ನೇತನ್ಯಾಹು ಮತ್ತೊಂದು ಯುದ್ಧ ಆರಂಭಿಸದಂತೆ ಗಾಜಾ-ಇರಾನ್‌ನ ಸ್ನೇಹಿತರು ಒತ್ತಾಯಿಸಬೇಕು

ಸಂಘರ್ಷದಿಂದ ಸಂಕಷ್ಟಕ್ಕೀಡಾಗಿರುವ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಬೇಕಿದೆ

By :  T K Arun
Update: 2024-04-15 12:52 GMT
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಮಹಿಳೆಯರು, ಗಾಜಾ ಪಟ್ಟಿಯಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು

ಏಪ್ರಿಲ್ 2 ರಂದು ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನಿನ ರಾಯಭಾರ ಕಚೇರಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ ಮಾಡಿದ್ದು,ಪ್ರತಿದಾಳಿ ನಡೆಸದಂತೆ ಪಶ್ಚಿಮದ ದೇಶಗಳು ತೆಹ್ರಾನ್‌ನ್ನು ಒತ್ತಾಯಿಸುತ್ತಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಮಾರಣಾಂತಿಕ ಸಂಘರ್ಷದಲ್ಲಿ ಟೆಹ್ರಾನ್ ಮತ್ತೊಂದು ಆಯಾಮವನ್ನು ಸೃಷ್ಟಿಸಬಾರದು ಎಂದು ಇರಾನಿನ ಶತ್ರುಗಳು ಮಾತ್ರವಲ್ಲದೆ, ಅದರ ಸಾಂಪ್ರದಾಯಿಕ ಸ್ನೇಹಿತರು ಕೂಡ ಹೇಳಬೇಕಿದೆ. ಇಂತಹ ದಾಳಿ ಇಕ್ಕಟ್ಟಿನಲ್ಲಿರುವ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಪ್ರಚೋದಿಸುತ್ತದೆ. ಗಾಜಾದ ಜನರ ಹಿತಾಸಕ್ತಿ ಮತ್ತು ನೇತನ್ಯಾಹು ಸಿಲುಕಿಕೊಂಡಿರುವ ಇಕ್ಕಟ್ಟಿನಿಂದ ಹೊರಬರಲು ಅವಕಾಶ ನೀಡಲು ಇರಾನ್, ಸಿರಿಯಾದ ರಾಯಭಾರಿ ಕಟ್ಟಡದ ಮೇಲಿನ ದಾಳಿಗೆ ಪ್ರತಿಯಾಗಿ ಯಾವುದೇ ಪ್ರತೀಕಾರ ತೆಗೆದುಕೊಳ್ಳುವುದನ್ನು ಮುಂದೂಡಬೇಕಿದೆ.

ನೇತನ್ಯಾಹು ಮೇಲೆ ಒತ್ತಡ: 

ಬೆಂಜಮಿನ್ ನೇತನ್ಯಾಹು ಗಾಜಾದಲ್ಲಿ ನಡೆದ 21 ವಾರಗಳ ವಿವೇಚನಾರಹಿತ ಹತ್ಯೆ ನಂತರ ಹಮಾಸ್ ಸೆರೆಯಲ್ಲಿರುವ ಒತ್ತೆಯಾಳುಗಳ ಸಂಬಂಧಿಕರು, ಅವರ ಜಾಗತಿಕ ಮಿತ್ರರಲ್ಲದೆ ತಮ್ಮ ಬಲಪಂಥೀಯ ಒಕ್ಕೂಟದ ಮಿತ್ರರಿಂದ ಅಪಾರ ಒತ್ತಡಕ್ಕೆ ಒಳಗಾಗಿದ್ದಾರೆ. ಅವರ ಬಲಪಂಥೀಯ ಸಮ್ಮಿಶ್ರ ಪಾಲುದಾರರಿಗೆ ಗಾಜಾದಲ್ಲಿ ಯುದ್ಧ ಮುಂದುವರಿಸುವುದು ಬೇಡ; ಬದಲಾಗಿ, ಪಶ್ಚಿಮ ದಂಡೆಗೆ ವಿಸ್ತರಿಸಿ, ತೆರವಾದ ಜಾಗವನ್ನು ಯಹೂದಿ ವಸಾಹತುಗಾರರಿಂದ ತುಂಬಲು ಬಯಸುತ್ತಾರೆ. ಉಳಿದವರು ನೇತನ್ಯಾಹು ಹತ್ಯೆಯನ್ನು ನಿಲ್ಲಿಸಿ, ಮಾತುಕತೆ ನಡೆಸಬೇಕೆಂದು ಬಯಸುತ್ತಾರೆ.

