯಕ್ತಿಗಳನ್ನು ನಿವಾರಿಸಿದ್ದಾರೆ.

ಸಲ್ಮಾನ್ ರೆಹಮಾನ್‌ರ ಬೆಕ್ಸಿಮೊ ಮತ್ತು ಮಸೂದ್‌ನ ಎಸ್. ಆಲಂ ಗುಂಪಿನಿಂದ ಬೆಂಬಲಿತ , ಅನಾಮಧೇಯ ಸಲಾವುದ್ದೀನ್ ಚುಪ್ಪು ಅನ್ನು ಭಾರತ ಬೆಂಬಲಿತ ವಿಮೋಚನಾ ಯುದ್ಧದ ಅನುಭವಿ ಮತ್ತು ಮಾಜಿ ಕೈಗಾರಿಕಾ ಸಚಿವ ಅಮೀರ್ ಹೊಸೈನ್ ಅಮು ಬದಲು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಒಂದು ಉದಾಹರಣೆ.

ಇತ್ತೀಚೆಗೆ ಪಕ್ಷದ ಟಿಕೆಟ್ ಪಡೆದ 300 ಅವಾಮಿ ಲೀಗ್ ಅಭ್ಯರ್ಥಿಗಳಲ್ಲಿ ಸುಮಾರು 69 ಮಂದಿ ಜಮಾತ್‌ನಂತಹ ಇಸ್ಲಾಮಿಸ್ಟ್ ಪಕ್ಷಗಳಲ್ಲಿ ಸಕ್ರಿಯರಾಗಿದ್ದ ಇತಿಹಾಸ ಹೊಂದಿದ್ದಾರೆ ಮತ್ತು 48 ಮಂದಿ ಚೀನಾದೊಂದಿಗೆ ವ್ಯಾಪಾರ ಸಂಪರ್ಕವಿರುವ ಉದ್ಯಮಿಗಳಾಗಿದ್ದಾರೆ.

ರೆಹಮಾನ್ ಅವರ ವರ್ಚಸ್ಸು

ಢಾಕಾದಲ್ಲಿ ಹಬ್ಬಿರುವ ಸುದ್ದಿ ಏನೆಂದರೆ, ಚುನಾಯಿತರಾಗಬಹುದಾದ ಈ ಗುಂಪು ಸಲ್ಮಾನ್ ರೆಹಮಾನ್ ಅವರನ್ನು ಉಪಪ್ರಧಾನಿಯಾಗಿ ಮತ್ತು ಎಲ್ಲಾ ಪ್ರಮುಖ ಸಚಿವಾಲಯಗಳಲ್ಲಿ ಅವರ ಆಪ್ತರನ್ನು ಕೂರಿಸುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗ್ಲೋಬಲ್ ಎಕನಾಮಿಕ್ ಪಾಲಿಸಿ ಫೋರಂನಲ್ಲಿ ಹಣಕಾಸು ಸಚಿವ ಮೊಸ್ತಫಾ ʻಲೋಟಸ್ʼ ಕಮಲ್ ಬದಲಾಗಿ ರೆಹಮಾನ್ ಪಾಲ್ಗೊಂಡಿದ್ದು ಇದರ ಮುನ್ಸೂಚನೆ.

ಪಕ್ಷದ ಮಾಹಿತಿ ಪ್ರಕಾರ, ರೆಹಮಾನ್ ಅವರು ಪ್ರಧಾನ ಮಂತ್ರಿ ಹಸೀನಾ ಅವರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ ಮತ್ತು ಅವರನ್ನು ನಿಜವಾದ ಪ್ರಧಾನ ಮಂತ್ರಿ ಎಂದು ಕರೆಯಲಾಗುತ್ತದೆ. ಏಕೆಂದರೆ, ಪ್ರಧಾನ ಮಂತ್ರಿ ಪುತ್ರ ಸಾಜೀದ್ ವಾಜಿದ್ ಜಾಯ್ ಅವರೊಟ್ಟಿಗೆ ರೆಹಮಾನ್‌ ವ್ಯಾಪಾರ ಪಾಲುದಾರಿಕೆ ಹೊಂದಿದ್ದಾರೆ. ಅವರ ಕಂಪನಿ ಬೆಕ್ಸಿಮ್ಕೊ ಮತ್ತು ಅದರ ಅಂಗಸಂಸ್ಥೆಗಳು ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸಲು ಜಾಹೀರಾತುಗಳನ್ನು ನೀಡಿದವು.

ಬಾಂಗ್ಲಾದ ವ್ಯಾಪಾರ ವಲಯ ಹೇಳುವಂತೆ, ಅದಾನಿಗಳೊಂದಿಗೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಹಸೀನಾ ದೆಹಲಿಯಲ್ಲಿ ಅಧಿಕಾರ ಹಿಡಿದವರನ್ನು ತೃಪ್ತಿಪಡಿಸಿರಬಹುದು. ಆದರೆ, ಭಾರತದ ರಾಷ್ಟ್ರೀಯ ಸುರಕ್ಷತೆ ಮತ್ತು ರಾಜತಾಂತ್ರಿಕ ಸಂಸ್ಥೆಗಳು ವಿಶ್ವಾಸಾರ್ಹ ಮಿತ್ರನೊಬ್ಬ ಚೀನಾ ಕಡೆಗೆ ವಾಲುತ್ತಿರುವುದನ್ನು ಕಂಡು ಚಿಂತೆಗೊಳಗಾಗಿದ್ದಾರೆ. ಅಮೆರಿಕದ ಒತ್ತಡವನ್ನು ತಡೆಯಲು ಮತ್ತು ಇಸ್ಲಾಮಿಸ್ಟ್‌ ಗಳನ್ನು ದೂರವಿಡಲು ಬಾಂಗ್ಲಾ ದೇಶವು ಚೀನಾದ ಕಡೆಗೆ ವಾಲುತ್ತಿದೆ.