ಯುದ್ಧ ಮುಗಿದ ತಕ್ಷಣ, ನೇತನ್ಯಾಹು ಅಧಿಕಾರ ಕೂಡ ಅಂತ್ಯಗೊಳ್ಳಲಿದೆ. ನೆಸ್ಸೆಟ್ ಅಂಗೀಕರಿಸಿದ ಕಾನೂನಿನಿಂದಾಗಿ ಅವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವುದಲ್ಲದೆ, ಜನರ ದಂಗೆಯನ್ನು ಎದುರಿಸಬೇಕಿದೆ. ಇದರಿಂದಾಗಿ, ನೇತನ್ಯಾಹು ಸಂಘರ್ಷವನ್ನು ವಿಸ್ತರಿಸಲು ಮತ್ತು ದಿನಗಳನ್ನು ಮುಂದೂಡಲು ಆಸಕ್ತರಾಗಿದ್ದಾರೆ. 

ಇಸ್ರೇಲಿನ ನಿಕಟ ಮಿತ್ರರಾಷ್ಟ್ರಗಳಾದ ಯುಎಸ್ ಮತ್ತು ಬ್ರಿಟನ್, ಪ್ರಮುಖ ಯುರೋಪಿಯನ್ ಶಕ್ತಿಗಳಾದ ಜರ್ಮನಿ ಮತ್ತು ಫ್ರಾನ್ಸ್ ಕೂಡ ಗಾಜಾದಲ್ಲಿ ನಡೆಯುತ್ತಿರುವ ಹತ್ಯೆಯನ್ನು ನಿಲ್ಲಿಸಲು ನೇತನ್ಯಾಹು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಪ್ಯಾಲೆಸ್ತೀನಿಯನ್ನರಿಗೆ ಊಟ ವಿತರಿಸುವ ಅಮೆರಿಕದ ಸರ್ಕಾರೇತರ ಸಂಸ್ಥೆ, ವರ್ಲ್ಡ್ ಸೆಂಟ್ರಲ್ ಕಿಚನ್ ಮೇಲೆ ಇಸ್ರೇಲಿ ಪಡೆಗಳು ಬಾಂಬ್ ದಾಳಿ ಮಾಡಿ, ಏಳು ಸ್ವಯಂಸೇವಕರನ್ನು ಕೊಂದ ನಂತರ ಒತ್ತಡ ಹೆಚ್ಚಾಗಿದೆ.

ಅಮೆರಿಕದಿಂದ ಮರುಚಿಂತನೆ: ದಕ್ಷಿಣದ ಪಟ್ಟಣ ರಫಾದ ಮೇಲೆ ದಾಳಿ ಮಾಡುವ ಪ್ರಸ್ತಾಪವನ್ನು ನೇತನ್ಯಾಹು ಮುಂದುವರಿಸಿದರೆ, ಇಸ್ರೇಲಿಗೆ ಬೇಷರತ್‌ ಬೆಂಬಲವನ್ನು ಪುನರ್ವಿಮರ್ಶಿಸಬೇಕಾಗುತ್ತದೆ ಎಂದು ಬಿಡೆನ್ ಆಡಳಿತ ಸುಳಿವು ನೀಡಿದೆ.

ಡಮಾಸ್ಕಸ್‌ನಲ್ಲಿಇರಾನಿನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಹಿರಿಯ ಅಧಿಕಾರಿಯನ್ನು ಕೊಂದ ಘಟನೆಗೆ ಪ್ರತೀಕಾರವಾಗಿ ಇರಾನ್‌ ಪ್ರತಿದಾಳಿ ನಡೆಸಲಿದೆ ಎಂದು ಅಮೆರಿಕನ್ ಗುಪ್ತಚರ ಪಡೆಗಳು ಹೇಳಿವೆ. ಇದು ನೇತನ್ಯಾಹುಗೆ ವಿಮೋಚನೆ ನೀಡಲಿದೆ. ಇರಾನ್‌ ದಾಳಿ ನಡೆಸಿದಲ್ಲಿ ಅಮೆರಿಕ ಮತ್ತು ಯುರೋಪ್ ಮತ್ತೊಮ್ಮೆ ಇಸ್ರೇಲನ್ನು ಬೆಂಬಲಿಸುತ್ತದೆ. ಜಗತ್ತಿನ ಗಮನ ಇಸ್ಲಾಮಿಸ್ಟ್ ಆಡಳಿತ, ಮಹಿಳೆಯರ ದಮನ ನೀತಿ ಮತ್ತು ಪ್ರಪಂಚದಾದ್ಯಂತದ ಉಗ್ರಗಾಮಿಗಳಿಗೆ ಬೆಂಬಲದೆಡೆಗೆ ಹರಿಯುತ್ತದೆ. ಗಾಜಾದಲ್ಲಿ ಇಸ್ರೇಲಿನ ಮಿತಿಮೀರಿದ ಅನಾಚಾರದ ಬಗ್ಗೆ ಜಗತ್ತು ಆತಂಕ ವ್ಯಕ್ತಪಡಿಸುವ ಮತ್ತು ನೇತನ್ಯಾಹು ಆಡಳಿತವನ್ನು ಪ್ರತ್ಯೇಕಿಸುವ ಬದಲು, ಟೆಹ್ರಾನ್‌ನಲ್ಲಿ ಮುಲ್ಲಾಗಳ ಆಡಳಿತ ಪ್ರತಿನಿಧಿಸುವ ಇಸ್ಲಾಮಿಸ್ಟ್ ಬೆದರಿಕೆ ವಿರುದ್ಧ ಜಗತ್ತು ಇಸ್ರೇಲ್‌ನೊಂದಿಗೆ ಒಗ್ಗೂಡುತ್ತದೆ.

ಇಸ್ರೇಲಿಗೆ ತಮ್ಮ ಸರ್ಕಾರಗಳ ಬೆಂಬಲ ಮತ್ತು ಶಸ್ತ್ರಾಸ್ತ್ರ ಪೂರೈಕೆ ಅಂತ್ಯಗೊಳ್ಳಬೇಕೆಂದು ಹೇಳುವ ಉದಾರವಾದಿಗಳು, ಸಲ್ಮಾನ್ ರಶ್ದಿಯನ್ನು ಕೊಲ್ಲಲು ನೀಡಿದ ಫತ್ವಾ ಮತ್ತು ಅವರ ಮೇಲಿನ ಹಲ್ಲೆಯನ್ನು ಸ್ಮರಿಸಿಕೊಳ್ಳುತ್ತಾರೆ ಮತ್ತು ಮಧ್ಯಪ್ರಾಚ್ಯದ ಸಂಘರ್ಷದ ಸಂಕೀರ್ಣತೆಯಿಂದ ಹಿಂದೆ ಸರಿಯುತ್ತಾರೆ. ಅವರು ಪ್ಯಾಲೆಸ್ತೀನಿಯನ್ನರನ್ನು ಕೈ ಬಿಡುತ್ತಾರೆ. ಪ್ಯಾಲೆಸ್ತೀನಿಯನ್ನರು ತಾಯ್ನಾಡಿನಿಂದ ಸ್ಥಳಾಂತರಗೊಂಡು, ಮೃಗಾಲಯದಲ್ಲಿರುವ ಪ್ರಾಣಿಗಳಂತೆ ಬದುಕುತ್ತಿರುವುದನ್ನು ಮತ್ತು ಯಾವಾಗ ಬೇಕಾದರೆ ಆಗ ಬಾಂಬ್‌ ದಾಳಿ ಇಲ್ಲವೇ ಮಷಿನ್‌ ಗನ್ನುಗಳಿಗೆ ಬಲಿಯಾಗುತ್ತಾರೆ ಎಂಬುದನ್ನು ಕಡೆಗಣಿಸಿ, ಇಸ್ಲಾಮಿಸ್ಟ್‌ ಮತೀಯವಾದಕ್ಕೆ ಹೇವರಿಕೆಯಡೆಗೆ ತಿರುಗುತ್ತದೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷಕ್ಕೆ ಇರುವ ಪರಿಹಾರ ಒಂದೇ- ಪ್ಯಾಲೆಸ್ಟೀನಿಯನ್ನರು ಮತ್ತು ಇಸ್ರೇಲಿಗಳು ಸಹಬಾಳ್ವೆ ಮತ್ತು ಪರಸ್ಪರ ಗೌರವದಲ್ಲಿ ಒಟ್ಟಿಗೆ ವಾಸಿಸುವ ಜಾತ್ಯತೀತ ಪ್ರಜಾಪ್ರಭುತ್ವ ರಾಜ್ಯದ ರಚನೆ. ಇಸ್ರೇಲಿಗೊಂದು ಮತ್ತು ಪ್ಯಾಲೆಸ್ಟೈನಿಗೊಂದು ಪ್ರತ್ಯೇಕ ರಾಜ್ಯ ಇರುವ ವ್ಯವಸ್ಥೆ ಹೆಚ್ಚು ಪ್ರಾಯೋಗಿಕ, ಮಧ್ಯಂತರ ಪರಿಹಾರವಾಗಿರಲಿದೆ.