ಇಕ್ಕಟ್ಟಿನಲ್ಲಿ ಸಿಲುಕಿರುವ ಭಾರತವು ಹಸೀನಾ ಅವರಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶೀಯರಲ್ಲಿ ಜನಪ್ರಿಯತೆಯನ್ನು ಕಳೆದುಕೊಂಡಿದೆ. 2013-2014 ಮತ್ತು 2018-2019 ರಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆಸದೆ ಇದ್ದುದಕೆ ಮತ್ತು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಗೆ ಜನ ಹಸೀನಾ ಅವರನ್ನು ದೂಷಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಹಸೀನಾ ಅವರ ಆದ್ಯತೆಗಳಲ್ಲಿ ಹೊಸ ದೆಹಲಿಯು ಅಂಚಿಗೆ ಸರಿದಿದೆ.

ಭಾರತದ ನೆರಳು

ಹಸೀನಾ ಅವರ ಮೇಲೆ ಪ್ರಭಾವ ಬೀರುವ ಭಾರತದ ಸಾಮರ್ಥ್ಯ ಕಡಿಮೆಯಾಗಿದೆ. ಏಕೆಂದರೆ, ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಚೀನಾದ ವೀಟೊ ಭಾರತೀಯ ಬೆಂಬಲಕ್ಕಿಂತ ಹೆಚ್ಚು ಉಪಯುಕ್ತ ಎಂದು ಹಸೀನಾ ಭಾವಿಸಿದ್ದಾರೆ.

ಸಿಖ್ ಕಾರ್ಯಕರ್ತ ಗುರುಪತ್‌ವಂತ್ ಸಿಂಗ್ ಅವರ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ನವದೆಹಲಿ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ. ಹಸೀನಾ ಅವರ ಮೇಲೆ ಪ್ರಭಾವ ಬೀರುವ ಹೊಸ ದೆಹಲಿಯ ಸಾಮರ್ಥ್ಯವು ಅವಾಮಿ ಲೀಗ್‌ ಮೇಲೆ ಭಾರತದ ಪ್ರಭಾವಕ್ಕೆ ನೇರವಾಗಿ ಸಂಬಂಧಿಸಿದೆ. ಢಾಕಾದಲ್ಲಿ ಭಾರತದ ಪರ ಇರುವವರನ್ನು ಕ್ರಮೇಣ ನಿವಾರಿಸಲಾಗಿದೆ; ಹಸೀನಾ ಅವರ ಸಂಪುಟದಲ್ಲಿ ಭಾರತವಿರೋಧಿ ನಡೆಗಳನ್ನು ತಡೆಯಲು ಕಡಿಮೆ ಜನ ಇದ್ದಾರೆ. ಉದಾಹರಣೆಗೆ, ಬಾಂಗ್ಲಾದೇಶದ ಟೆಲಿಕಾಂ ಕ್ಷೇತ್ರಕ್ಕೆ ಚೀನಾದ ನುಗ್ಗುವಿಕೆ ಮತ್ತು ಮೂಲಸೌಕರ್ಯ (ಟೀಸ್ತಾ ನದಿಯಲ್ಲಿ ಚೀನಾದಿಂದ ಆರ್ಥಿಕ ಬೆಂಬಲ ಪಡೆದ ಯೋಜನೆಗಳು) ಕ್ಷೇತ್ರದಲ್ಲಿನ ಯೋಜನೆಗಳು ಭಾರತದ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ.

ಹಸೀನಾ ಅವರನ್ನು ಕೆಳಗಿಳಿಸಲು ಬೀದಿ ಆಂದೋಲನಗಳನ್ನು ತೀವ್ರಗೊಳಿಸಲು ಅಮೆರಿಕ ಇಸ್ಲಾಮಿಸ್ಟ್ ಒಕ್ಕೂಟವನ್ನು ಬೆಂಬಲಿಸುತ್ತಿದೆ ಮತ್ತು ಹಸೀನಾ ಅವರನ್ನು ಕೆಳಗಿಳಿಸುವಂತೆ ಭಾರತದ ಮೇಲೆ ಒತ್ತಡ ಹಾಕುತ್ತಿದೆ. ದೆಹಲಿ ಮತ್ತು ಢಾಕಾ ಎರಡೂ ಆತಂಕ ಮತ್ತು ಗೊಂದಲದಲ್ಲಿ ಸಿಲುಕಿದ್ದು, ಯುದ್ಧದಲ್ಲಿ ವಾಷಿಂಗ್ಟನ್‌ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದೆ. ಬೀಜಿಂಗ್ ಮತ್ತು ದೆಹಲಿ ಎರಡೂ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸುತ್ತಿವೆ ಮತ್ತು ಪ್ರಮುಖ ಪ್ರಾದೇಶಿಕ ಸಮಸ್ಯೆಗೆ ಸಂಬಂಧಿಸಿದಂತೆ ಒಂದೇ ಕಡೆ ಸಿಕ್ಕಿಕೊಂಡಿವೆ.

(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯ ಲೇಖಕರದ್ದು ಮತ್ತು ಅವು ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ)


Similar News