ಓಸ್ಲೋ ಒಪ್ಪಂದ ಮತ್ತು ಓಸ್ಲೋ ಶಾಂತಿ ಪ್ರಕ್ರಿಯೆ ಕೂಡ ಇದನ್ನು ಅಂಗೀಕರಿಸಿದೆ. ಇಸ್ರೇಲಿನ ಪ್ರಧಾನಿ ಯಿಟ್ಜಾಕ್ ರಾಬಿನ್ ಅವರ ಹತ್ಯೆ ಹೊರತಾಗಿಯೂ, ಯಾವುದೇ ರಾಜಕೀಯ ಪರಿಹಾರದ ಅಗತ್ಯವಿಲ್ಲದೆ, 1993 ರಲ್ಲಿ ಪಿಎಲ್‌ಒ(ಪ್ಯಾಲೇಸ್ಟಿನಿಯನ್ ಲಿಬರೇಶನ್ ಆರ್ಗನೈಸೇಶನ್‌) ಒಂದಿಗೆ ಎರಡು ರಾಜ್ಯಗಳ ರಚನೆಗೆ ಸಹಿ ಹಾಕಿದರು.

ಪಿಎಲ್‌ಒ ವಿರುದ್ಧ ಹಮಾಸ್ ಎತ್ತಿಕಟ್ಟುವಿಕೆ: ಇಸ್ರೇಲ್‌ನ ನಾಯಕರಾಗಿ ನೇತನ್ಯಾಹು ಅವರ ಸಾಧನೆಗಳಲ್ಲಿ ಒಂದು- ಎರಡು ರಾಜ್ಯದ ರಚನೆ ಪರಿಹಾರವನ್ನು ಕಾರ್ಯಸೂಚಿಯಿಂದಲೇ ಸಂಪೂರ್ಣವಾಗಿ ತೆಗೆದುಹಾಕಿರುವುದು. ಮೊದಲಿಗೆ, ಜಾತ್ಯತೀತ ಪಿಎಲ್‌ಒ ಬದಲು ಇಸ್ಲಾಮಿಕ್‌ ಪ್ರತಿಸ್ಪರ್ಧಿ ಹಮಾಸ್‌ಗೆ ಬೆಂಬಲ ಮತ್ತು ಪ್ಯಾಲೇಸ್ಟಿನಿಯನ್ನರ ದಂಗೆಯನ್ನು ಬಲಪ್ರಯೋಗದಿಂದ ಹತ್ತಿಕ್ಕಿರುವುದು. ಈಮೂಲಕ ಯಾವುದೇ ರಾಜಕೀಯ ಪರಿಹಾರದ ಅಗತ್ಯ ವಿಲ್ಲದೆ ಸೈನ್ಯದ ಬಲದಿಂದ ಪ್ಯಾಲೆಸ್ಟೈನ್ ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ಅಭಿಪ್ರಾಯವನ್ನು ಸೃಷ್ಟಿಸುವುದು.

ಪ್ಯಾಲೆಸ್ತೀನ್ ರಾಜ್ಯವನ್ನು ರಚಿಸದೆ ಶಾಶ್ವತ ಶಾಂತಿ ಸಾಧ್ಯವಿಲ್ಲ ಎಂಬ ಅಂಶವನ್ನು ಅಕ್ಟೋಬರ್ 7 ರ ದಾಳಿ ಸಾಬೀತುಪಡಿಸಿದೆ. ಈ ಅಂಶ ಕ್ಕೆ ಈಗ ವ್ಯಾಪಕ ಅಂತಾರಾಷ್ಟ್ರೀಯ ಬೆಂಬಲವಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇತರ ದೇಶಗಳನ್ನುಒಳಗೊಳ್ಳುವ ಯುದ್ಧವು ಎರಡು ರಾಜ್ಯ ಪರಿಹಾರದ ಕಡೆಗೆ ಪ್ರಗತಿಯನ್ನು ಹಳಿತಪ್ಪಿಸುತ್ತದೆ.

ಗಾಜಾ ಯುದ್ಧದಿಂದಾದ ತೈಲ ಬೆಲೆ ಹೆಚ್ಚಳದಿಂದ ಪ್ಯಾಲೇಸ್ಟಿನಿಯನ್ನರು ಮತ್ತು ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆ ಕುಂಠಿತಗೊಂಡಿದೆ. ಇರಾನ್ ತನ್ನ ಪ್ರತೀಕಾರ ತೀರಿಸಿಕೊಳ್ಳುವ ಭಾವನೆಯನ್ನು ನಿಯಂತ್ರಿಸಿಕೊಳ್ಳಬೇಕಿದೆ. ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಮತ್ತೊಂದು ಯುದ್ಧವನ್ನು ಆರಂಭಿಸುವ ಸಮಯ ಇದಲ್ಲ.

Tags:    

Similar News